– ದೇಶಿಯ ಕರೆನ್ಸಿಗಳಲ್ಲೇ ಪೆಜೆಶ್ಕಿಯಾನ್ ವ್ಯವಹರಿಸಲು ಕರೆ
ನವದೆಹಲಿ: BRICS ಒಕ್ಕೂಟ ಬಲಪಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಪ್ರಯತ್ನಗಳಿಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Masoud Pezeshkian) ಧನ್ಯವಾದ ಅರ್ಪಿಸಿದ್ದಾರೆ.
ಸೆಪ್ಟೆಂಬರ್ 12ರಂದು ನವದೆಹಲಿಯಲ್ಲಿ ನಡೆಯಲಿರುವ ಬಹುನಿರೀಕ್ಷಿತ BRICS ಶೃಂಗಸಭೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ BRICS ಬಿಸಿನೆಸ್ ಫೋರಂನಲ್ಲಿ ಮಾತನಾಡಿದ ಅವರು, ಭಾರತದ ಆತಿಥ್ಯ ಮತ್ತು ಪ್ರಧಾನಿ ಮೋದಿ (PM Modi) ಅವರ ಪ್ರಯತ್ನಗಳನ್ನ ಕೊಂಡಾಡಿದ್ದಾರೆ.
The BRICS Bazaar brings the richness of traditional crafts and performances to New Delhi, celebrating the diversity that connects us.
📅 10-15 September, 2025
📍 National Crafts Museum & Hastkala Academy, New Delhi#BRICS2026 #BRICSIndia2026 #IndiaBRICSChairship pic.twitter.com/FShT46sOMu— BRICS 2026 (@BricsIndia2026) September 11, 2026
ಈ ಸಭೆ ಆಯೋಜಿಸಿರುವ ಸ್ನೇಹಪರ ಭಾರತ ಸರ್ಕಾರ ಮತ್ತು ಜನತೆಗೆ, ಹಾಗೆಯೇ BRICS ಸಹಕಾರವನ್ನ ಬಲಪಡಿಸಲು ಅಗತ್ಯ ಪ್ರಯತ್ನ ಮಾಡುತ್ತಿರುಯವ ಭಾರತದ ಪ್ರಧಾನಿಗಳಿಗೆ ನಾನು ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ. ಖಾಸಗಿ ವಲಯದ ಪ್ರತಿನಿಧಿಗಳು, ಉದ್ಯಮ ಸಂಸ್ಥೆಗಳು ಹಾಗೂ ಉದ್ಯಮಿಗಳ ನಡುವೆ ಭಾಗವಹಿಸುತ್ತಿರುವುದು ನನಗೆ ಸಂತೋಷ ತಂದಿದೆ. ಬ್ರಿಕ್ಸ್‌ನ ಸಹಕಾರದ ಕಲ್ಪನೆಯನ್ನ ಆರ್ಥಿಕ ಫಲಿತಾಂಶಗಳಾಗಿ ಪರಿವರ್ತಿಸುವ ಸಾಮರ್ಥ್ಯ ಇವರಿಗಿದೆ ಎಂದು ಪೆಜೆಶ್ಕಿಯಾನ್ ಹೇಳಿದರು.
ಇರಾನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿ ಮುಂಬರುವ ಬ್ರಿಕ್ಸ್ ಶೃಂಗಸಭೆಯ ಮೇಲೂ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಅವರು, ಜಗತ್ತು ಅತ್ಯಂತ ಸಂಕೀರ್ಣ ಪರಿಸ್ಥಿತಿ ಎದುರಿಸುತ್ತಿದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹೆಚ್ಚುತ್ತಿದ್ದು, ಜಾಗತಿಕ ಉತ್ಪಾದನಾ ಪೂರೈಕೆ ಸರಪಳಿಗಳಲ್ಲೂ ಅಡಚಣೆಗಳು ಉಂಟಾಗುತ್ತಿವೆ ಎಂದು ಅವರು ಗಮನಸೆಳೆದರು.
‘ಬ್ರಿಕ್ಸ್‌ನ ಶಕ್ತಿ ಆರ್ಥಿಕ ಗಾತ್ರಕ್ಕೆ ಮಾತ್ರ ಸೀಮಿತವಲ್ಲ’
ಬ್ರಿಕ್ಸ್‌ನ ನಿಜವಾದ ಶಕ್ತಿ ಸದಸ್ಯ ರಾಷ್ಟ್ರಗಳ ಆರ್ಥಿಕ ಗಾತ್ರದಲ್ಲಿ ಮಾತ್ರ ಇಲ್ಲ. ಈ ಸಾಮರ್ಥ್ಯಗಳನ್ನು ವ್ಯಾಪಾರ, ಹೂಡಿಕೆ ಮತ್ತು ಜಂಟಿ ಹಣಕಾಸು ವ್ಯವಸ್ಥೆಯ ಜಾಲವಾಗಿ ಪರಿವರ್ತಿಸಿದಾಗ ಬ್ರಿಕ್ಸ್‌ನ ನಿಜವಾದ ಶಕ್ತಿ ಹೆಚ್ಚು ಸ್ಪಷ್ಟವಾಗುತ್ತದೆ. ಅಂದ್ರೆ ಸಾಧ್ಯತೆಯಲ್ಲಿರುವ ಸಹಕಾರದಿಂದ ಕಾರ್ಯರೂಪದ ಸಹಕಾರದತ್ತ ನಾವು ಸಾಗಬೇಕು ಎಂದು ಅವರು ಹೇಳಿದರು.
Addressing the BRICS Business Forum. Strong business partnerships can open new avenues for growth, innovation and shared prosperity.@BricsIndia2026 https://t.co/EUIH6agfI2
— Narendra Modi (@narendramodi) September 11, 2026
ಅಮೆರಿಕ, ಇಸ್ರೇಲ್ ವಿರುದ್ಧ ವಾಗ್ದಾಳಿ
ಇನ್ನೂ ಭಾರತದ ವೇದಿಕೆಯಲ್ಲಿ ನಿಂತು ಅಮೆರಿಕ ಮತ್ತು ಇಸ್ರೇಲ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ಮಿಲಿಟರಿ ಆಕ್ರಮಣ ಮತ್ತು ಕಠಿಣ ಆರ್ಥಿಕ ನಿರ್ಬಂಧಗಳನ್ನ ಅವರು ಖಂಡಿಸಿದರು. ವ್ಯಾಪಾರ ಪಾಲುದಾರರು ಹಾಗೂ ಹಣಕಾಸಿನ ಮೂಲಗಳನ್ನ ವೈವಿಧ್ಯಗೊಳಿಸದೆ ಆರ್ಥಿಕ ಸ್ಥಿರತೆಯನ್ನ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿಹೇಳಿದರು.
ಇರಾನ್ ಹಲವು ವರ್ಷಗಳಿಂದ ವ್ಯಾಪಕ ನಿರ್ಬಂಧಗಳನ್ನು ಎದುರಿಸುತ್ತಿದೆ. ಆದರೆ ಇತ್ತೀಚಿನ ತಿಂಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ಮಿಲಿಟರಿ ಆಕ್ರಮಣಗಳಿಂದ ಈ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿ ಹಂತಕ್ಕೆ ತಲುಪಿದೆ. ಈ ಸಕ್ರಿಯ ಆಕ್ರಮಣದಿಂದ ಮಾನವೀಯ ಹಾಗೂ ಭೌತಿಕ ನಷ್ಟಗಳು ಸಂಭವಿಸಿವೆ. ಇದರ ಜೊತೆಗೆ ಆರ್ಥಿಕ ಭದ್ರತೆಯನ್ನ ರಾಷ್ಟ್ರೀಯ ಅಥವಾ ಪ್ರಾದೇಶಿಕ ಭದ್ರತೆಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬ ವಾಸ್ತವವೂ ಮತ್ತೊಮ್ಮೆ ಬಹಿರಂಗವಾಗಿದೆ ಎಂದು ಹೇಳಿದರು.
ವ್ಯಾಪಾರ, ಇಂಧನ ಅಥವಾ ಹಣಕಾಸು ವ್ಯವಸ್ಥೆಗಳು ರಾಜಕೀಯ ಅಥವಾ ಮಿಲಿಟರಿ ಒತ್ತಡಕ್ಕೆ ಒಳಗಾದಾಗ ಅದರ ಪರಿಣಾಮಗಳು ಕೇವಲ ಒಂದು ದೇಶಕ್ಕೆ ಸೀಮಿತವಾಗುವುದಿಲ್ಲ. ಅದು ಗಡಿಗಳನ್ನ ದಾಟಿ ಪ್ರಾದೇಶಿಕ ಅಥವಾ ಜಾಗತಿಕ ಅಸ್ಥಿರತೆಗೆ ಕಾರಣವಾಗಬಹುದು. ಆದ್ದರಿಂದ, ಜಾಗತಿಕ ದಕ್ಷಿಣದ ರಾಷ್ಟ್ರಗಳ ಆರ್ಥಿಕತೆಯನ್ನ ಹೆಚ್ಚು ಸ್ಥಿತಿಸ್ಥಾಪಕವಾಗಿಸುವ ಸಾಮರ್ಥ್ಯಗಳನ್ನ ಬ್ರಿಕ್ಸ್ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ದೇಶಿಯ ಕರೆನ್ಸಿಗಳಲ್ಲಿ ವ್ಯಾಪಾರಕ್ಕೆ ಕರೆ
ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ದೇಶಿಯ ಕರೆನ್ಸಿಗಳಲ್ಲೇ ವ್ಯಾಪಾರ ನಡೆಸುವಂತೆ ಇರಾನ್ ಅಧ್ಯಕ್ಷರು ಕರೆ ನೀಡಿದರು. ಆದ್ರೆ ಇದಕ್ಕಾಗಿ ಕರೆನ್ಸಿ ಅಪಾಯಗಳನ್ನ ನಿರ್ವಹಿಸುವ ಹಾಗೂ ಪರಸ್ಪರ ಹಣಪಾವತಿ ವ್ಯವಸ್ಥೆಗಳನ್ನ ರೂಪಿಸುವ ಅಗತ್ಯವಿದೆ ಎಂದರಲ್ಲದೇ, ಪ್ರಸ್ತುತ ಜಾಗತಿಕ ಹಣಕಾಸು ವ್ಯವಸ್ಥೆಯು ಸೀಮಿತ ಸಂಖ್ಯೆಯ ಕರೆನ್ಸಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಹೇಳಿದರು.

