– ಈಗ ಅದೇ ಅಭ್ಯರ್ಥಿಗಳಿಂದ ಸಿಐಡಿ ಮುಂದೆ ತಪ್ಪೊಪ್ಪಿಗೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC)ದ ಪಶುವೈದ್ಯಕೀಯ ಹುದ್ದೆಯ ನೇಮಕಾತಿ ಹಗರಣದಲ್ಲಿ ಬಗೆದಷ್ಟೂ ಸ್ಫೋಟಕ ರಹಸ್ಯಗಳು ಬಯಲಾಗುತ್ತಿವೆ.
ಬಂಧನಕ್ಕೆ ಒಳಗಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಹಾಗೂ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಗಾಳಕ್ಕೆ ಬಿದ್ದಿರೋದು ಬರೋಬ್ಬರಿ 15 ಅಭ್ಯರ್ಥಿಗಳು ಅನ್ನೋದು ತನಿಖೆ ವೇಳೆ ಬಯಲಾಗಿದೆ.

ಹೌದು. ಸುಮಾರು 15 ಅಭ್ಯರ್ಥಿಗಳು ಕಿಂಗ್‌ಪಿನ್ ಕನ್ನಾಳೆ ಬಳಿ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದರಂತೆ, ಈಗ ಅದೇ ಅಭ್ಯರ್ಥಿಗಳು ಸಿಐಡಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ.
ತಾವು ಇಡೀ ಪ್ರಕರಣದಲ್ಲಿ ಯಾವ ರೀತಿ ಭಾಗಿಯಾಗಿದ್ವಿ? ನಮಗೆ ಏನಂಥ ಭರವಸೆ ನೀಡಿದ್ರು? ಮತ್ತೆ ಹಣ ಯಾವಾಗ ಕೊಟ್ವಿ ಅನ್ನೋದೆಲ್ಲದರ ಮಾಹಿತಿಯನ್ನ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ.
ಇವರಷ್ಟೇ ಅಲ್ಲದೇ, ಇನ್ನೂ 5 ರಿಂದ 10 ಅಭ್ಯರ್ಥಿಗಳು ಇದೆ ರೀತಿ ಅಡ್ಡದಾರಿ ಹಿಡಿದಿದ್ದಾರೆ ಎಂಬ ಅನುಮಾನ ಮೂಡಿದೆ. ಹೀಗಾಗಿ ಗುಂಪಿನಲ್ಲಿರೋ ಕಳ್ಳ ಬೆಕ್ಕನ್ನು ಹುಡುಕೋ ಪ್ರಯತ್ನವನ್ನೂ ಸಿಐಡಿ ಮಾಡ್ತಿದೆ.
