ವಾಷಿಗ್ಟನ್: ಅಮೆರಿಕದ ಮಿಚಿಗನ್ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್ಗೆ (Texas Air National Guard) ಸೇರಿದ F-16 ಯುದ್ಧವಿಮಾನ ಪತನಗೊಂಡಿದೆ. ಅದೃಷ್ಟವಶಾತ್ ಪೈಲಟ್ (Pilot) ಸಮಯಕ್ಕೆ ಸರಿಯಾಗಿ ಹೊರಕ್ಕೆ ಜಿಗಿದು (ಎಜೆಕ್ಟ್) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
149ನೇ ಫೈಟರ್ ವಿಂಗ್ಗೆ ನಿಯೋಜಿಸಲಾಗಿದ್ದ ಎಫ್-16 ಫೈಟಿಂಗ್ ಫಾಲ್ಕನ್ ವಿಮಾನವು (F-16 Fighting Falcon Jet) ಟ್ರಾವರ್ಸ್ ಸಿಟಿ ಸಮೀಪದ ಪ್ರದೇಶದಲ್ಲಿ ದೈನಂದಿನ ತರಬೇತಿ ವೇಳೆ ಪತನಗೊಂಡಿದೆ ಎಂದು ಘಟಕವು ತನ್ನ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿದೆ.
✈️ F-16 fighter jet crashes during training exercise in northern Michigan, pilot in stable condition
The plane was participating in training exercises at a National Guard Base in Alpena, Michigan.The crash was in Blair Township, which is southwest of Traverse City in Grand… pic.twitter.com/hofaE3qXqE
— Steve Gruber (@stevegrubershow) September 17, 2026
ಪೈಲಟ್ ಸುರಕ್ಷಿತ ಎಜೆಕ್ಟ್
ಇನ್ನೂ ಘಟನೆ ವೇಳೆ ಪೈಲಟ್ ವಿಮಾನದಿಂದ ಸುರಕ್ಷಿತವಾಗಿ ಹೊರಕ್ಕೆ ಜಿಗಿದಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಅವಘಡದಲ್ಲಿ ಪೈಲಟ್ಗೆ ಗಾಯಗಳಾಗಿರುವ ಸಾಧ್ಯತೆಯಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು 149ನೇ ಫೈಟರ್ ವಿಂಗ್ ಘಟಕ ತಿಳಿಸಿದೆ. ಆದ್ರೆ ಪೈಲಟ್ನ ಗುರುತು ಹಾಗೂ ಘಟನೆಯ ಇತರ ವಿವರಗಳನ್ನ ಅಧಿಕಾರಿಗಳು ತಕ್ಷಣ ಬಹಿರಂಗಪಡಿಸಿಲ್ಲ. ಮಿಲಿಟರಿ ನೀತಿಯ ಹಿನ್ನೆಲೆಯಲ್ಲಿ ಈ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಇತ್ತ, ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಎಮರ್ಜೆನ್ಸಿ ಮ್ಯಾನೇಜ್ಮೆಂಟ್, ವಿಮಾನ ಪತನದ ಹಿನ್ನೆಲೆ ಸ್ಥಳದಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದೆ.
ದೊಡ್ಡ ಸ್ಫೋಟದ ಸದ್ದು; ಆಕಾಶದಲ್ಲಿ ದಟ್ಟ ಹೊಗೆ
ವಿಮಾನ ಪತನಗೊಂಡ ಕೆಲವೇ ಕ್ಷಣಗಳಲ್ಲಿ ಸ್ಥಳೀಯ ನಿವಾಸಿಗಳು ಭಾರೀ ಸ್ಫೋಟದ ಶಬ್ದ ಕೇಳಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಚಿತ್ರಗಳು ಹಾಗೂ ವಿಡಿಯೊಗಳಲ್ಲಿ ಮುಗಿಲೆತ್ತರಕ್ಕೆ ದಟ್ಟ ಹೊಗೆ ಚಿಮ್ಮಿರುವುದು ಕಂಡುಬಂದಿದೆ.

F-16 ಜೆಟ್ ಪತನ ಇದೇ ಮೊದಲಲ್ಲ
ಅಮೆರಿಕದ ಸೇನೆ 1979 ರಿಂದ F-16 ಯುದ್ಧವಿಮಾನಗಳನ್ನ ಕಾರ್ಯಾಚರಣೆಗೆ ಬಳಸುತ್ತಿದೆ. ಏರ್ ಫೋರ್ಸ್ ಸೇಫ್ಟಿ ಸೆಂಟರ್ ಮಾಹಿತಿಯ ಪ್ರಕಾರ, 2000ನೇ ಇಸವಿಯಿಂದ ಈವರೆಗೆ F-16 ವಿಮಾನಗಳಿಗೆ ಸಂಬಂಧಿಸಿದ ಕನಿಷ್ಠ 14 ʻClass A mishapʼ (ದೊಡ್ಡ ಪ್ರಮಾಣದಲ್ಲಿ ವಿಮಾನ ಪತನವಾದಾಗ) ದಾಖಲಾಗಿವೆ.
ʻClass A mishapʼ ಎಂಬ ವರ್ಗೀಕರಣವನ್ನ ಸಾಮಾನ್ಯವಾಗಿ ವಿಮಾನ ಅಪಘಾತದಿಂದ 2 ದಶಲಕ್ಷ ಡಾಲರ್ಗಿಂತ ಹೆಚ್ಚಿನ ಹಾನಿ ಉಂಟಾದಾಗ, ವಿಮಾನ ಸಂಪೂರ್ಣ ನಾಶವಾದಾಗ ಅಥವಾ ಸೇನಾ ಸಿಬ್ಬಂದಿಯೊಬ್ಬರು ಮೃತಪಟ್ಟಾಗ ಬಳಸಲಾಗುತ್ತದೆ.

