BBK 13: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BBK Season 13) ಕನ್ನಡ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಆಗಿದ್ದು, ಈಗಾಗಲೇ 8 ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಮೊಟ್ಟ ಮೊದಲ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಿಗ್ಬಾಸ್ ಮನೆಗೆ ಸ್ಪರ್ಧಿ ಕಿರಣ್ ಶಾಸ್ತ್ರಿ ಎಂಟ್ರಿ ಕೊಟ್ಟಿದ್ದಾರೆ.
ಉತ್ತರ ಕರ್ನಾಟಕದಿಂದ ಬಂದಿರುವ ಕಿರಣ್ ಶಾಸ್ತ್ರಿ, ತಮ್ಮ ಜವಾರಿ ಮಾತು, ಇನೊಸೆನ್ಸ್ ಹಾಗೂ ನೇರ ಮಾತಿನಿಂದಲೇ ಗಮನ ಸೆಳೆದಿದ್ದಾರೆ. ಅಗ್ನಿ ಪರೀಕ್ಷೆಯಲ್ಲಿ ಜ್ಯಾಕ್ಪಾಟ್ ಗೆದ್ದು ಕಿಚ್ಚ ಸುದೀಪ್ ಅವರೊಂದಿಗೆ ಸ್ಟೇಜ್ ಹಂಚಿಕೊಂಡಿದ್ದಾರೆ.
ನರ್ವಸ್ ಆಗಿಯೇ ಸ್ಟೇಜ್ಗೆ ಎಂಟ್ರಿ ಕೊಟ್ಟ ಕಿರಣ್ ಶಾಸ್ತ್ರಿ, ತಮ್ಮ ಬಗ್ಗೆ ಮಾತನಾಡುವ ವೇಳೆ ಸ್ನೇಹಿತರ ಸಹಾಯದ ಬಗ್ಗೆಯೂ ಹಲವು ವಿಚಾರಗಳನ್ನು ಹಂಚಿಕೊಂಡರು. ತಮ್ಮ ವಿಡಿಯೋಗಳನ್ನು ಸ್ನೇಹಿತರೇ ಮಾಡಿರುವುದಾಗಿ ಹೇಳಿದರು. ಬಿಗ್ಬಾಸ್ ಗೆಲ್ಲುತ್ತೀರಾ ಎಂದು ಕೇಳಿದಾಗ, ಅದನ್ನು ಜನರಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ಜವಾರಿ ಮಾತಿನಲ್ಲೇ ಎಲ್ಲರನ್ನೂ ನಗಿಸಿದ ಕಿರಣ್ ಶಾಸ್ತ್ರಿ, ಬೋರ್ಡಿಂಗ್ ಪಾಸ್ ಪಡೆದು ಬಿಗ್ಬಾಸ್ ಮನೆಗೆ ತೆರಳುವ ಮುನ್ನ ಕಿಚ್ಚ ಸುದೀಪ್ ಒಂದು ಟಾಸ್ಕ್ ನೀಡಿದ್ದಾರೆ. ಈಗಾಗಲೇ ಒಳಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಭವಿಷ್ಯ ಹೇಳುವಂತೆ ಸೂಚಿಸಿದ್ದಾರೆ.
ಅದರಂತೆ ಕಿರಣ್ ಶಾಸ್ತ್ರಿ ಮೊದಲಿಗೆ ಓಂ ಪ್ರಕಾಶ್ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇನ್ನು ವಿನಯಾ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್ ಜೊತೆ ಮಾತನಾಡುತ್ತಲೇ ಸಣ್ಣದಾಗಿ ಕಿರಿಕ್ ಮಾಡಿಕೊಂಡಿರುವ ಕಿರಣ್, ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಯಾವ ರೀತಿ ಆಟ ಆಡುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇದೀಗ ಬಿಗ್ಬಾಸ್ ಮನೆಯಲ್ಲಿ ಜಗ್ಗ ಮಮ್ಮಿ ಅಲಿಯಾಸ್ ಜಗದೀಶ್, ಸೌಂದರ್ಯ ಶೆಟ್ಟಿ, ಅವಿನಾಶ್ ಶತಮರ್ಷನ, ಪ್ರಥಮಾ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ ಭಟ್, ಕಾವ್ಯ ಗೌಡ, ಓಂ ಪ್ರಕಾಶ್ ಹಾಗೂ ಕಿರಣ್ ಶಾಸ್ತ್ರಿ ಎಂಟ್ರಿ ಕೊಟ್ಟಿದ್ದಾರೆ.
