ಬೆಂಗಳೂರು: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ಮುಗಿದು ಸುಮಾರು ಮೂರು ತಿಂಗಳು ಕಳೆದರೂ, ಮಧ್ಯಪ್ರಾಚ್ಯದ ಕೆಲ ದೇಶಗಳ ನೌಕಾ ನೆಲೆಗಳು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಇದರ ಎಫೆಕ್ಟ್ ಇದೀಗ ಬೆಂಗಳೂರಿನ ಡ್ರೈ ಫ್ರೂಟ್ಸ್ ಮಾರುಕಟ್ಟೆ ಮೇಲೂ ಬಿದ್ದಿದೆ. ಡ್ರೈ ಫ್ರೂಟ್ಸ್ ಸಪ್ಲೈ (Dry Fruits) ಕಡಿಮೆಯಾಗಿದ್ದು, ಬೆಲೆಗಳು ಶೇ.30ರಿಂದ 40ರಷ್ಟು ಏರಿಕೆಯಾಗಿದೆ.
ಇರಾನ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಿಂದ ರಾಜ್ಯಕ್ಕೆ ಬರುತ್ತಿದ್ದ ಡ್ರೈ ಫ್ರೂಟ್ಸ್ ಸಪ್ಲೈ ಬಹುತೇಕ ಸ್ಥಗಿತವಾಗಿದೆ. ಕಳೆದ ಮೂರು ತಿಂಗಳಿನಿಂದ ಬೆಂಗಳೂರಿಗೆ ಬರುತ್ತಿದ್ದ ಡ್ರೈ ಫ್ರೂಟ್ಸ್ನಲ್ಲಿ ಕೊರತೆ ಎದುರಾಗಿದೆ.
ಇರಾನ್ ಸೇರಿದಂತೆ ಮಧ್ಯಪ್ರಾಚ್ಯದ ಹಲವು ದೇಶಗಳು ಡ್ರೈಫ್ರೂಟ್ಸ್ ಉತ್ಪಾದನೆಗೆ ಹೆಸರುವಾಸಿಯಾಗಿವೆ. ಆದರೆ, ಸುಮಾರು ಮೂರು ತಿಂಗಳ ಹಿಂದೆ ನಡೆದ ಇರಾನ್-ಇಸ್ರೇಲ್-ಅಮೆರಿಕ ಯುದ್ಧದ ಎಫೆಕ್ಟ್ನಿಂದ ಇರಾನ್ನ ಬಂದರ್ ಅಬ್ಬಾಸ್ ಸೇರಿದಂತೆ ಹಲವು ನೌಕಾ ನೆಲೆಗಳು ಹಾನಿಗೊಳಗಾಗಿವೆ. ಇವು ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬಂದಿಲ್ಲ ಎನ್ನಲಾಗುತ್ತಿದೆ.
ಹೀಗಾಗಿ ಇರಾನ್, ಸೌದಿ, ಟುನೀಷಿಯಾ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳಿಂದ ಬೆಂಗಳೂರಿಗೆ ಆಮದಾಗುತ್ತಿದ್ದ ಬಹುತೇಕ ಡ್ರೈ ಫ್ರೂಟ್ಸ್ ಸಪ್ಲೈ ಸ್ಥಗಿತವಾಗಿದೆ. ಇನ್ನು ಕೆಲ ಸ್ಥಳಗಳಿಂದ ಬರುತ್ತಿದ್ದ ಸಪ್ಲೈ ಪ್ರಮಾಣವೂ ಕಡಿಮೆಯಾಗಿದೆ. ಇದರ ಜೊತೆಗೆ ಡ್ರೈ ಫ್ರೂಟ್ಸ್ನ್ನು ಬೆಂಗಳೂರಿಗೆ ತರಲು ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಿಪ್ಪಿಂಗ್ ಲೈನ್ ಚಾರ್ಜ್ ಕೂಡ ಡಬಲ್ ಆಗಿದೆ. ಒಂದು ಕಂಟೇನರ್ಗೆ ಈ ಹಿಂದೆ 1,500 ಡಾಲರ್ ಇದ್ದ ಚಾರ್ಜ್ ಇದೀಗ 4,000 ಡಾಲರ್ಗೆ ಏರಿಕೆಯಾಗಿದೆ. ಇದರ, ಪರಿಣಾಮ ಡ್ರೈ ಫ್ರೂಟ್ಸ್ ಬೆಲೆಯಲ್ಲಿ ಶೇ.30ರಿಂದ 40ರಷ್ಟು ಏರಿಕೆಯಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಹಿಂದ ಸಮಾವೇಶ ಮಾಡುತ್ತಿಲ್ಲ: ಯತೀಂದ್ರ ಸಿದ್ದರಾಮಯ್ಯ
ಇನ್ನು ಪ್ರಮುಖವಾಗಿ ಕೇಸರಿ ಕೆ.ಜಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ತಲುಪಿದೆ. ಮಾರ್ಮಾ ಬಾದಾಮಿ ಕೆ.ಜಿಗೆ 4,000 ರೂಪಾಯಿ, ಅಂಜೂರ ಕೆ.ಜಿಗೆ 2,000 ರೂಪಾಯಿ ಹಾಗೂ ಗೋಡಂಬಿ ಕೆ.ಜಿಗೆ 1,300 ರೂಪಾಯಿಯಾಗಿದೆ.
ಬೆಲೆ ಏರಿಕೆಯಿಂದಾಗಿ ಮದುವೆ ಸೀಸನ್ನಲ್ಲಿ ಡ್ರೈ ಫ್ರೂಟ್ಸ್ನ್ನು ಉಡುಗೊರೆಯಾಗಿ ನೀಡುತ್ತಿದ್ದವರು ಕೂಡ ಇದೀಗ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ ಸಪ್ಲೈ ಇಲ್ಲದ ಕಾರಣ ಡ್ರೈ ಫ್ರೂಟ್ಸ್ ಅಂಗಡಿಗಳನ್ನು ಕ್ಲೋಸ್ ಮಾಡುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ವರ್ತಕರು.
ಇನ್ನು ಡ್ರೈ ಫ್ರೂಟ್ಸ್ ಆರೋಗ್ಯದ ದೃಷ್ಟಿಯಿಂದ ಸೇವಿಸುವುದು ಅಗತ್ಯ. ಆದರೆ, ಬೆಲೆ ಏರಿಕೆಯಿಂದಾಗಿ ಖರೀದಿ ಕಷ್ಟವಾಗಿದೆ ಎನ್ನುತ್ತಾರೆ ಗ್ರಾಹಕರು.
ಡ್ರೈ ಫ್ರೂಟ್ಸ್ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಬರೆ ಎಳೆಯುತ್ತಿದೆ. ಇತ್ತ ಬೆಲೆ ಏರಿಕೆಯಿಂದ ವ್ಯಾಪಾರ ಕಡಿಮೆಯಾಗಿದ್ದು, ಡ್ರೈ ಫ್ರೂಟ್ಸ್ ವರ್ತಕರು ಕೂಡ ಕಂಗಾಲಾಗಿದ್ದಾರೆ.ಇದನ್ನೂ ಓದಿ: ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗಿ: ಡಿ.ಕೆ ಶಿವಕುಮಾರ್
