ಬಿಗ್‌ಬಾಸ್ ಕನ್ನಡ (Bigg Boss Kannada) ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ ( Ashwini Gowda) ಅವರು ಟ್ರೋಲಿಗರಿಗೆ ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಸಂದೇಶ ರವಾನಿಸಿದ್ದಾರೆ. ಕಾನೂನು ಕ್ರಮದ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಮುಖ್ಯವಾಗಿ ತಮ್ಮ ವಿರುದ್ಧದ ಟ್ರೋಲ್, ವ್ಯಂಗ್ಯ, ಟೀಕೆ, ಕಾಲೆಳೆಯುವುದು, ವಿಶ್ಲೇಷಣೆ ವಿರುದ್ಧ ಸಿಡಿದೆದ್ದಿದ್ದಾರೆ. ಇದು ಮುಂದುವರೆದರೆ ಕಾನೂನು ಕ್ರಮ ಫಿಕ್ಸ್ ಅನ್ನೋದು ಅಶ್ವಿನಿ ಗೌಡ ನೇರ ಸಂದೇಶವಾಗಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 13 ಪ್ರಾರಂಭವಾಗಿದ್ದು ಕಳೆದ ಸೀಸನ್ ಕಂಟೆಸ್ಟಂಟ್ ಆಗಿದ್ದ ಅಶ್ವಿನಿ ಗೌಡ ಕುರಿತು ಚರ್ಚೆ ಜೋರಾಗಿದೆ. ಅವರು ಟ್ರೋಲ್ ಆಗುತ್ತಿದ್ದಾರೆ. ಬೇರೊಬ್ಬ ಕಂಟೆಸ್ಟಂಟ್‌ಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ ನನ್ನ ಮೌನವನ್ನು ದೌರ್ಬಲ್ಯವೆಂದು ಭಾವಿಸಬೇಡಿ ಎಂದು ಪೋಸ್ಟ್ ಹಾಕಿರುವ ಅಶ್ವಿನಿ ಗೌಡ , `ವೈಯಕ್ತಿಕವಾಗಿ ಇದು ಘಾಸಿಯಾಗಿದೆ ಎಂದು ಪೋಸ್ಟ್ ಮಾಡಿ, ಕಿಡಿಗೇಡಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಮನೆಯ ಅನ್ನಪೂರ್ಣೇಶ್ವರಿ ಯಾರು?
ಅಶ್ವಿನಿ ಗೌಡ ಖಡಕ್ ಸಂದೇಶ ಏನು?
ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ನನ್ನ ವೈಯಕ್ತಿಕ ಜೀವನ ನನ್ನ ಕುಟುಂಬ , ನನ್ನ ವೈವಾಹಿಕ ಜೀವನದ ಬಗ್ಗೆ ಗೊತ್ತಿಲ್ಲದೆ , ಸತ್ಯಾಸತ್ಯತೆ ಪರಿಶೀಲಿಸದೆ, ಹಳೆಯ ವೀಡಿಯೋಗಳನ್ನ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಅವಮಾನಿಸುವುದು, ತೇಜೋವಧೆ ಮಾಡುವುದು ಮಾನಸಿಕವಾಗಿ ನೋವುಂಟು ಮಾಡಿದೆ.
ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಹಳೆಯ ವೀಡಿಯೋಗಳನ್ನ ಹಂಚಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈಗಾಗಲೇ ಮಾನಹಾನಿ ಪ್ರಕರಣ, ತಡೆಯಾಜ್ಞೆ ದಾಖಲಿಸಿದ್ದೇನೆ. ನನ್ನ ಹಳೆಯ ವೀಡಿಯೋಗಳನ್ನ ತಿರುಚಿ, ಬೇರ್ಪಡಿಸಿ ಪ್ರಸಾರ ಮಾಡುವ ಕ್ರಮ ಮುಂದುವರೆದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ.

ಈ ಸೀಸನ್ ಬಿಗ್‌ಬಾಸ್ ಪ್ರಾರಂಭ ಆಗಿದ್ದಾಗಿಂದ ಅಶ್ವಿನಿ ಗೌಡ ಹಾಗೂ ಗಿಲ್ಲಿನಟ ಗುತಿಯಾಗಿಸಿಕೊಂಡು ಟ್ರೋಲ್ ಹೆಚ್ಚಾಗುತ್ತಿದೆ. ಹಲವು ಮೀಮ್ಸ್ ಹಾಗೂ ವಿಶ್ಲೇಷಣೆಗಳು ಜೋರಾಗಿದೆ. ಇದೆಲ್ಲವುಗಳನ್ನ ಗಮನದಲ್ಲಿಟ್ಟುಕೊಂಡು ಅಶ್ವಿನಿ ಗೌಡ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: BBK 13: ಮೊದಲ ವಾರವೇ ಶುರುವಾಯ್ತು ಸೆಲೆಬ್ರಿಟಿ vs ಕಾಮನ್‌ಮ್ಯಾನ್ ವಾರ್

