– ಕೋ-ಪೈಲಟ್ ಆದ ಆಸಿಯಾ
ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊಟ್ಟ ಮೊದಲ ಪೈಲಟ್ ಆಗಿ ಸಂಗೀತಾ ಭಟ್ ಅವರು ಆಯ್ಕೆಯಾಗಿದ್ದಾರೆ.
ಸಂಗೀತಾ, ಮಂಜು, ಧನುಶ್, ಲಿಖಿತ್, ಕಿರಣ್ ಶಾಸ್ತ್ರಿ, ಸೌಂದರ್ಯ ಶೆಟ್ಟಿ ಪೈಲಟ್ ರೇಸ್‌ನಲ್ಲಿದ್ದರು. ಅವರಿಗೆ ಬಿಗ್ ಬಾಸ್ ಟಾಸ್ಕ್‌ವೊಂದನ್ನು ನೀಡಿದರು. ಅಂತಿಮವಾಗಿ ಸಂಗೀತಾ ಅವರು ಟಾಸ್ಕ್‌ನಲ್ಲಿ ಗೆದ್ದು ಮೊದಲ ಪೈಲಟ್ ಆಗಿ ಆಯ್ಕೆಯಾದರು.
ಇದೇ ಹೊತ್ತಲ್ಲಿ ಮನೆ ಮಂದಿಗೆ ಬಿಗ್ ಬಾಸ್ ಶಾಕ್‌ವೊಂದನ್ನು ನೀಡಿದರು. ಪೈಲಟ್ ಆಯ್ಕೆಯು ಮೊದಲ ಹಂತವೆಂದು, ಕೋ-ಪೈಲಟ್ ಆಯ್ಕೆ ಎರಡನೇ ಅಂತ ಎಂದು ಘೋಷಿಸಿದರು. ಪೈಲಟ್ ಸಂಗೀತಾ ಅವರು ತಮ್ಮ ಅಧಿಕಾರ ಬಳಸಿ ಕೋ-ಪೈಲಟ್ ಆಗಿ ಆಸಿಯಾ ಅವರನ್ನು ಆಯ್ಕೆ ಮಾಡಿಕೊಂಡರು.
ಸಂಗೀತಾ ಮತ್ತು ಆಸಿಯಾ ದೊಡ್ಮನೆಯ ಮೊದಲ ಕ್ಯಾಪ್ಟನ್ ರೇಸ್‌ನಲ್ಲಿದ್ದಾರೆ. ಇಬ್ಬರೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ವಾರದ ಟಾಸ್ಕ್‌ಗಳನ್ನು ಗೆದ್ದು ವಾರಾಂತ್ಯದವರೆಗೂ ಬಂದರೆ ಕ್ಯಾಪ್ಟನ್ ಜೊತೆ ಫೈಟ್‌ಗೆ ಬೀಳುತ್ತಾರೆ. ವಾರಾಂತ್ಯದಲ್ಲಿ ಕ್ಯಾಪ್ಟನ್ ಸ್ಥಾನಕ್ಕೆ ನಡೆಯುವ ಫೈಟ್‌ನಲ್ಲಿ ಗೆದ್ದವರು ಮನೆಗೆ ಮೊದಲ ಕ್ಯಾಪ್ಟನ್ ಆಗ್ತಾರೆ.

