ಹಿಂದೂ ಜಾಗರಣ ವೇದಿಕೆ ಇದೇ ಮೊದಲ ಬಾರಿಗೆ ಹಿಂದೂ ಮಹಾಗಣಪತಿ ಸ್ಥಾಪಿಸಿ ಬೃಹತ್ ಮೆರವಣಿಗೆ ನಡೆಸಿತು. ಟಿ.ನರಸೀಪುರ ಲಿಂಕ್ ರಸ್ತೆಯಲ್ಲೇ ಸಾಗಿದ ಬೃಹತ್ ಶೋಭಾಯಾತ್ರೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಿಂದೂ ಮುಖಂಡರು ಭಾಗಿಯಾಗಿದ್ದರು. ಇದನ್ನೂ ಓದಿ: ಪಿಜಿ ಡೆಂಟಲ್ 2ನೇ ಸುತ್ತಿನ ಕೌನ್ಸೆಲಿಂಗ್ ಸೆ.19ರಿಂದ ಆರಂಭ: KEA
ಶೋಭಾಯಾತ್ರೆ ಮೆರವಣಿಗೆಯಲ್ಲಿ ಹಿಂದೂ ಮಹಾಗಣಪತಿ ಜೊತೆಗೆ ಪಟ್ಟಣದ ಇತರ ಗಣಪತಿಗಳು ಭಾಗಿಯಾಗಿದ್ದವು. ಡೊಳ್ಳು, ನಗಾರಿ ಸೇರಿ ಜನಪದ ಕಲಾತಂಡಗಳ ಕಲಾವೈಭವ ನೆರೆದಿದ್ದವರನ್ನ ಸೆಳೆಯಿತು. ಟಿ.ನರಸೀಪುರ ಪಟ್ಟಣದ ಪ್ರಮುಖ ರಾಜಬೀದಿಗಳು, ವೃತ್ತಗಳು ಹಾಗೂ ಸೂಕ್ಷ್ಮ ಬಡಾವಣೆಗಳ ಮೂಲಕ ಶೋಭಾಯಾತ್ರೆ ಸಾಗಿತು.
ಶೋಭಾಯಾತ್ರೆ ಹಿನ್ನೆಲೆಯಲ್ಲಿ ಪೊಲೀಸರ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿಭದ್ರತೆ ಕೈಗೊಂಡಿದ್ದರು. ಇತ್ತ, ಶೋಭಾಯಾತ್ರೆ ವಿರುದ್ಧ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಥಯಾತ್ರೆ ನಡೆಸಿತು.ಇದನ್ನೂ ಓದಿ: ಭಾರತೀಯ ವಾಯುಪಡೆಗೆ ಹೆಚ್‌ಎಎಲ್‌ನ ಸ್ವದೇಶಿ ಬಲ – ತರಬೇತಿ ಯುದ್ಧ ವಿಮಾನಗಳ ಹಸ್ತಾಂತರ

