– ಸಿಎಂಗೆ ನೀವ್ಯಾರು ಗೊತ್ತಿಲ್ಲ ಎಂದ ಮಹಿಳೆ – ನಗೆಗಡಲಲ್ಲಿ ತೇಲಿದ ಡಿಕೆಶಿ
ಬೆಂಗಳೂರು: ಸಿಎಂ ಡಿ.ಕೆ ಶಿವಕುಮಾರ್ (D.K. Shivakumar) ಅವರು ಯಶವಂತಪುರದ (Yeshwantpur) ಎಪಿಎಂಸಿ (APMC) ಮಾರ್ಕೆಟ್‌ಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಈರುಳ್ಳಿ ಮಂಡಿಯಲ್ಲಿ ಮೂಟೆ ಮೇಲೆ ಕುಳಿತು ರೈತರ (Farmers) ಬಳಿ ಮಾಹಿತಿ ಪಡೆದಿದ್ದಾರೆ.
ತೂಕದಲ್ಲಿ ಮೋಸ ಇಲ್ವಾ ಎಂದು ರೈತರಿಗೆ ಸಿಎಂ ಪ್ರಶ್ನಿಸಿದ್ದಾರೆ. ಇದಕ್ಕೆ ತೂಕದಲ್ಲಿ ಮೊಸ ಇಲ್ಲ ಸಾರ್ ಎಂದು ರೈತರು ಹೇಳಿದ್ದಾರೆ. ಇದೇ ವೇಳೆ ಈ ಮಂಡಿಗೆ ಬರುವಂತೆ ನಿಮಗೆ ಯಾರಾದ್ರೂ ಒತ್ತಾಯ ಮಾಡ್ತಾರಾ? ಬ್ರೋಕರ್ಸ್ ಏನಾದ್ರೂ ಸಮಸ್ಯೆ ಮಾಡ್ತಾರಾ? ಕಮಿಷನ್ ತಗೆದುಕೊಳ್ತಿರಾ ಎಂದೆಲ್ಲ ರೈತರು ಹಾಗೂ ವ್ಯಾಪಾರಿಗಳಿಂದ ಮಾಹಿತಿ ಪಡೆದರು. ಈರುಳ್ಳಿ ಮುಗಿಯುತ್ತಿದ್ದಂತೆ ಬೆಳ್ಳುಳ್ಳಿ ಹಾಗೂ ತೆಂಗಿನಕಾಯಿ ಮಂಡಿಗೆ ಬೇಟಿ ನೀಡಿ ಮಾಹಿತಿ ಪಡೆದರು. ಇದನ್ನೂ ಓದಿ: ಸೆ.20ರಿಂದ 108 ಅಂಬುಲೆನ್ಸ್ ಸೇವೆ ಬಂದ್ – ನೌಕರರಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ

ಯಾವೋನೂ ಆಫೀಸರ್ ಇಲ್ಲ. ಒಬ್ಬೊಬ್ರು ಒಂದೊಂದು ರೇಟ್ ಹೇಳ್ಬೇಡಿ. ಚಿತ್ರದುರ್ಗ ಹಾಗೂ ಬೇರೆ ಕಡೆಗಳಲ್ಲಿ ವ್ಯಾಪಾರದ ಸಮಸ್ಯೆಯಿದೆ. ಆದ್ದರಿಂದ ನಾವು ಯಶವಂತಪುರ ಎಪಿಎಂಸಿಗೆ ಬರ್ತೀವಿ. ಮಧ್ಯವರ್ತಿಗಳ ಹಾವಳಿ ಇದೆ. 65 ಕೆಜಿಮೂಟೆಗೆ 50 ಕೆಜಿ ಲೆಕ್ಕ ಹಾಕ್ತಾರೆ ಎಂದು ರೈತರೊಬ್ಬರು ಇದೇ ವೇಳೆ ಆರೋಪಿಸಿದ್ದಾರೆ.
ಎಲ್ಲಿಂದ ಬಂದಿದ್ದೀರಿ? ರೇಟ್ ಸರಿಯಾಗಿ ಸಿಗ್ತಿದ್ಯಾ? ಎಷ್ಟು ಎಕರೆ ಜಮೀನಿದೆ? ಎಕರೆಗೆ 20-30 ಸಾವಿರ ಉಳಿಯುತ್ತಾ? ಕಳೆದ ವರ್ಷ ಹೇಗಿತ್ತು ಲಾಭ? ಮನೆಯಲ್ಲಿ ಎಷ್ಟು ಜನ ಮಕ್ಕಳು..? ಮನೆಗೆ ಕರೆಂಟ್ ಬಿಲ್ ಕಟ್ಟುತ್ತಿದ್ಯಾ? ಎಂದು ರೈತರೊಬ್ಬರಿಗೆ ವಿಚಾರಿಸಿದರು. ಈ ವೇಳೆ ಕರೆಂಟ್ ಇಲ್ಲ, ಜಮೀನಲ್ಲೇ ಸಣ್ಣ ಮನೆ ಕಟ್ಟಿಕೊಂಡಿದ್ದೀನಿ. ರಸ್ತೆ ಇಲ್ಲ, ಕರೆಂಟ್ ಸ್ವಲ್ಪ ಹೊತ್ತು ಕೊಡ್ತಾರೆ ಅಷ್ಟೇ ಎಂದು ಹೇಳಿದ್ದಾರೆ. ಇದಕ್ಕೆ ಸಿಎಂ- ಕರೆಂಟ್‌ಗೆ ನೀನು ಅಪ್ಲೈ ಮಾಡು. ಗ್ರಾಮಪಂಚಾಯ್ತಿಗೆ ಅರ್ಜಿ ಕೊಡು, ರಸ್ತೆ ಆಮೇಲೆ ನೋಡೋಣ ಎಂದು ರೈತನ ನಂಬರ್ ಪಡೆದರು.

ನಿಮ್ಮ ಹೆಂಗಸರಿಗೆ 2 ಸಾವಿರ ಬರ್ತಿದ್ಯಾ? ಗೃಹಲಕ್ಷ್ಮಿ ಎಲ್ಲರಿಗೂ ಬರ್ತಿದ್ಯಾ? ಗೃಹಜ್ಯೋತಿ ತಗೊಂಡಿದ್ದೀರಾ? ಹಣ ಬರ್ತಿದೆ ಕರೆಂಟ್ ಫ್ರೀ ಇದೆ ಸರ್ ಎಂದು ಚಳ್ಳಕೆರೆ ರೈತರೊಬ್ಬರು ಹೇಳಿದ್ದಾರೆ. ಇದಕ್ಕೆ ಸಿಎಂ, ನಿನಗೆ ಒಳ್ಳೇದ್ ಆಗ್ಲಿ ಎಂದರು.
ಆಲೂಗಡ್ಡೆ ಮಂಡಿಗೆ ಸಿಎಂ ಬೇಟಿ ನೀಡಿ, ಕ್ವಾಲಿಟಿ ಬಗ್ಗೆ ವಿಚಾರಿಸಿದ್ದಾರೆ. ವ್ಯಾಪಾರಿಗಳು ಇಲ್ಲಿ ಬಂದು ತಗೋತಾರೆ. 6% ಕಮೀಷನ್ ತಗೋತಾರೆ. ಇಲ್ಲಿಂದ ತಗೊಂಡ್ ಹೋಗಿ ಚಿಕ್ಕಬಳ್ಳಾಪುರದಲ್ಲಿ ಮಾರಬೇಕು ಎಂದು ಮಹಿಳೆ ಹೇಳಿದ್ದಾರೆ.
ಹರಾಜದಲ್ಲಿ ಏನೂ ಮೋಸ ಇಲ್ವಾ? ಎಂಬ ಮಹಿಳೆಯ ಪ್ರಶ್ನೆಗೆ, ಮಹಿಳೆ ಇಲ್ಲ ಸ್ವಾಮಿ ಎಂದರು. ತಿಂಗಳಿಗೆ ಎಷ್ಟು ಸರಿ ಎಪಿಎಂಸಿಗೆ ಬರ್ತೀರಾ? ಎಷ್ಟು ದಿನ ಬೇಕು ಇಷ್ಟು ಮೂಟೆ ವ್ಯಾಪಾರ ಮಾಡೋಕೆ? ಎಂದೆಲ್ಲ ವಿಚಾರಿಸಿದರು.
ಇದೇ ವೇಳೆ ಎರಡು ಸಾವಿರ ಬರ್ತಿದ್ಯಾ? ಕರೆಂಟ್ ಫ್ರೀ? ಬಸ್ಸಲ್ಲಿ ಕಾಸ್ ಕೊಡ್ತೀಯಾ? ಇದೆಲ್ಲ ಯಾರು ಮಾಡಿದ್ದು ಎಂದಿದ್ದಕ್ಕೆ ಮಹಿಳೆ ಸಿದ್ದರಾಮಯ್ಯ ಮಾಡಿದ್ದು, ನಾವು ಇಂದಿರಾಗಾಂಧಿ ಕಾಲದಿಂದ್ಲೂ ಕಾಂಗ್ರೆಸ್‌ಗೆ ವೋಟ್ ಹಾಕ್ತೀವಿ ಎಂದರು. ಇದೇ ವೇಳೆ ನಾನ್ಯಾರು ಅಂತ ಗೊತ್ತಾ ಎಂದ ಡಿಕೆಶಿಗೆ ಮಹಿಳೆ ಮಗ್ಧತೆಯಿಂದ ಇಲ್ಲ ಸ್ವಾಮಿ ಎಂದಿದ್ದು, ಡಿಕೆಶಿ ಮಂದಹಾಸ ಬೀರಿದ್ದಾರೆ.
ಈ ವೇಳೆ ರೈತರು, ನೀವು ಬಂದ ಮೇಲೆ ಅನುಕೂಲ ಆಗ್ತಾ ಇದೆ. 30 ರಿಂದ 40 ವರ್ಷದಿಂದ ಎಪಿಎಂಸಿಗೆ ಯಾರು ಬಂದಿಲ್ಲ. ಕೃಷಿ ಸಚಿವರು ಕೂಡ ಯಾರು ಬಂದಿಲ್ಲ. ನೀವು ಬಂದಿದ್ದೀರಿ ಎಂದು ಡಿಕೆಶಿ ಬೇಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 7.5% ಮೀಸಲಾತಿ – ಕರಡು ನಿಯಮ ಪ್ರಕಟ
