ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಯಾವ ರಸ್ತೆಗೆ ಹೋದರೂ ಅಲ್ಲಿ ಎರಡು ವಿಚಾರಗಳು ಕಾಮನ್. ಒಂದು ಗುಂಡಿ, ಎರಡು ಟ್ರಾಫಿಕ್. ಗುಂಡಿ ಮುಕ್ತ ಮಾಡಲು ಸೆಪ್ಟೆಂಬರ್‌ವರೆಗೆ ಜಿಬಿಎಗೆ (GBA) ಸಚಿವರು ಡೆಡ್‌ಲೈನ್ ನೀಡಿದ್ರೇ, ಟ್ರಾಫಿಕ್ (Traffic) ಕಂಟ್ರೋಲ್ ಮಾಡಲು ಹೊಸ ಪ್ಲ್ಯಾನ್ ಅನ್ನ ಜಿಬಿಎ ಮಾಡಿಕೊಂಡಿದೆ.
ಬೆಂಗಳೂರಿನ ಅನೇಕ ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಇರೋದು ಸಾಮಾನ್ಯ. ಸಿಗ್ನಲ್‌ಗಳು ಜಂಪ್ ಆದ್ರು ಟ್ರಾಫಿಕ್ ಇದ್ದೇ ಇರುತ್ತದೆ. ಇದಕ್ಕೆ ಕಾರಣ ಸಿಗ್ನಲ್‌ಗಳ ಬಳಿಯ ಬಿಎಂಟಿಸಿ ಬಸ್ ನಿಲ್ದಾಣಗಳು. ಪ್ರಮುಖ ಮಹಾನಗರಗಳಲ್ಲಿ ಸಿಗ್ನಲ್ ಮುನ್ನ ಅಥವಾ ಸಿಗ್ನಲ್ ಆದ ಬಳಿಕ ಕನಿಷ್ಠ 70 ಮೀಟರ್ ಅಂತರದಲ್ಲಿ ಯಾವುದೇ ಬಸ್ ನಿಲ್ದಾಣ (Bus Stand) ಇರಬಾರದು ಅನ್ನೋ ನಿಯಮ ಕೂಡ ಇದೆ. ಅದರೆ ಅದು ಬೆಂಗಳೂರಿನಲ್ಲಿ ಸರಿಯಾಗಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಹಲವೆಡೆ ಟ್ರಾಫಿಕ್ ಸಮಸ್ಯೆ ಕಂಡು ಬರುತ್ತಿದೆ. ಇದನ್ನೂ ಓದಿ: ಬೊಲಿವಿಯಾ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ – 15 ಮಂದಿ ದುರ್ಮರಣ, 62 ಜನರಿಗೆ ಗಾಯ
ಸಿಗ್ನಲ್‌ಗಳ ಬಳಿಯ ಬಸ್ ನಿಲ್ದಾಣಗಳ ಬಗ್ಗೆ ಟ್ರಾಫಿಕ್ ಪೊಲೀಸರು ವರದಿ ನೀಡಿದ್ದಾರೆ. ಈ ವರದಿ ಆಧರಿಸಿ, ಬೆಂಗಳೂರಿನ 103 ಕಡೆ ಸಿಗ್ನಲ್‌ಗಳಲ್ಲಿ ಇರುವ ಬಸ್ ನಿಲ್ದಾಣವನ್ನ ಕನಿಷ್ಠ 50 ಮೀಟರ್ ಅಂತರಕ್ಕೆ ಸ್ಥಳಾಂತರ ಮಾಡಲು ಜಿಬಿಎ ಮುಂದಾಗಿದೆ.. ಈ ಬಗ್ಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವರ ಸೂಚನೆ ಮೇರೆಗೆ ಬಿಎಂಟಿಸಿ ಮತ್ತು ಜಿಬಿಎ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ. ಬಸ್ ನಿಲ್ದಾಣವನ್ನ ಶಿಫ್ಟ್ ಮಾಡುವುದರ ಜೊತೆಗೆ ಅಲ್ಲಿ ಸ್ವಚ್ಛತೆಯನ್ನ ಕೂಡ ಕಾಪಾಡಲು ಜಿಬಿಎ ಮುಂದಾಗಿದೆ. ಇದನ್ನೂ ಓದಿ: ಮೋದಿ ಮೆಚ್ಚಿದ ನಿಂಗಮ್ಮನಿಗೆ ಸಂಕಷ್ಟ – ಬೀದಿ ಬದಿ ವ್ಯಾಪಾರ ಮಾಡದಂತೆ ಜಿಬಿಎ ಅಧಿಕಾರಿಗಳ ಸೂಚನೆ
