ನಿಸ್ಶಿನ್: ಏಷ್ಯಾನ್ ಕ್ರೀಡಾಕೂಟದ ಕ್ರಿಕೆಟ್‌ನಲ್ಲಿ(Asian Games Women’s Cricket Competition) ಭಾರತೀಯ ಮಹಿಳೆಯರು ಶುಭಾರಂಭ ಮಾಡಿದ್ದಾರೆ. ಜಪಾನ್(Japan) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಜಪಾನ್ 19.5 ಓವರ್‌ಗಳಲ್ಲಿ 57 ರನ್‌ಗಳಿಗೆ ಆಲೌಟ್ ಆಯ್ತು. ಸುಲಭದ ಮೊತ್ತವನ್ನು ಬೆನ್ನಟ್ಟಿದ ಭಾರತ (India) 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 59 ರನ್ ಹೊಡೆದು ಜಯ ಸಾಧಿಸಿತು.
DOUBLE TROUBLE 💥
Sree Charani picks up Iwasaki and Yanagida in consecutive deliveries to leave Japan two down! 👊
Catch India vs Japan at the Asian Games, LIVE NOW on Sony Sports Network & Sony LIV.#SonySportsNetwork #SonyLIV #AsianGames #AichiNagoya2026… pic.twitter.com/42uGqnLpXd
— Sony Sports Network (@SonySportsNetwk) September 18, 2026
ಭಾರತದ ಪರ ಶಫಾಲಿ ವರ್ಮಾ ಔಟಾಗದೇ 40 ರನ್(15 ಎಸೆತ, 6 ಬೌಂಡರಿ, 2 ಸಿಕ್ಸ್) ಹೊಡೆದರೆ ರಿಚಾ ಘೋಷ್ ಔಟಾಗದೇ 12 ರನ್ ಹೊಡೆದರು. ಕಮಲಿನಿ 0, ಭಾರತಿ ಫುಲ್ಮಾಲಿ 6 ರನ್ ಹೊಡೆದು ವಿಕೆಟ್ ಒಪ್ಪಿಸಿದರು.
Just India’s fav all-rounder doing what she does best ⚡
Watch India vs Japan, LIVE NOW on Sony Sports Network & Sony LIV.#SonySportsNetwork #SonyLIV #AsianGames #AichiNagoya2026 #BaarBaarBharatHarBaarBharat pic.twitter.com/nGBCeHgMrC
— Sony Sports Network (@SonySportsNetwk) September 18, 2026
ಜಪಾನ್ ಆರಂಭ ಉತ್ತಮವಾಗಿತ್ತು. ಹರುನ ಇವಾಸಕಿ 10 ರನ್, ಅಯಾಕ ಕ್ಯಾಟೊ-ಸ್ಟಾಫರ್ಡ್ 25 ರನ್ ಹೊಡೆದರು. ವಿಕೆಟ್ ನಷ್ಟವಿಲ್ಲದೇ 24 ರನ್‌ಗಳಿಸಿದ್ದ ಜಪಾನ್ ನಂತರ 23 ರನ್‌ಗಳಿಗೆ 10 ವಿಕೆಟ್ ಕಳೆದುಕೊಳ್ಳುವ ಮೂಲಕ 57 ರನ್‌ಗಳಿಗೆ ಆಲೌಟ್ ಆಯ್ತು.
ಶ್ರೀ ಚರಣಿ 4 ವಿಕೆಟ್ ಕಿತ್ತರೆ, ಶಫಾಲಿ ವರ್ಮಾ 2 ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ್, ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಕಬಳಿಸಿದರು.

