ಬೆಂಗಳೂರು: ಕುಮಾರಸ್ವಾಮಿ (HD Kumaraswamy) ಹಳ್ಳಿ ಗುಗ್ಗು ಎಂಬ ಹೇಳಿಕೆಯನ್ನ ಮತ್ತೊಮ್ಮೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ನಾನು ಆಡಿದ್ದು ಆಡು ಭಾಷೆ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ.
ಜೆಡಿಎಸ್ನಿಂದ (JDS) ಅಭಿಯಾನ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಅವರು ಅಭಿಯಾನ ಮಾಡಲಿ. ನನಗೆ ದಲಿತ ಬಲಿತಾ ಅಂದಾಗ ಯಾರು ಯಾಕೆ ಕೇಳಿಲ್ಲ. ನಾನು ಹೇಳಿದ್ದು ಅವರು ಕೇಳೋ ಪ್ರಶ್ನೆ, ಅವರ ಹೇಳಿಕೆ ಹಳ್ಳಿಗುಗ್ಗು ಕೂಡಾ ಕೇಳಲ್ಲ ಅಂತ. ಸಿಎಂ ಆದವರು, ಕೇಂದ್ರ ಸಚಿವರು ಮೂರ್ಖರ ತರಹ ಮಾತಾಡಿದ್ರು ಹೇಗೆ ಅಂತ ಕೇಳಿದೆ. ನಾವು ಹಳ್ಳಿಗುಗ್ಗು ಏನಿವಾಗ ಅಭಿಯಾನ ಮಾಡಲಿ. ಗುಗ್ಗು ಗುಗ್ಗುನೇ. ಗುಗ್ಗು ಎಲ್ಲೇ ಇದ್ದರೂ ಗುಗ್ಗುನೇ. ಹಳ್ಳಿಯಾದ್ರು ಅಷ್ಟೆ, ನಗರ ಆದ್ರು ಗುಗ್ಗುನೇ ನಿಮ್ಮ ಮೂರ್ಖತನ ಪ್ರದರ್ಶನ ಮಾಡಬೇಡಿ ಎಂದರು. ಇದನ್ನೂ ಓದಿ: ವಿಜಯಲಕ್ಷ್ಮಿ–ಧನ್ವೀರ್ ಜಟಾಪಟಿ ಕೇಸ್ – ನ.12ಕ್ಕೆ ವಿಚಾರಣೆಗೆ ಹಾಜರಾಗುವಂತೆ ಧನ್ವೀರ್ಗೆ ಸೂಚನೆ
ಕುಮಾರಸ್ವಾಮಿಗೆ ಅಧಿಕಾರದ ಇದ್ದಾಗ ಹಳ್ಳಿ ನೆನಪು ಆಗಲ್ಲ. ಅಧಿಕಾರ ಇದ್ದಾಗ ತಾಜ್ ವೆಸ್ಟ್ಂಡ್, ಅಧಿಕಾರ ಇಲ್ಲದೇ ಇದ್ದಾಗ ಹಳ್ಳಿ ನೆನಪು ಆಗುತ್ತದೆಯಾ? ಅಧಿಕಾರ ಇಲ್ಲದೇ ಇದ್ದಾಗ ಹಳ್ಳಿಗೆ ಹೋಗಿ ಕಣ್ಣೀರು ಸುರಿಸೋದಾ? ಮಣ್ಣಿನ ಮಕ್ಕಳು ಅಂದು ಬೆಂಗಳೂರಿನಲ್ಲಿ ಎಷ್ಟು ಇದೆ ರಿಯಲ್ ಎಸ್ಟೇಟ್ ನಿಮ್ದು? ಬೇರೆ ಬೇರೆ ಜಿಲ್ಲೆಯಲ್ಲಿ ಇದೆ. ಯಾವುದಕ್ಕೋ ಯಾವುದೋ ಹೋಲಿಕೆ ಮಾಡೋದಲ್ಲ. ಸ್ಟಿಂಗ್ ಪ್ರಕರಣದಲ್ಲಿ ಎಷ್ಟು ಪ್ರಶ್ನೆ ಮಾಡ್ತೀರಾ, ಅಷ್ಟೇ ನೀವು ಸಿಕ್ಕಿ ಹಾಕಿಕೊಳ್ತೀರಾ ಅಂತ ಹೇಳಿದ್ದೆ. ಈಗ ಡಿವಿಯೇಟ್ ಮಾಡಲು ಹೋಗುತ್ತಿದ್ದಾರೆ. ದಲಿತ-ಬಲಿತಾ ಅಂದಿದ್ದಕ್ಕೆ ಕ್ಷಮೆ ಕೇಳಿದ್ರಾ? ಹಳ್ಳಿಗುಗ್ಗು ಆಡುಭಾಷೆಯಲ್ಲಿ ಹೇಳೋದು ಅಲ್ಲವಾ ಅಂತ ತಮ್ಮ ಹೇಳಿಕೆ ಮತ್ತೆ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಬೀದಿಯಲ್ಲಿ ಗಲಾಟೆ ಬಿಟ್ಟು ಸಂಸತ್ತಿಗೆ ಬನ್ನಿ: ರಾಗಾ ಚರ್ಚೆಯ ಸವಾಲಿಗೆ ಅಮಿತ್ ಶಾ ತಿರುಗೇಟು
ನಾನು ಹಳ್ಳಿಯವರಿಗೆ ಅಪಮಾನ ಮಾಡಿಲ್ಲ. ನಾನು ಎಲ್ಲಿಂದ ಬರ್ತೀನಿ. ನನ್ನದು ಬೆಂಗಳೂರಾ ಕ್ಷೇತ್ರ? ಸಮಸ್ಯೆ ಮಾಡಲು ಮಾಡುತ್ತಿದ್ದಾರೆ. ಕೆಲಸ ಇಲ್ಲ ಮಾಡಲಿ ಬಿಡಿ. ಕೇಂದ್ರ ಸಚಿವರು ಇದನ್ನು ದೊಡ್ಡ ವಿಚಾರ ಮಾಡುತ್ತಾರೆ ಅಂದರೆ ಮಾಡಲಿ ಬಿಡಿ. ನಾನು ಹೇಳಿದ್ದು ಆಡು ಭಾಷೆ. ಮೊದಲು ಅವರು ಹೇಳಿದ್ದಕ್ಕೆ ವಿಷಾದ ಕೇಳಲಿ, ಕ್ಷಮೆ ಕೇಳಲ್ಲ ಎಂದರು. ಇದನ್ನೂ ಓದಿ: ಗದಗ | ʻವೋಟ್ ಬಚಾವೋ, ದೇಶ್ ಬಚಾವೋʼ ಅಭಿಯಾನಕ್ಕೆ ಕಾಂಗ್ರೆಸ್ ರಣಕಹಳೆ
