ಬೆಂಗಳೂರು: ಕರ್ನಾಟಕದ 50 ತಾಲೂಕು ಆಸ್ಪತ್ರೆಗಳಲ್ಲಿ ಶ್ರವಣ-ಮಾತಿನ ಚಿಕಿತ್ಸಾ ಸೇವೆ (Speech and Hearing Therapy) ಆರಂಭಕ್ಕೆ ಸರ್ಕಾರ ಆದೇಶ ಹೊರಡಿಸಿದೆ.
ಇನ್ಮುಂದೆ ಕಿವಿ, ಶ್ರವಣ ಹಾಗೂ ಮಾತಿನ ಸಮಸ್ಯೆಗಳಿಗೆ ತಾಲೂಕು ಮಟ್ಟದಲ್ಲೇ ಚಿಕಿತ್ಸೆ ಮತ್ತು ಪರೀಕ್ಷೆ ಲಭ್ಯವಾಗಲಿದೆ. 50 ತಾಲೂಕು ಆಸ್ಪತ್ರೆಗಳಿಗೆ ಆಡಿಯಾಲಜಿ ಉಪಕರಣಗಳ ಖರೀದಿಗೆ ಸರ್ಕಾರ ಅನುಮೋದನೆ ನೀಡಿದೆ. ಇದನ್ನೂ ಓದಿ: ಕರ್ನಾಟಕ–ಕೆನಡಾ ಸಹಭಾಗಿತ್ವ ಮತ್ತಷ್ಟು ಬಲಪಡಿಸಲು ಕ್ರಮ: ಪ್ರಿಯಾಂಕ್ ಖರ್ಗೆ
ಪ್ರತಿ ಆಸ್ಪತ್ರೆಗೆ ಸುಮಾರು 40.78 ಲಕ್ಷ ಮೌಲ್ಯದ ಉಪಕರಣಗಳು ಒದಗಿಸಲು ನಿರ್ಧಾರ ಕೈಗೊಂಡಿದೆ. 50 ಆಸ್ಪತ್ರೆಗಳಿಗೆ ಉಪಕರಣ ಖರೀದಿಗೆ ಸುಮಾರು 20.39 ಕೋಟಿ ವೆಚ್ಚವಾಗಲಿದೆ. ಪ್ರತಿ ತಾಲೂಕು ಆಸ್ಪತ್ರೆಗೆ ಒಬ್ಬ ಆಡಿಯಾಲಜಿಸ್ಟ್ ನೇಮಕಕ್ಕೆ ಸರ್ಕಾರ ನಿರ್ಧರಿಸಿದೆ.
ಆಡಿಯಾಲಜಿಸ್ಟ್ಗೆ ತಿಂಗಳಿಗೆ 30 ಸಾವಿರ ಗೌರವಧನ ನೀಡಲಾಗುವುದು. 50 ಆಡಿಯಾಲಜಿಸ್ಟ್ಗಳಿಗೆ ವಾರ್ಷಿಕ ಸುಮಾರು 1.80 ಕೋಟಿ ವೆಚ್ಚವಾಗಲಿದೆ. ಗ್ರಾಮೀಣ ಭಾಗದ ಜನರಿಗೆ ಕಿವಿ ಮತ್ತು ಶ್ರವಣ ಸಮಸ್ಯೆಗಳಿಗೆ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವ ಅಗತ್ಯ ಕಡಿಮೆ ಮಾಡಲು ಈ ಕ್ರಮವಹಿಸಲಾಗಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶ ಆರಂಭ – ಯಡಿಯೂರಪ್ಪ, ಜೋಶಿ ಸೇರಿ ಅನೇಕ ಗಣ್ಯರು ಭಾಗಿ
ಕೇಂದ್ರ ಸರ್ಕಾರದ ಆರೋಗ್ಯ ಭಾರತ ಧನ ಸಹಾಯದ ಯೋಜನೆ ಅಡಿಯಲ್ಲಿ ವಿಸ್ತರಿಸಲು ಕ್ರಮಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಔಷಧಿ ನಿಗಮ (KSMSCL) ಮೂಲಕ ಅಗತ್ಯ ಉಪಕರಣಗಳ ಖರೀದಿ ಮಾಡಲಾಗುವುದು. KTPP ಕಾಯ್ದೆ ಹಾಗೂ ನಿಯಮಗಳಂತೆ ಟೆಂಡರ್ ಪ್ರಕ್ರಿಯೆ ಮೂಲಕ ಉಪಕರಣ ಖರೀದಿಗೆ ಸರ್ಕಾರ ಸೂಚನೆ ನೀಡಿದೆ.

