ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC)ದ ಪಶುವೈದ್ಯಕೀಯ ನೇಮಕಾತಿಯಲ್ಲಿ ನಡೆದಿರೋ ಕರ್ಮಕಾಂಡ ಬಗೆದಷ್ಟೂ ಬಯಲಾಗ್ತಿದೆ. ಪರೀಕ್ಷೆಯಲ್ಲಿ ಪಾಸಾಗಲು ದುಡ್ಡು ಕೊಟ್ಟಿದ್ದ ದಡ್ಡ ಶಿಖಾಮಣಿಗಳಿಗೆ ಟ್ರೈನಿಂಗ್ ಕೊಡ್ತಿದ್ದ ಜಾಗಕ್ಕೆ ನಿಮ್ಮ ʻಪಬ್ಲಿಕ್ ಟಿವಿʼ (PUBLiC TV) ಲಗ್ಗೆಯಿಟ್ಟಿದೆ.

ಹೌದು. ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ವಿಲ್ಲಾ ಕಂ ರೆಸಾರ್ಟ್‌ನಲ್ಲಿ ದುಡ್ಡು ಕೊಟ್ಟ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಪ್ರಶ್ನೆಪತ್ರಿಕೆಯ ತರಬೇತಿ ನೀಡಲಾಗಿತ್ತು ಅನ್ನೋ ರಹಸ್ಯವನ್ನ ʻಪಬ್ಲಿಕ್ ಟಿವಿʼ ಬಯಲು ಮಾಡಿದೆ.
ಪರೀಕ್ಷೆಗೆ ಒಂದು ವಾರ ಮುಂಚಿತವಾಗಿ ಇದೇ ವಿಲ್ಲಾ ಕಂ ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಗಳ ತರಬೇತಿ ನೀಡಲಾಗುತ್ತಿತ್ತು. ಈ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು ರಹಸ್ಯವನ್ನ ಬಯಲು ಮಾಡಿದ್ದರು.

ಈ ಬೆನ್ನಲ್ಲೇ ಸಿಐಡಿ ಅಧಿಕಾರಿಗಳೂ ರೆಸಾರ್ಟ್ ಮೇಲೆ ದಾಳಿ ನಡೆಸಿ ಹಲವಾರು ಸಾಕ್ಷ್ಯಗಳನ್ನ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೇ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಕರೆತಂದು ಸ್ಥಳ ಮಹಜರು ಕೂಡ ನಡೆಸಲಾಗಿದೆ. ಇದನ್ನೂ ಓದಿ: Exclusive | ಹಗರಣದ ಹಣದಲ್ಲಿ 5 ಕೋಟಿ ಮೌಲ್ಯದ ಕೃಷಿ ಭೂಮಿ ಖರೀದಿಸಿದ್ದ ಕನ್ನಾಳೆ

ಸದ್ಯ ತನಿಖೆ ಮುಂದುವರಿಸಿರುವ ಅಧಿಕಾರಿಗಳ ತಂಡ ಅಕ್ರಮ ಇನ್ನೂ ಯಾವೆಲ್ಲಾ ರೀತಿ ನಡೆದಿದೆ ಎಂಬುದನ್ನ ಪತ್ತೆಹಚ್ಚಲು ಮುಂದಾಗಿದೆ. ಇದನ್ನೂ ಓದಿ: ಕೆಪಿಎಸ್‌ಸಿಗೆ ಸೇರಿದ ಬಳಿಕ 100 ಎಕರೆ ಜಮೀನು ಖರೀದಿ – ಶಿವಶಂಕರಪ್ಪ ಆಸ್ತಿ ರಹಸ್ಯ ಬಯಲು!
