ಬಿಗ್ಬಾಸ್ (Bigg Boss) ವಾರದ ಪಂಚಾಯಿತಿಯಲ್ಲಿ ಕಿಚ್ಚನ ಖಡಕ್ ಕ್ಲಾಸ್ ಒಳಗೊಂಡ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ವಾರದ ಪಂಚಾಯಿತಿಯಲ್ಲಿ ಕಿಚ್ಚ ಗರಂ ಆಗಿ ಮಹಾಕವಿ ಮಂಜನ ಅತಿರೇಕದ ನಡವಳಿಕೆ ಹಾಗೂ ನಿಯಮ ಉಲ್ಲಂಘನೆಗಳ ವಿರುದ್ಧ ಕಿಚ್ಚ ಸುದೀಪ್ ನೇರ ಅಸಮಾಧಾನ ಹೊರಹಾಕಿದ್ದಾರೆ. ಮನೆಯೊಳಗೆ ಅತಿಯಾದ ಹಸ್ತಕ್ಷೇಪ, ಅತಿರೇಕದ ಮಾತು ಮತ್ತು ಇತರರನ್ನು ಕೀಳಾಗಿ ಕಂಡ ವರ್ತನೆಗೆ ಚುರುಕು ಮುಟ್ಟಿಸಿದ ಸುದೀಪ್, ಮನರಂಜನೆಯ ನೆಪದಲ್ಲಿ ಮಿತಿ ಮೀರದಂತೆ ಎಚ್ಚರಿಸಿದ್ದಾರೆ. ಇದನ್ನೂ ಓದಿ: ವೆಟ್ಟುವಮ್ ಸಿನಿಮಾಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ
ಇದು ತಪ್ಪು ಮಾಡಿದವರಿಗೆ ದಂಡನೆ…!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo pic.twitter.com/Pjpk34SyBf
— Colors Kannada (@ColorsKannada) September 19, 2026
ಟಾಸ್ಕ್ ನೆಪದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಗುಂಪುಗಾರಿಕೆ ಪ್ರದರ್ಶಿಸಿದ ‘ಅಗ್ನಿ ಬಾಯ್ಸ್’ ತಂಡವನ್ನು ಸುದೀಪ್ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಪರ್ಧೆಯ ಹೆಸರಿನಲ್ಲಿ ದಬ್ಬಾಳಿಕೆ ಅಥವಾ ವೈಯಕ್ತಿಕ ದ್ವೇಷ ಸಾಧಿಸುವುದು ಬಿಗ್ ಬಾಸ್ ನಿಯಮಗಳಿಗೆ ವಿರುದ್ಧ ಎಂದು ಕಿಚ್ಚ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಗುಂಪು ಕಟ್ಟಿಕೊಂಡು ಇತರರನ್ನು ಟಾರ್ಗೆಟ್ ಮಾಡುವುದನ್ನು ಬಿಟ್ಟು, ಪ್ರತಿಯೊಬ್ಬರೂ ಸ್ವಂತ ಸಾಮರ್ಥ್ಯದ ಮೇಲೆ ಆಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಮಾಡರ್ನ್ ಮಹಾಕವಿ ಮಂಜ ಸೇರಿ ಮನೆಮಂದಿಗೆ ಚಳಿ ಬಿಡಿಸಿದ ಕಿಚ್ಚ

