ಪ್ಯಾರಿಸ್: ಭಾರತೀಯ ಮೂಲದ ಹಿಂದೂ ಧಾರ್ಮಿಕ ನಿಯೋಗವೊಂದರ ಖಾಸಗಿ ಭೇಟಿಯ ಸಂದರ್ಭದಲ್ಲಿ ಲಿಂಗ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಐತಿಹಾಸಿಕ ಐಫೆಲ್ ಟವರ್‌ನ(Eiffel Tower) ಸಿಬ್ಬಂದಿ ಸೋಮವಾರ ಮುಷ್ಕರ ನಡೆಸಿದ್ದಾರೆ.
ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ವತಿಯಿಂದ ಪ್ಯಾರಿಸ್‌ನಲ್ಲಿ ನೂತನ ಹಿಂದೂ ದೇವಸ್ಥಾನವನ್ನು(Hindu Temple) ಉದ್ಘಾಟಿಸಿದ ನಂತರ, ಸಂಸ್ಥೆಗೆ ಸೇರಿದ ಸುಮಾರು 100 ಜನರ ನಿಯೋಗವು ಶನಿವಾರ ಐಫೆಲ್ ಟವರ್‌ಗೆ ಭೇಟಿ ನೀಡಿತ್ತು.
ಭೇಟಿಗೂ ಮೊದಲು ಈ ನಿಯೋಗವು ತಮ್ಮ ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಮಹಿಳೆಯರೊಂದಿಗಿನ ಪರಸ್ಪರ ಸಂವಹನವನ್ನು ಮಿತಿಗೊಳಿಸಲು ಟವರ್‌ನ ಆಡಳಿತ ಮಂಡಳಿಗೆ ವಿನಂತಿಸಿತ್ತು.
ನಿಯೋಗದ ವಿನಂತಿಯನ್ನು ಒಪ್ಪಿದ ಐಫಲ್ ಟವರ್‌ನ ಆಡಳಿತ ಸಂಸ್ಥೆಯಾದ SETE, ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ನಿಯೋಗ ಇರುವ ಜಾಗದಿಂದ ದೂರವಿರಲು ಸೂಚನೆ ನೀಡಿತ್ತು. ಕೆಲವು ಮಹಿಳಾ ಸಿಬ್ಬಂದಿಗಳನ್ನು ಅವರ ಕೆಲಸದ ಸ್ಥಳದಿಂದ ಬೇರೆಡೆಗೆ ವರ್ಗಾಯಿಸಿ, ಅವರ ಜಾಗಕ್ಕೆ ಪುರುಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
View this post on Instagram
ಈ ವಿಚಾರ ತಿಳಿದು ಆಕ್ರೋಶಗೊಂಡ ಕಾರ್ಮಿಕ ಸಂಘಟನೆಗಳು ಮತ್ತು ಸಿಬ್ಬಂದಿ ಲಿಂಗದ ಆಧಾರದ ಮೇಲೆ ಮಹಿಳಾ ಉದ್ಯೋಗಿಗಳನ್ನು ಕಡೆಗಣಿಸುವುದು ವೃತ್ತಿಪರ ನೈತಿಕತೆಗೆ ವಿರೋಧ ಎಂದು ಖಂಡಿಸಿ ಸೋಮವಾರದಂದು ಇದ್ದಕ್ಕಿದ್ದಂತೆ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದರು. ದಿಢೀರ್ ಮುಷ್ಕರ ನಡೆಸಿದ್ದರಿಂದ ಸೋಮವಾರ ಪ್ಯಾರಿಸ್‌ನ ಐತಿಹಾಸಿಕ ಐಫೆಲ್ ಟವರ್ ಪ್ರವಾಸಿಗರಿಗೆ ಬಂದ್ ಆಗಿತ್ತು.
ಈ ವಿಚಾರ ದೊಡ್ಡ ಸದ್ದು ಮಾಡುತ್ತಿದ್ದಂತೆ SETE, ಈ ರೀತಿಯ ಷರತ್ತುಗಳನ್ನು ಒಪ್ಪಿಕೊಳ್ಳಬಾರದಾಗಿತ್ತು. ಇದು ಲಿಂಗ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ಸಿಬ್ಬಂದಿ ಬಳಿ ಕ್ಷಮೆಯಾಚಿಸಿತು. ಇದನ್ನೂ ಓದಿ: ಏನಿದು ಒಂದು ದೇಶ, ಒಂದು ಸಮಯ? ಲಾಭ ಏನು? ಈಗ ಇರೋ ವ್ಯವಸ್ಥೆಯಲ್ಲಿರುವ ಸಮಸ್ಯೆ ಏನು?
Nous comprenons les préoccupations exprimées et les prenons très au sérieux.
Compte tenu de la taille de notre délégation, la visite a été organisée en coordination avec les équipes de la tour Eiffel, au début des horaires habituels d’ouverture, afin de limiter autant que… pic.twitter.com/gyiwzmh6Jv
— BAPS Mandir Swaminarayan Hindou de Paris (@BAPSParis) September 7, 2026
ವಿವಾದದ ಬೆನ್ನಲ್ಲೇ BAPS ಸಂಸ್ಥೆಯು ಅಧಿಕೃತ ಪ್ರಕಟಣೆ ಹೊರಡಿಸಿ, ಯಾರ ಮುಖಾಮುಖಿಗೂ ತೊಂದರೆ ಕೊಡುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸುತ್ತಾ, ಈ ಘಟನೆಯಿಂದ ಮನಸ್ಸಿಗೆ ನೋವಾಗಿದ್ದಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿತು.
ಫ್ರಾನ್ಸ್‌ನಲ್ಲಿ BAPS ಸಂಸ್ಥೆಯ ಮೊದಲ ಪ್ರಮುಖ ದೇವಾಲಯ ಉದ್ಘಾಟನೆಗೊಂಡ ಬೆನ್ನಲ್ಲೇ ಈ ವಿವಾದ ಉಂಟಾಗಿದೆ. ಭಾನುವಾರ ನಡೆದ ದೇವಾಲಯದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ಭಾರತ ಮತ್ತು ಫ್ರಾನ್ಸ್ ನಡುವಿನ ಬಾಂಧವ್ಯವನ್ನು ಶ್ಲಾಘಿಸಿದ್ದರು.
