ತುಮಕೂರು: ಪ್ರಜಾಸೇವಾ ಕಾರ್ಯಕ್ರಮದಲ್ಲಿ ಅರ್ಜಿ ಕೊಡಲು ಬಂದಿದ್ದ ಆಮ್ ಆದ್ಮಿ ಪಕ್ಷದವರಿಗೆ ಗದರಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದೀಗ ಪಾವಗಡ ಶಾಸಕ ಹೆಚ್ವಿ ವೆಂಕಟೇಶ್ (HV Venkatesh) ಅವರು ಸ್ಪಷ್ಟನೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ನಾನು ಆಮ್ ಆದ್ಮಿ ಪಕ್ಷದ (Aam Aadmi Party) ಮುಖಂಡರಿಗೆ ಗದರಿಸಿ ಕಳುಹಿಸದೇ ಇದ್ದಿದ್ರೆ ಅಲ್ಲಿದ್ದ ನೊಂದ 40 ಕುಟುಂಬದ ಸದಸ್ಯರು ಅವರ ಮೇಲೆ ದಾಳಿ ಮಾಡುತಿದ್ರು. ಮುಖ್ಯಮಂತ್ರಿಗಳ ಆಶಯದಂತೆ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಅರ್ಜಿ ಕೊಡುತಿದ್ದರು. ನಾನು, ತಹಶಿಲ್ದಾರ್, ಎಸಿ ಸೇರಿ ಸಮಸ್ಯೆ ಬಗೆಹರಿಸುತ್ತಿದ್ದೆವು. ಆಮ್ ಆದ್ಮಿ ಪಕ್ಷದ ರಾಮಾಂಜಿನಪ್ಪ ಮತ್ತು ತಿಪ್ಪೇಸ್ವಾಮಿ ಏಕಾಏಕಿ ಬಂದು ಅರ್ಜಿ ಕೊಟ್ಟರು. ಅಲ್ಲದೇ ಮಾತನಾಡಲು ಮೈಕ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಇದನ್ನೂ ಓದಿ: ಡಿಕೆಶಿ ಪ್ರಜಾಸೇವಾ ಆಂದೋಲನದಲ್ಲಿ `ಕೈ’ ಶಾಸಕನ ದರ್ಪ – ಸಮಸ್ಯೆ ಹೇಳಲು ಬಂದವರ ಮೇಲೆ ಧಿಮಾಕು
ಅವರು ತಂದ ಅರ್ಜಿ 40 ಕುಟುಂಬವನ್ನು ಒಕ್ಕಲೆಬ್ಬಿಸುವಂತದಾಗಿತ್ತು. ಆ 40 ಕುಟುಂಬದ ಸದಸ್ಯರು ಅಲ್ಲೇ ಇದ್ರು. ಒಂದು ವೇಳೆ ಇವರು ಮೈಕಲ್ಲಿ ಅವರ ವಿರುದ್ಧ ಮಾತಾಡಿದ್ರೆ ಅವರೆಲ್ಲ ಸೇರಿ ಇವರ ಮೇಲೆ ದಾಳಿ ಮಾಡ್ತಿದ್ರು. ಆಗ ಶಾಸಕರೇ ಛೂ ಬಿಟ್ಟು ದಾಳಿ ಮಾಡಿದ್ದಾರೆ ಎಂದು ಇವರೇ ಅಪಪ್ರಚಾರ ಮಾಡುತಿದ್ದರು. ಈ ಮುನ್ಸೂಚನೆ ತಿಳಿದು ನಾನು ಗದರಿಸಿ ಆಮ್ ಆದ್ಮಿ ಪಕ್ಷದ ಮುಖಂಡರನ್ನು ಕಳಿಸಿದ್ದೇನೆ. ಇವರು ಹಿಡನ್ ಕ್ಯಾಮೆರಾ ಹಾಕಿಕೊಂಡು ಬಂದು ನನ್ನನ್ನು ಬ್ಲಾಕ್ಮೇಲ್ ಮಾಡಲು ಪ್ರಯತ್ನ ಪಟ್ಟರು. ಅವರ ಉದ್ದೇಶ ಈಡೇರಲಿಲ್ಲ. ಹಾಗಾಗಿ ವಿಡಿಯೋ ಮಾಡಿ ಅಪಪ್ರಚಾರ ಮಾಡಿದ್ರು ಎಂದು ತಿಳಿಸಿದ್ದಾರೆ.
ಇವರು ಮೂರು, ನಾಲ್ಕು ವರ್ಷದಿಂದ ಪಾವಗಡ ತಾಲೂಕಿನಲ್ಲಿ ಪ್ರತಿಯೊಬ್ಬರಿಗೂ ಕಾಟ ಕೊಟ್ಟುಕೊಂಡು ಬಂದಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೇವಸ್ಥಾನ ಮಾಡಿದ್ದಾರೆ. ಅದಕ್ಕೂ ಇವರುಗಳು ತೊಂದರೆ ಮಾಡಿದ್ರು, ಯಾರೋ ಒಬ್ಬರು 10 ಎಕರೆಯಲ್ಲಿ ಸೈಟ್ ಮಾಡಿ ಡೆವಲಪ್ಮೆಂಟ್ ಮಾಡ್ತಿದ್ದಾರೆ ಅಂದರೆ ಅವರ ಮೇಲೆ ಕೇಸ್ ಹಾಕಿ. ಅವರಿಗೆ ಮಾನಸಿಕವಾಗಿ ಹಿಂಸೆ ಕೊಡುತ್ತಾರೆ. ಬಳಿಕ ದುಡ್ಡಿಗೆ ಡಿಮ್ಯಾಂಡ್ ಮಾಡಿದ ವಸೂಲಿ ಗಿರಾಕಿಗಳು ಇವರು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡ ಚಿರತೆ ರಕ್ಷಣೆ ವೇಳೆ ದಾಳಿ – ಅರಣ್ಯ ಇಲಾಖೆ ಗಾರ್ಡ್ಗೆ ಗಾಯ
ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ಹಣ ತೆಗೆದುಕೊಂಡು ವಂಚನೆ ಮಾಡಿ ಪಾವಗಡಕ್ಕೆ ಬಂದಿದ್ದಾರೆ. ಪ್ರತಿನಿತ್ಯ ನಡೆಸುವ ಜನಸಂಪರ್ಕ ಸಭೆಯಲ್ಲಿ ಇವರುಗಳೇ ತಲೆಹರಟೆ ಸಮಸ್ಯೆಗಳ ಅರ್ಜಿ ಹಿಡಿದು ಬರುತ್ತಾರೆ, ಇವರು ನಿಜವಾಗಿಯೂ ಕಷ್ಟದಲ್ಲಿರೋರು ಆಗಿದ್ರೆ ನಾನು ಕುರಿಸಿಕೊಂಡು ಮಾತನಾಡಿಸಿ ಸಮಸ್ಯೆ ಬಗೆಹರಿಸಿ ಕಳುಹಿಸುತ್ತಿದ್ದೆ. ಆದರೆ ಇವರ ತಂಡ ಪಬ್ಲಿಸಿಟಿಗಾಗಿ ಬಂದಿರೋದು. ನಾನು ಶಾಸಕರ ಮುಂದೆ ಹಾಗೆ ಹೀಗೆ ಮಾತನಾಡಿದೆ ಅಂತ ಇನ್ನೊಂದು ಸ್ವಲ್ಪ ಜನರನ್ನ ಹೆದರಿಸೋದು ಇವರ ಕೆಲಸ ಎಂದು ಆಮ್ ಆದ್ಮಿ ಪಕ್ಷದ ನಡೆಯನ್ನು ಖಂಡಿಸಿದ್ದಾರೆ.ಇದನ್ನೂ ಓದಿ: ಎರಡನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ ಜರ್ಮನಿಯಲ್ಲಿ ಬಲಪಂಥೀಯ ಪಕ್ಷಕ್ಕೆ ಜಯ
