– ದಾರ್ಚುಲಾದಲ್ಲಿ ಭೂಕುಸಿತದಿಂದ ಚೌಲಾನಿ ನದಿ ಭಾಗಶಃ ಬಂದ್
ಕಠ್ಮಂಡು: ವಿನಾಶಕಾರಿ ಪ್ರವಾಹದಲ್ಲಿ (Nepal Flood) ಸಾವಿರಾರು ಜನರನ್ನ ಕಳೆದುಕೊಂಡಿರುವ ನೇಪಾಳಕ್ಕೆ ಈಗ ಮತ್ತೊಂದು ಪ್ರವಾಹದ ಮುನ್ಸೂಚನೆ ಬಂದಿದೆ. ದಾರ್ಚುಲಾ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಚೌಲಾನಿ ನದಿಯ (Chaulani River) ಹರಿವಿಗೆ ಭಾಗಶಃ ಅಡ್ಡಿಯಾಗಿದೆ. ಇದರಿಂದ ನದಿಯ ಕೆಳಭಾಗದಲ್ಲಿ ವಾಸಿಸುವ ಜನರಿಗೆ ಹಠಾತ್ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
Fresh landslide in Nepal partially blocks a river
Water is already cutting through again
Reports say this is a localized event in far-western Nepal — unrelated to the much larger August 2026 flood disaster pic.twitter.com/e3Tte0Lgor
— Sabbir Ahmed (@Sabbiry5x) September 5, 2026
ಅಪಿ ಹಿಮಾಲ್ ಗ್ರಾಮೀಣ ಪುರಸಭೆಯ ಭಟ್ಟಾರ್ ಪ್ರದೇಶದಲ್ಲಿ ಭೂಕುಸಿತ (Landslide) ಸಂಭವಿಸಿದೆ. ಅಪಾರ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ನದಿಗೆ ಕುಸಿದಿವೆ. ಇದರಿಂದ ನದಿಯ ನೀರಿನ ಹರಿವು ಅಸ್ತವ್ಯಸ್ತಗೊಂಡಿದೆ. ಮತ್ತಷ್ಟು ಭೂಕುಸಿತ ಸಂಭವಿಸಿ ನದಿ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆಯಿದೆ. ಇದರಿಂದ ನೀರು ಏಕಾಏಕಿ ಉಕ್ಕಿ ಹರಿದು ಕೆಳಭಾಗದಲ್ಲಿ ದಿಢೀರ್ ಪ್ರವಾಹ ಉಂಟಾಗಬಹುದು ಎಂದು ದಾರ್ಚುಲಾ (Darchula) ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ನದಿಯ ದಡದಲ್ಲಿ ವಾಸಿಸುವ ನಿವಾಸಿಗಳು ಎಚ್ಚರಿಕೆಯಿಂದಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ದುರ್ಬಲ ಹಾಗೂ ಅಪಾಯದ ಪ್ರದೇಶಗಳಲ್ಲಿರುವ ಜನರಿಗೆ ಮಾಹಿತಿ ನೀಡಲು ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದ್ದು, ತುರ್ತು ಪರಿಸ್ಥಿತಿ ಎದುರಾದ್ರೆ ತಕ್ಷಣ ಸ್ಪಂದಿಸಲು ಸಿದ್ಧರಾಗಿದ್ದಾರೆ.

ಸುದೂರ್ಪಶ್ಚಿಮ ಮುಖ್ಯಮಂತ್ರಿ ಖಗ್ರಾಜ್ ಭಟ್ಟ ಅವರು ಸ್ಥಳೀಯ ಆಡಳಿತ ಮತ್ತು ಭದ್ರತಾ ಸಂಸ್ಥೆಗಳು ಹೈ ಅಲರ್ಟ್ನಲ್ಲಿ ಇರುವಂತೆ ಹಾಗೂ ಸಂಭವನೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಪ್ರವಾಹ ಮತ್ತು ವಿಪತ್ತು ಸಂಬಂಧಿತ ನೆರವಿಗಾಗಿ ಜಿಲ್ಲಾಡಳಿತ ತುರ್ತು ಸಂಪರ್ಕ ಸಂಖ್ಯೆಗಳನ್ನೂ ಬಿಡುಗಡೆ ಮಾಡಿದೆ.
ಚೌಲಾನಿ ನದಿಯಲ್ಲಿ ಸದ್ಯ ನೀರಿನ ಮಟ್ಟ ಸಾಮಾನ್ಯವಾಗಿಯೇ ಇದೆ ಎಂದು ಸಶಸ್ತ್ರ ಪೊಲೀಸ್ ಪಡೆ ತಿಳಿಸಿದೆ. ಆದರೆ ಪರಿಸ್ಥಿತಿಯ ಮೇಲೆ ನಿಗಾ ಇಡಲು ಮತ್ತು ಅಗತ್ಯವಿದ್ದಲ್ಲಿ ಸಮೀಪದ ಜನರಿಗೆ ಎಚ್ಚರಿಕೆ ನೀಡಲು ಬಾಲಾಂಚ್ನಲ್ಲಿರುವ ನೇಪಾಳ ಚಾಮೇಲಿಯಾ ಜಲವಿದ್ಯುತ್ ಯೋಜನೆಯ ಭದ್ರತಾ ನೆಲೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚೌಲಾನಿ ನದಿಯನ್ನ ʻಚಾಮೇಲಿಯಾʼ ಎಂದೂ ಕರೆಯಲಾಗುತ್ತದೆ. ಇದು ಅಪಿ ಹಿಮಾಲ್ ಪ್ರದೇಶದಲ್ಲಿ ಹುಟ್ಟಿ ಮುಂದೆ ಮಹಾಕಾಳಿ ನದಿಯನ್ನ ಸೇರುತ್ತದೆ. ಮಹಾಕಾಳಿ ನದಿಯು ನೇಪಾಳ-ಭಾರತ ಗಡಿಯ ಒಂದು ಭಾಗವನ್ನ ಕೂಡುತ್ತದೆ.
