BBK 13: ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಾತಿನ ಚಕಮಕಿ ಜೋರಾಗಿದೆ. ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಹಾಗೂ ಧನುಷ್ ನಡುವೆ ವೈಷಮ್ಯ ಜೋರಾಗಿದ್ದು, (Bigg Boss Kannada) ಪರಸ್ಪರ ಬಿರುಸಿನ ವಾಗ್ದಾಳಿ ನಡೆಸುತ್ತಿದ್ದಾರೆ. ಕಳೆದ ವಾರ ಟಾಸ್ಕ್‌ವೊಂದರಿಂದ ಶುರುವಾದ ಇಬ್ಬರ ಪೈಪೋಟಿ ಇದೀಗ ‘ಕಿತ್ತೋಗಿರೋನು’ ಎನ್ನುವ ಮಟ್ಟಕ್ಕೆ ಬಂದು ತಲುಪಿದೆ.
ಗಗನ್ ಹಾಗೂ ತಾಂಡವ್ ಜೊತೆಯಲ್ಲೇ ಬರುತ್ತಿರುವ ವೇಳೆ ಕಿರಣ್ ಶಾಸ್ತ್ರಿ, ‘ಏನ್ ಅಣ್ಣ, ಡೋಲ್ ಬೋಲ್ ಹೋದಂತೆ ಮೇಲಕ್ಕೆ ಹೋಗ್ತೀರಿ, ಕೆಳಗೆ ಬರ್ತೀರಿ’ ಎಂದಿದ್ದಾರೆ. ಕಿರಣ್ ಶಾಸ್ತ್ರಿ ಅವರ ಮಾತಿಗೆ ಧನುಷ್ ಕೂಡ ಸಹಕರಿಸಿ, ‘ಏನಿಲ್ಲ, ಜೊತೆಯಲ್ಲೇ ಇರ್ತೀರಲ್ಲ, ಅದಕ್ಕೆ ಅಂತಾರೆ’ ಎಂದಿದ್ದಾರೆ.
ಇದರಿಂದ ಕೆರಳಿದ ಗಗನ್, ‘ಮರ್ಯಾದೆಯಿಂದ ಮಾತಾಡು’ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಧನುಷ್, ‘ತಮಾಷೆಗೂ ಮಾತಾಡುವಂತಿಲ್ವ?’ ಎಂದು ಕೇಳಿದ್ದಾರೆ. ಬಳಿಕ ರೊಚ್ಚಿಗೆದ್ದ ಗಗನ್, ‘ನೀನು ಕಿತ್ತೋಗಿರೋ ಸೈಕಲ್ ಹೊಡ್ಕೊಂಡು ಬಂದವನು ಅಂದ್ರೆ ಚೆನ್ನಾಗಿರುತ್ತಾ?’ ಎಂದು ಹೇಳಿದ್ದಾರೆ. ಅದಕ್ಕೆ ಧನುಷ್ ಇನ್ನಷ್ಟು ಕೆರಳಿ, ‘ನೀನು ಕಿತ್ತೋಗಿರೋ ಆ್ಯಕ್ಟಿಂಗ್ ಮಾಡ್ಕೊಂಡು ಬಂದವನು’ ಎಂದು ತಿರುಗೇಟು ನೀಡಿದ್ದಾರೆ. ‘ಲೆವೆಲ್ ಇಟ್ಕೋ, ಮರ್ಯಾದೆ ಕೊಟ್ಟು ಮರ್ಯಾದೆ ತಗೋ’ ಎಂದು ಗಗನ್ ಹೇಳಿದ್ದಾರೆ. ಇದನ್ನೂ ಓದಿ: ರಾಮಾಯಣದ ‘ಜೈ ಜೈ ರಾಮ್’ ಹಾಡು ರಿಲೀಸ್; ರಣಬೀರ್-ಸಾಯಿ ಪಲ್ಲವಿ ರಾಮ-ಸೀತೆಯಾಗಿ ಮೋಡಿ
ಹೀಗೆ ಗಗನ್ ಹಾಗೂ ಧನುಷ್ ನಡುವೆ ಭರ್ಜರಿ ವಾಗ್ಯುದ್ಧ ನಡೆದಿದೆ. ಇದೀಗ ಬಿಗ್‌ಬಾಸ್ ಮನೆಯಲ್ಲಿ ‘ಬೆಂಕಿ ಬಿರುಗಾಳಿ’ ಆಟ ಶುರುವಾಗಿದ್ದು, ಇಬ್ಬರ ನಡುವಿನ ಈ ಜಗಳ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ರಾಮಾಯಣದ ‘ಜೈ ಜೈ ರಾಮ್’ ಹಾಡು ರಿಲೀಸ್; ರಣಬೀರ್-ಸಾಯಿ ಪಲ್ಲವಿ ರಾಮ-ಸೀತೆಯಾಗಿ ಮೋಡಿ

