ಬೆಂಗಳೂರು: ಹೆಚ್ಎಎಲ್ (HAL) ಪೊಲೀಸ್ ಠಾಣೆಯ ಸಮೀಪ GBA ಕಾಮಗಾರಿ ವೇಳೆ ಗ್ಯಾಸ್ ಪೈಪ್ಗೆ ಹಾನಿಯಾಗಿ ಗ್ಯಾಸ್ ಸೋರಿಯಾಗುತ್ತಿದೆ.
ಜಿಬಿಎ ಕಾಮಗಾರಿ ವೇಳೆ ಮನೆಗಳಿಗೆ ಸಂಪರ್ಕ ನೀಡುವ ಭೂಗತ ಗೇಲ್ ಗ್ಯಾಸ್ ಪೈಪ್ಗೆ ಡ್ಯಾಮೆಜ್ ಉಂಟಾಗಿದೆ. ಇದರಿಂದ 8 ಅಡಿಯಷ್ಟು ಎತ್ತರಕ್ಕೆ ಗ್ಯಾಸ್ ಚಿಮ್ಮುತ್ತಿದೆ. ಗ್ಯಾಸ್ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಇದನ್ನೂ ಓದಿ: ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್ಗೆ ತೆರಳಲು ಮುಂದಾದ ಪತ್ನಿಯ ಹತ್ಯೆ – ಆರೋಪಿ ಅರೆಸ್ಟ್
ಸ್ಥಳದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ. ಗ್ಯಾಸ್ ಸೋರಿಕೆಯ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ದೂರದಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಇದನ್ನೂ ಓದಿ: ಪತ್ನಿ ಜೊತೆ ಅಕ್ರಮ ಸಂಬಂಧ – ಪ್ರಿಯಕರನ ಕೊಂದು ಸಂಪಲ್ಲಿ ಬಚ್ಚಿಟ್ಟ ಪತಿರಾಯ
