ಕಿರುತೆರೆ ತಾರೆಯರೇ ತುಂಬಿರುವ ಬಿಗ್ಬಾಸ್ ಕನ್ನಡ ಸೀಸನ್ 13ರ(BBK13) ಅಖಾಡದಲ್ಲಿ ಸಿನಿಮಾ ಕೋಟಾದ ಮೂಲಕ ಎಂಟ್ರಿ ಕೊಟ್ಟ ನಟಿ ಸಂಗೀತಾ ಭಟ್(Sangeetha Bhat) ಆರಂಭದ ದಿನಗಳಲ್ಲೇ ಮನೆಯವರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದೀಗ ಇದೇ ಅಂಶ ಅವರ ಬಿಗ್ಬಾಸ್ ಪಯಣಕ್ಕೆ ಮುಳುವಾಗುತ್ತಿದೆಯಾ ಎಂಬ ಗಂಭೀರ ಚರ್ಚೆ ವೀಕ್ಷಕರ ವಲಯದಲ್ಲಿ ಶುರುವಾಗಿದೆ.
ಮೊದಲ ವಾರವೇ ಮನೆಯ ಎಲ್ಲಾ ಸ್ಪರ್ಧಿಗಳಿಗೆ ರುಚಿಕರ ಅಡುಗೆ ಬಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಸಂಗೀತಾ ಭಟ್, ಎಲ್ಲರಿಗೂ ಪ್ರೀತಿಯಿಂದ ಉಣಬಡಿಸುತ್ತಿದ್ದಾರೆ. ಇವರ ಸೇವೆಯನ್ನು ಮೆಚ್ಚಿದ ತಾಂಡವ್ ರಾಮ್ ಹಾಗೂ ಜಗ್ಗ ಸೇರಿದಂತೆ ಬಹುತೇಕ ಸಹ-ಸ್ಪರ್ಧಿಗಳು ಸಂಗೀತಾಗೆ ಪ್ರೀತಿಯಿಂದ ‘ಅನ್ನಪೂರ್ಣೇಶ್ವರಿ’ ಎಂಬ ಬಿರುದನ್ನೇ ನೀಡಿದ್ದಾರೆ. ಉಳಿದ ಸ್ಪರ್ಧಿಗಳಿಂದ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಜೈಲಲ್ಲಿರೋ ದರ್ಶನ್ ಕುಟುಂಬಕ್ಕೆ ಪಟ್ಟೆ ತಲೆ ಹೆಬ್ಬಾತು ಸಂಕಷ್ಟ

ಮನೆಯವರಿಂದ ಬೆಂಬಲ ವ್ಯಕ್ತವಾದರೂ ಗೀತಾ ಕೇವಲ ಅಡುಗೆ ಮನೆಗಷ್ಟೇ ಸೀಮಿತವಾಗುತ್ತಿದ್ದಾರೆಯೇ ಎಂಬ ಟೀಕೆ ಬಿಗ್ಬಾಸ್(Bigg Boss) ವೀಕ್ಷಕರಿಂದ ಕೇಳಿಬರುತ್ತಿದೆ. ಮೊದಲ ಬಾರಿಗೆ ಓಂಪ್ರಕಾಶ್ ರಾವ್ ಅವರು ಮನೆಯಿಂದ ಹೊರಹೋಗುವ ವೇಳೆ “ಸಂಗೀತಾ ಅವರ ಬಿಗ್ಬಾಸ್ ಸಾಧನೆಯಾದರೂ ಏನು?” ಎಂದು ನೇರವಾಗಿಯೇ ಪ್ರಶ್ನಿಸಿದ್ದರು. ಸಂಗೀತಾ ಇನ್ನೂ ಆಟದ ಅಖಾಡಕ್ಕೆ ಧುಮುಕಿಲ್ಲ, ಅವರ ರಿಯಲ್ ಗೇಮ್ ಪ್ಲಾನ್ ಏನು ಎಂಬುದು ಕಾಣಿಸುತ್ತಲೇ ಇಲ್ಲ ಎಂಬುದು ಹಲವರ ಅಭಿಪ್ರಾಯ.
ಬಿಗ್ಬಾಸ್ ಮನೆಯಲ್ಲಿ ಕೇವಲ ಒಳ್ಳೆಯವರಾಗಿ ಅಥವಾ ಅಡುಗೆ ಮಾಡಿಕೊಂಡಿದ್ದರೆ ಮಾತ್ರ ದೀರ್ಘಕಾಲ ಉಳಿಯಲು (Survive) ಸಾಧ್ಯವಿಲ್ಲ. ಟಾಸ್ಕ್ಗಳಲ್ಲಿ ಚುರುಕುತನ, ಗೇಮ್ ಸ್ಟ್ರಾಟಜಿ ಹಾಗೂ ನಿಲುವುಗಳು ಸ್ಪಷ್ಟವಾಗಿರಬೇಕು. ಸಂಗೀತಾ ಅವರ ಈ ಸೈಲೆಂಟ್ ಆಟದ ಬಗ್ಗೆ ವಾರಾಂತ್ಯದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಸ್ವತಃ ಸುದೀಪ್ ಚರ್ಚೆ ನಡೆಸಿ, ಎಚ್ಚರಿಕೆ ಕೊಡ್ತಾರಾ ಎಂಬುದನ್ನು ಕಾದುನೋಡಬೇಕಿದೆ.

