ಲಾ ಪಾಜ್: ಬೊಲಿವಿಯಾದ ಸೇನಾ ನೆಲೆಯಲ್ಲಿ (Bolivia Military Base) ಸಂಭವಿಸಿದ ಸ್ಫೋಟದಲ್ಲಿ (Explosion) 10 – 15 ಮಂದಿ ಸಾವನ್ನಪ್ಪಿದ್ದು, 60 ಜನ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಏಳು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಬೊಲಿವಿಯಾದ ವಿಯಾಚಾ ನಗರದಲ್ಲಿರುವ ಸೇನಾ ನೆಲೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ನಡೆದ ಸ್ಥಳದಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ನೇಪಾಳ ಭೀಕರ ಪ್ರವಾಹ |ವಾರದ ಬಳಿಕ ತ್ರಿಶೂಲಿ ಸುರಂಗದಿಂದ ಇಬ್ಬರ ರಕ್ಷಣೆ – ಒಳಗಿನಿಂದ ಕೇಳಿ ಬರುತ್ತಿರೋ ಕೂಗು
ಲಾ ಪಾಜ್ನಿಂದ ಸುಮಾರು 30 ಕಿಮೀ (19 ಮೈಲಿ) ದೂರದಲ್ಲಿರುವ ವಿಯಾಚಾದಲ್ಲಿರುವ ಸೇನಾ ಸಂಕೀರ್ಣದಲ್ಲಿ ಶುಕ್ರವಾರ ಸ್ಥಳೀಯ ಸಮಯ ಮಧ್ಯಾಹ್ನ 2:30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟವು ಪೈರೋಟೆಕ್ನಿಕ್ (ಮಿಲಿಟರಿ ಸಿಗ್ನಲ್) ವಸ್ತುಗಳನ್ನು ಸಂಗ್ರಹಿಸಲಾಗಿದ್ದ ಪ್ರದೇಶದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಸುತ್ತಮುತ್ತಲಿನ ಪ್ರದೇಶಗಳ ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ. ಸ್ಫೋಟದ ತೀವ್ರತೆಗೆ ಕಿಟಕಿಗಳು ಒಡೆದುಹೋಗಿವೆ.
ಅಗ್ನಿಶಾಮಕ ದಳದವರು ಸ್ಥಳದಲ್ಲಿ ಉಳಿದಿದ್ದ ಶಾಖದ ಮೂಲವನ್ನು ಪತ್ತೆಹಚ್ಚಿದ್ದಾರೆ. ಇದು ಮತ್ತೊಂದು ಸ್ಫೋಟಕ್ಕೆ ಕಾರಣವಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ನಿವಾಸಿಗಳನ್ನು ಸ್ಥಳದಿಂದ ದೂರವಿರಲು ಎಚ್ಚರಿಸಿದ್ದಾರೆ. ಕನಿಷ್ಠ 150 ಮೀಟರ್ ಅಂತರವನ್ನು ಕಾಯ್ದುಕೊಳ್ಳಲು ಜನರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: 9 ದಿನ `ಹರೆ ಕೃಷ್ಣ’ ಜಪ, ಜನ್ಮಾಷ್ಟಮಿಯಂದೇ ರಕ್ಷಣೆ – ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕ ಬದುಕಿದ್ದು ಪವಾಡವೇ ಸರಿ
