ತುಮಕೂರು: ಇತ್ತೀಚಿಗಷ್ಟೇ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಪ್ರಜಾಸೇವೆ ಇಲಾಖೆಗೆ ಚಾಲನೆ ನೀಡಿದರು. ಇದರ ಬೆನ್ನಲ್ಲೇ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಮಸ್ಯೆ ಹೇಳಲು ಬಂದವರ ಮೇಲೆಯೇ ಪಾವಗಡ ಕಾಂಗ್ರೆಸ್ ಶಾಸಕ ಹೆಚ್.ವಿ ವೆಂಕಟೇಶ್ (HV Venkatesh) ದರ್ಪ ತೋರಿದ್ದಾರೆ.
ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆಯಲ್ಲಿ ಶಾಸಕ ಹೆಚ್.ವಿ ವೆಂಕಟೇಶ್ ನೇತೃತ್ವದಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ತಹಶೀಲ್ದಾರ್, ಇಒ ಸೇರಿದ್ದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಇದನ್ನೂ ಓದಿ:ಡಿ ವೈಡರ್‌ಗೆ ಕಾರು ಡಿಕ್ಕಿ – ತಿಮ್ಮಪ್ಪನ ದರ್ಶನ ಪಡೆದು ವಾಪಸ್ಸಾಗ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವು
ಈ ವೇಳೆ ಅರ್ಜಿ ಕೊಡಲು ಬಂದವರಿಗೆ ಏಯ್ ಅರ್ಜಿ ಕೊಟ್ಟು ಹೋಗ್ತಿರಬೇಕು. ಆಯ್ತು ಹೋಗು, ಪರಿಶೀಲನೆ ಮಾಡ್ತೀವಿ ಹೋಗು, ತಿರುಗಿ ಮಾತನಾಡಿದ್ರೆ ಅಷ್ಟೇ ಎಂದು ಶಾಸಕ ಹೆಚ್‌ವಿ ವೆಂಕಟೇಶ್ ಧಮ್ಕಿ ಹಾಕಿದ್ದಾರೆ. ಆಮ್ ಆದ್ಮಿ ಅಧ್ಯಕ್ಷ ತಿಪ್ಪೇಸ್ವಾಮಿ ಹಾಗೂ ರಾಮಾಂಜಿನಪ್ಪ ಅವರು, ವೈ.ಎನ್ ಹೊಸಕೋಟೆ ಗ್ರಾಮದ ಸರ್ವೇ ನಂಬರ್ 245/2ರಲ್ಲಿ 3 ಎಕರೆ ಸರ್ಕಾರಿ ಸಂತೆ ಜಾಗ ಒತ್ತುವರಿ ಆಗಿತ್ತು. ಪ್ರಭಾವಿಗಳು ಮನೆ ನಿರ್ಮಾಣ ಮಾಡಿದ್ದಾರೆ. ಈ ಜಾಗವನ್ನು ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ದಾರೆ. ಅರ್ಜಿ ನೋಡುತ್ತಿದ್ದಂತೆ ಶಾಸಕರು ಆಕ್ರೋಶಗೊಂಡಿದ್ದಾರೆ.
ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ: ಡಿವೈಡರ್‌ಗೆ ಕಾರು ಡಿಕ್ಕಿ – ತಿಮ್ಮಪ್ಪನ ದರ್ಶನ ಪಡೆದು ವಾಪಸ್ಸಾಗ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವು
