ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ (Vijay) ಅವರು ಸಿಲ್ವರ್‌ಸ್ಟೋನ್ ರೇಸಿಂಗ್ ಸರ್ಕ್ಯೂಟ್‌ನಲ್ಲಿ ನಟ ಅಜಿತ್ ಕುಮಾರ್ (Ajit Kumar) ಅವರೊಂದಿಗೆ ಸೌಹಾರ್ದಯುತ ಕ್ಷಣವನ್ನು ಹಂಚಿಕೊಂಡರು.
ರೇಸ್‌ಗೆ ಚಾಲನೆ ನೀಡಲು ಮತ್ತು ತಮಿಳು ನಟನಿಗೆ ಬೆಂಬಲ ಸೂಚಿಸಲು ವಿಜಯ್ ಅಲ್ಲಿಗೆ ಆಗಮಿಸಿದ್ದರು. ಇದನ್ನೂ ಓದಿ: BBK 13: ʻಕಿತ್ತೋಗಿರೋ ಸೈಕಲ್ ಹೊಡ್ಕೊಂಡ್ ಬಂದಿದ್ದೀಯʼ ಧನುಷ್ ವಿರುದ್ಧ ಗಗನ್ ಗರಂ
ಲೆ ಮಾನ್ಸ್ ಕಪ್ ರೇಸ್‌ನ ನಂತರ ವಿಜಯ್ ಅವರು ಅಜಿತ್ ಅವರಿಗೆ ರೇಸ್ ಕಾರಿನ ಪುಟ್ಟ ಮಾದರಿಯೊಂದನ್ನು ಉಡುಗೊರೆಯಾಗಿ ನೀಡಿದರು. ಜೊತೆಗೆ ʼನನ್ನ ಪ್ರೀತಿಯ ಸಹೋದರ ಅಜಿತ್‌ಗೆ ಪ್ರೀತಿಯಿಂದ ವಿಜಯ್ ಎಂಬ ಮುದ್ದಾದ ಸಂದೇಶವನ್ನೂ ಅದರ ಮೇಲೆ ಬರೆದರು.
ಅಜಿತ್ ಉಡುಗೊರೆ ನೀಡಿದ ವಿಜಯ್‌ಗೆ ಧನ್ಯವಾದ ಅರ್ಪಿಸಿ ಹ್ಯಾಂಡ್‌ಶೇಕ್ ಮಾಡಿದರು. ನಂತರ ಅವರು ವಿಜಯ್‌ಗೆ ಹೆಲ್ಮೆಟ್ ಒಂದನ್ನು ಉಡುಗೊರೆಯಾಗಿ ನೀಡಿದರು.
ಸ್ಪರ್ಧೆಗೆ ಮುನ್ನ, ವಿಜಯ್ ಅವರು ಅಜಿತ್ ಅವರತ್ತ ಮುಗುಳ್ನಗುತ್ತಾ ಓಡಿಹೋಗಿ ಅವರನ್ನು ಅಪ್ಪಿಕೊಂಡ ದೃಶ್ಯ ಕಂಡುಬಂದಿತು. ಈ ಇಬ್ಬರು ನಟರು ಹಂಚಿಕೊಂಡ ಆ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ರಾಮಾಯಣದ ‘ಜೈ ಜೈ ರಾಮ್’ ಹಾಡು ರಿಲೀಸ್; ರಣಬೀರ್-ಸಾಯಿ ಪಲ್ಲವಿ ರಾಮ-ಸೀತೆಯಾಗಿ ಮೋಡಿ
ರೇಸ್‌ಗೆ ಚಾಲನೆ ನೀಡಿದ ನಂತರ ವಿಜಯ್ ಬಾಲ್ಕನಿಯಿಂದಲೇ ಅದನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ನಟಿ ತ್ರಿಶಾ ಕೃಷ್ಣನ್ ಮತ್ತು ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ನಾಯಕ ಆಧವ್ ಅರ್ಜುನ ಅವರು ಅವರೊಂದಿಗೆ ಇದ್ದರು.

