ಬೆಂಗಳೂರು: ವಂದೇ ಮಾತರಂ (Vande Mataram) ಹಾಡಿನ ವಿವಾದ ರಾಜ್ಯ ಹೈಕೋರ್ಟ್ (High Court) ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತ್ತಾಸಕ್ತಿ ಮೊಕದ್ದಮೆ (PIL) ಅರ್ಜಿ ಸಲ್ಲಿಕೆಯಾಗಿದೆ.
ವಕೀಲ ಗಿರೀಶ್ ಭಾರಧ್ವಾಜ್ ಎಂಬುವವರು ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣ ಮಾತ್ರ ಹಾಡಬೇಕು ಎಂಬ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಶಾಲಾ ಬ್ಯಾಗ್ಗಳಿಂದ 38 ಕೆಜಿ ಗಾಂಜಾ ಸೀಜ್; ಮೂವರು ಅಪ್ರಾಪ್ತರು ಸೇರಿ ಐವರು ವಶಕ್ಕೆ
ಇನ್ನು, ರಾಜ್ಯ ಸರ್ಕಾರದ (State Govt) ನಡೆ ಖಂಡಿಸಿ ಬಿಜೆಪಿಯು (BJP) ಇಂದಿನಿಂದ 5 ದಿನಗಳ ಜಿಲ್ಲಾ ಹಾಗೂ ತಾಲೂಕು ಪಾದಯಾತ್ರೆಗೆ ಚಾಲನೆ ನೀಡಿದೆ. 1 ಕಿ.ಮೀ. ಪಾದಯಾತ್ರೆ ಮೂಲಕ ಡಿಸಿ, ತಹಸೀಲ್ದಾರ್ಗಳಿಗೆ ಸ್ಥಳೀಯ ಬಿಜೆಪಿ ನಾಯಕರು ದೂರು ಕೊಡಲಿದ್ದಾರೆ. ಈ ಸಂಬಂಧ, ಬಿಜೆಪಿ ಲೀಗಲ್ ಸೆಲ್ಕೂಡ ನಾಳೆ ಅಥವಾ ನಾಡಿದ್ದು ಹೈಕೋರ್ಟ್ಗೆ ಅರ್ಜಿ ಹಾಕಲಿದೆ.
ಇನ್ನೊಂದೆಡೆ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದಲ್ಲಿ ವಂದೇಮಾತರಂ ಎರಡೇ ಚರಣ ಹಾಡಿದ್ದಕ್ಕೆ ಶಿವಮೊಗ್ಗದ (Shivamogga) ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಕಾರ್ಯಕ್ರಮದಿಂದಲೇ ಹೊರನಡೆದಿದ್ದಾರೆ. ಶಿವಮೊಗ್ಗದ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ಎದ್ದು ನಿಂತ ಚನ್ನಬಸಪ್ಪ, ಪ್ರಜಾಪ್ರಭುತ್ವ ದೇಶಕ್ಕೊಂದು, ರಾಜ್ಯಕ್ಕೊಂದು ಬೇರೆ ಇದ್ಯಾ ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದ್ದಾರೆ.
ವಂದೇ ಮಾತರಂ ಗೀತೆಗೆ ಗೌರವ ಕೊಡದಿರೋ ವೇದಿಕೆಯಲ್ಲಿ ನಾನು ಇರಲ್ಲ. ನೀವು ಇರೀ ಎಂದು ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.ಇದನ್ನೂ ಓದಿ: ಮಧ್ಯ ಗಗನದಲ್ಲಿ ಹೊಗೆ ಎಚ್ಚರಿಕೆ – 103 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಲಕ್ನೋಗೆ ಡೈವರ್ಟ್

