ಮೊದಲ ದಿನವೇ ಬಿಗ್‌ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಿರಿಕ್ ಜೋರಾಗಿದೆ. ಈಗಾಗಲೇ 8 ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದು, ವಿಮಾನದಲ್ಲಿಯೇ ಉಳಿದಿದ್ದ ಸ್ಪರ್ಧಿಗಳ ನಡುವೆ ಇದೀಗ ವಾಕ್ಸಮರ ಶುರುವಾಗಿದೆ.
ಕಳೆದೊಂದು ದಿನದಿಂದ ವಿಮಾನದಲ್ಲಿರುವ ಸ್ಪರ್ಧಿಗಳ ಪೈಕಿ ಎಂಟು ಜನರನ್ನು ಬಿಗ್‌ಬಾಸ್ ಟಾಸ್ಕ್ ಮೂಲಕ ಮನೆಯೊಳಕ್ಕೆ ಕಳುಹಿಸಿದ್ದಾರೆ. ಆದರೆ ಇನ್ನೂ ಎಂಟು ಜನ ವಿಮಾನದಲ್ಲಿಯೇ ಇದ್ದಾರೆ. ಇದೀಗ ವೈಷ್ಣವಿ, ಕಿರಣ್ ಶಾಸ್ತ್ರಿ ನಡುವೆ ಸ್ನಾನಕ್ಕೆ ಗಲಾಟೆ ಜೋರಾಗಿದೆ.ಇದನ್ನೂ ಓದಿ: ಮೊದಲ ಟಾಸ್ಕ್‌ನಲ್ಲೇ ಗೆದ್ದು ವಿಮಾನ ಪ್ರಯಾಣ ಮುಗಿಸಿ ದೊಡ್ಮನೆಗೆ ಕಾಲಿಟ್ಟ 8 ಸ್ಪರ್ಧಿಗಳು
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಬಿಗ್ ಬಾಸ್ ಪೂರ್ತಿ ಸಂಚಿಕೆಯನ್ನ ವೀಕ್ಷಿಸಲು ಜಿಯೋ ಹಾಟ್‌ಸ್ಟಾರ್‌ಗೆ ಭೇಟಿ ನೀಡಿ –https://t.co/otcCZXlQt3#BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKPromo pic.twitter.com/c3MjTCIVXY
— Colors Kannada (@ColorsKannada) September 8, 2026
ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಅದರಲ್ಲಿ ಫ್ಲೈಟ್‌ನಲ್ಲಿರುವ ಕಂಟೆಸ್ಟೆಂಟ್‌ಗಳಿಗೆ ಬಿಗ್‌ಬಾಸ್ ಸ್ನಾನಕ್ಕಾಗಿ ಒಂದೂವರೆ ಗಂಟೆ ಸಮಯ ಕೊಟ್ಟಿದ್ದಾರೆ. ಅದರಂತೆ ಸ್ನಾನಕ್ಕೆ ಹೋದ ಕಿರಣ್ ಶಾಸ್ತ್ರಿ ಅವರು ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ಸಮಯ ತೆಗೆದುಕೊಂಡಿದ್ದು, ಉಳಿದವರಿಗೆ ರಕ್ತ ಕುದಿಯುವಂತೆ ಮಾಡಿದೆ. ಇದನ್ನೆಲ್ಲ ಕೇರ್ ಮಾಡದೇ ಕಿರಣ್ ಮಾತ್ರ ಆರಾಮಾಗಿ ಫ್ಲೈಟ್‌ಗೆ ಎಂಟ್ರಿ ಕೊಡುತ್ತಿದ್ದಂತೆ ವೈಷ್ಣವಿ ತಿರುಗಿಬಿದ್ದಿದ್ದಾರೆ.
ಎಷ್ಟೊತ್ತು ನೀವು ಸ್ನಾನ ಮಾಡೋದು? ನೀವು ಹೀಗೆ ಮಾಡಿದ್ರೆ ಎಲ್ಲರಿಗೂ ತೊಂದರೆ ಆಗುತ್ತೆ ಅನ್ನೋ ಅರಿವಿಲ್ವಾ? ಎಂದು ವೈಷ್ಣವಿ ಕಿಡಿಕಾರಿದ್ರು. ಅದಕ್ಕೆ ಕಿರಣ್, ಯಾಕೆ ಹೀಗೆ ಹುಚ್ಚರ ಥರ ಚೀರಾಡ್ತೀರಿ? ಅಂದ್ರು. ಕಿರಣ್ ಗೀರಿದ ಕಡ್ಡಿಗೆ ವೈಷ್ಣವಿ ಬ್ಲಾಸ್ಟ್ ಆಗಿ, ನನ್ನ ಗಂಟಲು.. ನನ್ ಇಷ್ಟ, ಕಿರುಚಾಡ್ತೀನಿ. ಹುಚ್ಚ ಅನ್ನೋಕೆ ನೀನ್ಯಾರು ನಂಗೆ ಎಂದು ಇಬ್ಬರ ನಡುವೆ ದಂಗೆ ಭುಗಿಲೆದ್ದಿದೆ.ಇದನ್ನೂ ಓದಿ: BBK 13: ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ಶುಭಾರಂಭ; ಇವ್ರೇ ನೋಡಿ ಈ ಬಾರಿ ಮನೆಯೊಳಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು

