ಕಲಬುರಗಿ: ಕೆಪಿಎಸ್‌ಸಿ (KPSC) ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಳಿಯ ಶಂಕರಗೌಡ ಮೂಲಕ ನಕಲಿ ದಾಖಲೆ ಸೃಷ್ಟಿಸಿ 27 ಎಕರೆ ಜಮೀನು ಭೂಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಣಬಿ ಗ್ರಾಮದ ಸರ್ವೇ ನಂಬರ್ 242 ಹಾಗೂ 245ರಲ್ಲಿರುವ 27 ಎಕರೆ ಜಮೀನು ಭೂಕಬಳಿಕೆ ಮಾಡಿರುವ ಆರೋಪ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಕೇಳಿಬಂದಿದೆ.
ಜಮೀನು ಮಾಲೀಕರಾದ ಬಸಮ್ಮ ಅವರ ಮಗ ಶಂಕರಗೌಡ ಎಂದು ನಕಲಿ ದಾಖಲೆ ಸೃಷ್ಟಿಸಿ, ಜಮೀನನ್ನು ಗಿಫ್ಟ್ ಡೀಡ್ ಮೂಲಕ ಶಂಕರಗೌಡ ಹೆಸರಿಗೆ ನೋಂದಣಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಳಿಕ ಶಂಕರಗೌಡ ಹೆಸರಿಗೆ ಬಂದಿದ್ದ ಜಮೀನನ್ನು ಶಿವಶಂಕರಪ್ಪ ಸಾಹುಕಾರ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ದೆಹಲಿ ಕಟ್ಟಡ ದುರಂತ; ಅಡಿಪಾಯದ ಮಿತಿ ಗೊತ್ತಿದ್ದರೂ 4 ಮಹಡಿ ನಿರ್ಮಾಣ, FIRನಲ್ಲಿ ಬಹಿರಂಗ
ಬಸಮ್ಮ ಅವರ ಮಗ ಶಂಕರಗೌಡ ಎಂಬುದಾಗಿ ನಕಲಿ ದಾಖಲೆ ಸೃಷ್ಟಿಸಲು ಶಿವಶಂಕರಪ್ಪ ತಮ್ಮ ಪ್ರಭಾವ ಬಳಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಮೂಲಕ ಅನಧಿಕೃತವಾಗಿ ಜಮೀನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
ಜಮೀನು ಕಳೆದುಕೊಂಡ ಕುಟುಂಬಸ್ಥರು ಇದೀಗ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ದೂರು ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಲ್ಲಿಸಿದ್ದಾರೆ.ಇದನ್ನೂ ಓದಿ: `ಕೆಲ್ಸ ಮಾಡೋದು ಬಿಟ್ಟು, ಬಿಟ್ಟಿ ಯಾಕೆ ಹೋಗ್ತೀರಿ?ʼ – ನಿರ್ವಾಹಕರ ವಿರುದ್ಧ ಸಿಡಿದ ಮಹಿಳೆಯರು
