– ಸಂವಿಧಾನ ರಕ್ಷಣಾ ಸಮಿತಿಯಿಂದ ʻಸಂವಿಧಾನ ರಕ್ಷಣಾ ಸೌಹಾರ್ದ ರಥಯಾತ್ರೆʼಗೆ ಸಿದ್ಧತೆ
ಮೈಸೂರು: ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಹಾಕಿದ ಧಮ್ಕಿಗೆ ಉತ್ತರವಾಗಿ ಶುಕ್ರವಾರ (ಸೆ.18) ಹಿಂದೂ ಜಾಗರಣಾ ವೇದಿಕೆ ಟಿ. ನರಸೀಪುರದಲ್ಲಿ ಬೃಹತ್ ಶೋಭಯಾತ್ರೆ ನಡೆಸಲಿದೆ.
ಟಿ. ನರಸೀಪುರ ಪಟ್ಟಣ ಇದೀಗ ಕೇಸರಿಮಯವಾಗ್ತಿದೆ. ಹಿಂದೂ ಜಾಗರಣಾ ವೇದಿಕೆ ಕರಪತ್ರಗಳನ್ನ ಮುದ್ರಿಸಿದ್ದು, ಅದರಲ್ಲಿ ಪೊಲೀಸ್ ಅಧಿಕಾರಿಯ ದರ್ಪಕ್ಕೆ ಉತ್ತರ ಕೊಡೋಣಾ ಬನ್ನಿ ಎಂದು ಜನರನ್ನ ಆಹ್ವಾನಿಸಲಾಗಿದೆ. ಮಸೀದಿ ಇರುವ ರಸ್ತೆಯನ್ನೆ ಕೇಸರಿಮಯ ಮಾಡಿ ಅದೇ ರಸ್ತೆಯಲ್ಲಿ ಶೋಭಯಾತ್ರೆ ನಡೆಸಲು ಸಿದ್ಧತೆ ನಡೆದಿದೆ. ಶುಕ್ರವಾರ ಸಂಜೆ 4 ಗಂಟೆಗೆ ಶೋಭಾಯಾತ್ರೆ ಶುರುವಾಗಲಿದೆ. ಮಸೀದಿ ಮುಂದೆಯೇ ಈ ಯಾತ್ರೆ ಸಾಗಲಿದೆ.
ಶೋಭಾಯಾತ್ರೆ ಸಿದ್ಧತೆ ಬೆನ್ನಲ್ಲೇ ಇದಕ್ಕೆ ಕೌಂಟರ್ ಆಗಿ ಸಂವಿಧಾನ ರಕ್ಷಣಾ ಸಮಿತಿ ಅವರು ಸಂವಿಧಾನ ರಕ್ಷಣಾ ಸೌಹಾರ್ದ ರಥ ಯಾತ್ರೆ ನಡೆಸಲು ನಿರ್ಧರಿಸಿದೆ. ಶೋಭಾಯಾತ್ರೆ ಹೋಗುವ ರಸ್ತೆಯಲ್ಲೆ ಸೌಹಾರ್ದ ರಥ ಯಾತ್ರೆ ನಡೆಸಲು ಅನುಮತಿ ಕೊಡಿ ಎಂದು ಪೊಲೀಸ್ ಇಲಾಖೆಗೆ ಪತ್ರ ಸಲ್ಲಿಸಿದ್ದಾರೆ. ಆದರೆ ಈ ರಥ ಯಾತ್ರೆಗೆ ಪೊಲೀಸರು ಇನ್ನೂ ಅನುಮತಿ ನೀಡಿಲ್ಲ.
ಈ ನಡುವೆ ಇನ್ಸೆಪೆಕ್ಟರ್ ಹೇಳಿದ ಮಾತಿನ ವಿಡಿಯೋವನ್ನ ರೆಕಾರ್ಡ್ ಮಾಡಿ ಪ್ರಸಾರ ಮಾಡಿದ್ದ ಟಿ. ನರಸೀಪುರದ ಸ್ಥಳೀಯ ವಾಹಿನಿಯ ಮುಖ್ಯಸ್ಥನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಮಾಜದ ಶಾಂತಿಗೆ ಭಂಗ ತರುವ ರೀತಿ ವೀಡಿಯೋ ಎಡಿಟ್ ಮಾಡಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಾನು ಯಾವುದೇ ವೀಡಿಯೋ ತಿರುಚಿಲ್ಲ. ಇನ್ಸೆಪೆಕ್ಟರ್ ಧನಂಜಯ ಹೇಳಿದ್ದನ್ನೇ ಯಥಾವತ್ ವೀಡಿಯೋ ಹಾಕಿದ್ದೇನೆ ಎಂದು ಮಂಜುನಾಥ್ ಹೇಳಿದ್ದಾರೆ.
ಇತ್ತ ಉತ್ತರ ಕನ್ನಡದ ಭಟ್ಕಳದಲ್ಲಿ ನಿನ್ನೆ ರಾತ್ರಿ ಗಣೇಶ ಮೆರವಣಿಗೆ ಮೇಲೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಯುವಕರನ್ನು ಭಟ್ಕಳ ಶಹರ ಠಾಣೆ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಇನ್ನು ವಶಕ್ಕೆ ಪಡೆಯುತ್ತಿದ್ದಂತೆ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಯುವಕರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಗಣಪತಿ ಮೂರ್ತಿಗೆ ಕಲ್ಲೆಸದವರನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಭಟ್ಕಳದಲ್ಲಿ ಬಿಗುವಿನ ವಾತಾವರಣವಿದ್ದು ಹೆಚ್ಚುವರಿ ಪೊಲೀಸರು ಹಾಗೂ ಡಿ.ಆರ್ ತುಕಡಿ ನಿಯೋಜಿಸಲಾಗಿದೆ. ಮಂಗಳೂರಿನಲ್ಲಿ ಸಚಿವ ಯತೀಂದ್ರ ಬಿಜೆಪಿಯವರಿಗೆ ಕೋಮು ಗಲಭೆ ಮಾಡೋದೇ ಅವರ ಉದ್ದೇಶ ಎಂದು ಹರಿಹಾಯ್ದಿದ್ದಾರೆ.

