– ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಹೆಸರೇ ಮುಂದುವರಿಕೆ!
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರು ಬದಲಾವಣೆಯಾಗಲಿದೆ ಎಂಬ ವದಂತಿಗಳಿಗೆ ಫ್ರಾಂಚೈಸಿ ಅಧ್ಯಕ್ಷ ಆರ್ಯಮನ್ ಬಿರ್ಲಾ ತೆರೆ ಎಳೆದಿದ್ದಾರೆ.
🚨 GREAT NEWS FOR RCB FANS 🔥
Aryaman Birla said “Royal Challengers Bengaluru – the name will not change. It’s a huge brand & we love the name”. [RevSportz] pic.twitter.com/UnZRaJAKKj
— Johns. (@CricCrazyJohns) September 5, 2026
ಇತ್ತೀಚಿನ ಮಾಲೀಕತ್ವ ಬದಲಾವಣೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ತಂಡದ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಇದು ದೊಡ್ಡ ಬ್ರ್ಯಾಂಡ್, ನಮಗೆ ಈ ಹೆಸರು ತುಂಬಾ ಇಷ್ಟ ಎಂದಿದ್ದಾರೆ RCB ಅಧ್ಯಕ್ಷ ಆರ್ಯಮನ್ ಬಿರ್ಲಾ.

ಮಾಲೀಕತ್ವ ಬದಲಾವಣೆ ಬಳಿಕ ಶುರುವಾಗಿತ್ತು ಗೊಂದಲ
IPL ಫ್ರಾಂಚೈಸಿಯ ಕಾರ್ಪೊರೇಟ್ ಪುನರ್ರಚನೆಯಿಂದಾಗಿ ಹೊಸ ನಾಯಕತ್ವ ಬಂದ ಹಿನ್ನೆಲೆಯಲ್ಲಿ ತಂಡದ ಹೆಸರು ಹಾಗೂ ಬ್ರ್ಯಾಂಡ್ ಬದಲಾಗಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿತ್ತು. ಸುಮಾರು 2 ದಶಕಗಳಿಂದ ಅಭಿಮಾನಿಗಳ ಭಾವನೆಗಳೊಂದಿಗೆ ಬೆಸೆದುಕೊಂಡಿರುವ ಐತಿಹಾಸಿಕ ಹೆಸರು ಮತ್ತು ಲೋಗೋವನ್ನು ಹೊಸ ಆಡಳಿತ ಬದಲಾಯಿಸಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದ್ದವು. ಆದರೆ ಇದೀಗ ಆ ಎಲ್ಲ ಊಹಾಪೋಹಗಳಿಗೆ ಬಿರ್ಲಾ ಅವರೇ ತೆರೆ ಎಳೆದಿದ್ದಾರೆ.
ಶತಕೋಟಿ ಡಾಲರ್ ಬ್ರ್ಯಾಂಡ್ ಮೇಲೆ ಕಣ್ಣು!
ಇಂದಿನ ಫ್ರಾಂಚೈಸಿ ಕ್ರೀಡಾ ಜಗತ್ತಿನಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂಬ ಹೆಸರು ಒಂದು ದೊಡ್ಡ ವಾಣಿಜ್ಯ ಬ್ರ್ಯಾಂಡ್ ಆಗಿ ಬೆಳೆದಿದೆ. ಒಂದು ಶತಕೋಟಿ ಡಾಲರ್ಗಿಂತಲೂ ಹೆಚ್ಚಿನ ಮೌಲ್ಯವನ್ನ ಹೊಂದಿರುವ RCB, ಏಷ್ಯಾದ ಕ್ರೀಡಾ ಫ್ರಾಂಚೈಸಿಗಳ ಪೈಕಿ ಅತ್ಯಂತ ಬಲಿಷ್ಠ ವಾಣಿಜ್ಯ ಬ್ರ್ಯಾಂಡ್ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ತಂಡದ ಹೆಸರು ಬದಲಿಸುವುದು ಈಗಾಗಲೇ ನಿರ್ಮಿಸಿರುವ ಅಪಾರ ಬ್ರ್ಯಾಂಡ್ ಮೌಲ್ಯಕ್ಕೆ ಹೊಡೆತ ನೀಡಬಹುದು.
