ಚಾಮರಾಜನಗರ: ಮರ ಉರುಳಿ ಬಿದ್ದು ಕಾಡಾನೆ ಮರಿ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ (Biligiri Rangana Hills) ಹುಲಿ ಸಂರಕ್ಷಿತ ಅರಣ್ಯದ ಪುಣಜನೂರು ವಲಯದಲ್ಲಿ ನಡೆದಿದೆ.
ಮರಿಯಾನೆ ಮೇಲೆ ಬಿದ್ದಿದ್ದ ಮರವನ್ನು ಅರಣ್ಯ ಸಿಬ್ಬಂದಿ (Forest Department) ಜೆಸಿಬಿ ಮೂಲಕ ತೆರವುಗೊಳಿಸಿದ್ದು, ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲು ಯತ್ನಿಸುತ್ತಿದ್ದಾರೆ. ಆದರೆ ತಾಯಿಯಾನೆ ಮರಿಯಾನೆಯನ್ನು ಬಿಟ್ಟು ಕದಲದ ಕಾರಣ ಚಿಕಿತ್ಸೆ ನೀಡಲು ಕಷ್ಟವಾಗಿದೆ. ಇದನ್ನೂ ಓದಿ: ಜೈಲಿನಲ್ಲಿ ಮೊಬೈಲ್ ಬಳಕೆ, ಪ್ರದೋಷ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಡಿ – ದರ್ಶನ್ ಅರ್ಜಿ
ತಾಯಿಯಾನೆಯನ್ನು ಎಷ್ಟೇ ಓಡಿಸಲು ಪ್ರಯತ್ನಪಟ್ಟರೂ ಕೂಡ ಪ್ರಯೋಜನವಾಗಲಿಲ್ಲ. ಇತ್ತ ಮರಿಯಾನೆ ಎದ್ದೇಳಲು ಸಾಧ್ಯವಾಗದೇ ಒದ್ದಾಟ ನಡೆಸಿದ್ದು, ಜೆಸಿಬಿ ಮೂಲಕ ಮರಿಯಾನೆಯನ್ನು ಎತ್ತಲು ಅರಣ್ಯ ಸಿಬ್ಬಂದಿ ಚಿಂತಿಸಿದ್ದು, ತಾಯಿಯಾನೆ ಜಾಗದಿಂದ ಹೋಗದ ಕಾರಣ ಚಿಕಿತ್ಸೆಗೆ ತೊಡಕಾಗಿದೆ.
ಮರಿಯಾನೆ ಮೇಲೆ ಮರ ಬಿದ್ದಿದ್ದು ಹೇಗೆ? ಎನ್ನುವ ಬಗ್ಗೆ ತಿಳಿದುಬಂದಿಲ್ಲ. ಇದನ್ನೂ ಓದಿ: ತ.ನಾಡಿಗೆ ಕಾವೇರಿ ಹರಿವನ್ನು 6ರಿಂದ 3 ಸಾವಿರಕ್ಕೆ ಇಳಿಸಲು CWMAಗೆ ಕರ್ನಾಟಕ ಮನವಿ

