– ಅಬಕಾರಿ ಅಕ್ರಮದ ಕೇಸ್ನಲ್ಲಿ ಸಚಿವರಿಗೆ ED ಶಾಕ್
ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಬೆಂಗಳೂರು ನಿವಾಸದ ಮೇಲೆ ಇ.ಡಿ (ED) ದಾಳಿ ನಡೆಸಿದೆ.
ಬೆಂಗಳೂರು, ಬೆಳಗಾವಿ, ಮಹಾರಾಷ್ಟ್ರ ಸೇರಿದಂತೆ 15 ಕಡೆ ದಾಳಿ ನಡೆದಿದೆ. ಮಂಜುನಾಥ್ ಅಬಕಾರಿ ಅಕ್ರಮದ ಮೇಲೆ ಈ ಹಿಂದೆ ಇ.ಡಿ ದಾಳಿ ಮಾಡಿತ್ತು. 18 ಅನಧಿಕೃತ ಲೈಸೆನ್ಸ್ ಕೊಡುವುದಕ್ಕೆ ಸತೀಶ್ ಜಾರಕಿಹೊಳಿ ಸಹಾಯ ಮಾಡಿದ್ದರೆಂಬ ಆರೋಪ ಇದೆ. ಇದನ್ನೂ ಓದಿ: ಸಿದ್ಧಾರ್ಥ ಟ್ರಸ್ಟ್ಗೆ ನಿಯಮಬಾಹಿರವಾಗಿ ಸೈಟ್ ವಿಚಾರ – ಖರ್ಗೆ ಕುಟುಂಬ ವಿರುದ್ಧದ ಕೇಸ್ಗೆ ಹೈಕೋರ್ಟ್ ತಿರುವು!
ವಿದೇಶದಲ್ಲಿ ಹಣ ಹೂಡಿಕೆಗೆ ಜಾರಕಿಹೊಳಿ ಸಹಾಯ ಮಾಡಿದ್ದ ಆರೋಪವಿದೆ. 3 ಕೋಟಿಯಷ್ಟು ಅಕ್ರಮ ವಿದೇಶಿ ಹಣ ಪತ್ತೆಯಾಗಿತ್ತು. ಸಚಿವರಾಗಿದ್ದಾಗ ಪ್ರಭಾವ ಬಳಸಿ 18 ಬಾರ್ ಲೈಸೆನ್ಸ್ ನೀಡಿದ್ದರು ಎನ್ನಲಾಗಿದೆ. ಬಾರ್ನಿಂದ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆ ಈಗ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
