ಬಾಲಿವುಡ್‌ನ ತಾರಾ ದಂಪತಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣವೀರ್ ಸಿಂಗ್(Ranveer Singh) ಸಿಂಗ್ ಶೀಘ್ರದಲ್ಲೇ ತಮ್ಮ ಎರಡನೇ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಇದೀಗ ತಮ್ಮ ಮುದ್ದಾದ ಮಗಳು ದುವಾ ಪಡುಕೋಣೆ ಸಿಂಗ್‌ಳ 2ನೇ ವರ್ಷದ ಹುಟ್ಟುಹಬ್ಬದ (ಸೆಪ್ಟೆಂಬರ್ 8) ವಿಶೇಷ ಸಂದರ್ಭದಲ್ಲಿ ಈ ಜೋಡಿ ಸುಂದರ ಬೇಬಿ ಬಂಪ್(Baby Bump) ಫೋಟೋಶೂಟ್ ಹಂಚಿಕೊಂಡಿದೆ.
ಸಾಮಾನ್ಯವಾಗಿ ತಮ್ಮ ಮಗಳ ಮುಖವನ್ನು ಕ್ಯಾಮೆರಾ ಕಣ್ಣಿನಿಂದ ದೂರವೇ ಇಡುತ್ತಿದ್ದ ದೀಪಿಕಾ ಮತ್ತು ರಣವೀರ್ ಇದೀಗ ಮಗಳ ಹುಟ್ಟುಹಬ್ಬದ ದಿನದಂದು ಬ್ಲ್ಯಾಕ್ & ವೈಟ್ ಥೀಮ್‌ನಲ್ಲಿ ಕ್ಲಿಕ್ಕಿಸಲಾದ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ದೀಪಿಕಾ ತಮ್ಮ ಬೇಬಿ ಬಂಪ್ ಪ್ರದರ್ಶಿಸಿದ್ದು, ಮಗಳು ದುವಾ ತಂದೆ-ತಾಯಿಯೊಂದಿಗೆ ಮುದ್ದಾಗಿ ಪೋಸ್ ಕೊಟ್ಟಿದ್ದಾಳೆ.
View this post on Instagram
ಫೋಟೋಗಳ ಜೊತೆಗೆ,”ಬೇಬಿ ದುವಾ ಜೊತೆಗೆ ನಮ್ಮ ಹೃದಯಗಳು ಇನ್ನಷ್ಟು ಹಿರಿದಾಗುತ್ತಿವೆ! ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು”
ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಜಯ್ ಬಳಿಕ ತ್ರಿಶಾಗೆ ಕಂಗನಾ ಬಲ! – ಚಾರಿತ್ರ್ಯಹರಣದ ವಿರುದ್ಧ ಗುಡುಗಿದ ಸಂಸದೆ
