ಚಾಮರಾಜನಗರ: ಹಿಟ್ & ರನ್ಗೆ (Hit And Run) ಮೂವರು ಬಲಿಯಾದ ಘಟನೆ ಹನೂರು (Hanur) ತಾಲೂಕಿನ ಹುಲಸುಗುಡ್ಡೆ ಬಳಿ ನಡೆದಿದೆ.
ರಮೇಶ್, ಸುರೇಶ್ ಹಾಗೂ ಮುನಿಯಪ್ಪ ಮೃತ ದುರ್ದೈವಿಗಳು. ಈ ಮೂವರು, ಹನೂರು ತಾಲೂಕಿನ ಕೊಪ್ಪ ಗ್ರಾಮದವರು. ಇವರು ಬೈಕ್ನಲ್ಲಿ ಹನೂರಿನಿಂದ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದರು. ಆಗ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಇದರಿಂದ ಸ್ಥಳದಲ್ಲೇ ಸವಾರರಿಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಲಾರಿ – ಕ್ಲೀನರ್ ಸ್ಥಳದಲ್ಲೇ ಸಾವು, ಚಾಲಕನಿಗೆ ಗಂಭೀರ ಗಾಯ
ಅಪಘಾತದ ಬಳಿಕ ಕಿಡಿಗೇಡಿಗಳು ವಾಹನ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಡಿಕ್ಕಿ ರಭಸಕ್ಕೆ ಮೃತ ವ್ಯಕ್ತಿಗಳ ಕಾಲುಗಳು ಕಟ್ ಆಗಿವೆ. ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಆಂಧ್ರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

