ಹಾಸನ: ಜಿಲ್ಲೆಯ ಶಾಂತಿಗ್ರಾಮದಲ್ಲಿ (Shanthigrama) ದನದ ದೊಡ್ಡಿಯಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಕೊನೆಗೂ ಬೇರೆಡೆ ಶಿಫ್ಟ್ ಮಾಡಲಾಗಿದೆ. ಹಾಸ್ಟೆಲ್‌ನ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಹೊಳೆನರಸೀಪುರ (Holenarasipura) ತಾಲೂಕಿನ, ಹಳ್ಳಿಮೈಸೂರು ಗ್ರಾಮದ ಅಂಬೇಡ್ಕರ್ ವಸತಿ ಶಾಲೆಗೆ ಶಿಫ್ಟ್ ಸ್ಥಳಾಂತರಿಸಲಾಗಿದೆ.
ಹಾಸನ (Hassan) ತಾಲೂಕಿನ ಶಾಂತಿಗ್ರಾಮದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ (Ambedkar Residential School) ವಿದ್ಯಾರ್ಥಿಗಳು ಅನುಭವಿಸುತ್ತಿರುವ ನರಕಯಾತನೆಯನ್ನು ಪಬ್ಲಿಕ್ ಟಿವಿ ಎಳೆಎಳೆಯಾಗಿ ಸುದ್ದಿ ಪ್ರಸಾರ ಮಾಡಿತ್ತು. ವರದಿಯಾದ ಎರಡೇ ಗಂಟೆಯಲ್ಲಿ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರನ್ನ ತರಾಟೆಗೆ ತೆಗೆದುಕೊಂಡು ಕೂಡಲೇ ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡುವಂತೆ ಸೂಚಿಸಿದ್ದರು. ಇದನ್ನೂ ಓದಿ: 5 ವರ್ಷಗಳಿಂದ ದನದ ಕೊಟ್ಟಿಗೆಯಂತಿರುವ ಶೆಡ್‌ನಲ್ಲೇ 172 ವಿದ್ಯಾರ್ಥಿಗಳ ವಾಸ – 92 ಗಂಡು ಮಕ್ಕಳಿಗೆ ಐದೇ ಶೌಚಾಲಯ, 80 ಹೆಣ್ಣು ಮಕ್ಕಳಿಗೆ ಇಲ್ಲ ಕನಿಷ್ಠ ಸೌಕರ್ಯ

ಸಚಿವರ ಸೂಚನೆ ಮೇರೆಗೆ ಇವತ್ತು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಆದರೆ ಪೋಷಕರು ಹೋಗೋಕೆ ಬರೋಕೆ ದೂರ ಆಗುತ್ತೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶೆಡ್‌ನಲ್ಲಿ ಮಕ್ಕಳ ವಾಸ್ತವ್ಯಕ್ಕೆ ಸಚಿವ ಶಿವಲಿಂಗೇಗೌಡ ಗರಂ – ನಿನ್ನ ಮಕ್ಕಳಾಗಿದ್ರೆ ಅಲ್ಲೇ ಮಲಗಿಸ್ತಿದ್ಯಾ? ಅಂತ ಅಧಿಕಾರಿಗೆ ತರಾಟೆ
