– ನೀನು ವಿಧವೆಯಾಗಿ ಬದುಕೋದು ನನಗೆ ಇಷ್ಟವಿಲ್ಲ ಅಂತ ಭಾವುಕ
ನವದೆಹಲಿ: ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಮುಖ್ಯಸ್ಥ ಯಾಸಿನ್ ಮಲಿಕ್ ತಿಹಾರ್ ಜೈಲುವಾಸ ಅನುಭವಿಸುತ್ತಲೇ ತನ್ನ ಪತ್ನಿ ಮುಷಾಲ್ ಹುಸೇನ್ ಮಲಿಕ್‌ಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾನೆ. ಈ ಬಗ್ಗೆ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾನೆ ಎಂದು ವರದಿಯಾಗಿದೆ.
ಕಳೆದ 8 ವರ್ಷಗಳಿಂದ ಮುಷಾಲ್ ಜೊತೆ ಮಾತನಾಡಿಲ್ಲ ಮತ್ತು ಫೋನ್ ಕಾಲ್, ವಿಡಿಯೋ ಕಾಲ್‌ನಲ್ಲಿಯೂ ಸಹ ಆಕೆಯೊಂದಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಮಲಿಕ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾನೆ.
ನೀನು ವಿಧವೆಯಾಗಿ ಬದುಕುವುದು ನನಗೆ ಇಷ್ಟವಿಲ್ಲ
ನನ್ನನ್ನು ಮದುವೆಯಾಗಿದ್ದರೂ ಒಂಟಿಯಾಗಿ ಜೀವನ ನಡೆಸುತ್ತಿರುವ ಮುಷಾಲ್‌ಳನ್ನು ನನ್ನ ಅನಿಶ್ಚಿತತೆಯ ಜೀವನದಿಂದ ಮುಕ್ತಗೊಳಿಸಲು ಈ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಮಲಿಕ್ ಸ್ಪಷ್ಟಪಡಿಸಿದ್ದಾನೆ.
ವಿಚ್ಛೇದನ ಕೋರಲು ಕಾರಣವನ್ನು ವಿವರಿಸಿದ ಯಾಸಿನ್ ಮಲಿಕ್. ಆಕೆ ಮದುವೆಯಾಗಿದ್ದರೂ ನನಗಾಗಿ ವಿಧವೆಯಂತೆ ಬದುಕುತ್ತಿರುವುದು ನನಗೆ ಇಷ್ಟವಿಲ್ಲ. ಇನ್ನಾದರೂ ಮುಷಾಲ್ ತನ್ನ ಮೇಲಿನ ಹೊರೆಯನ್ನು ಇಳಿಸಿಕೊಂಡು ಹೊಸದಾಗಿ ಸುಂದರ ಜೀವನ ಪ್ರಾರಂಭಿಸಬೇಕೆಂದು ನಾನು ಬಯಸುತ್ತೇನೆ. ಮುಷಾಲ್ ನನಗಿಂತ 20 ವರ್ಷ ಚಿಕ್ಕವಳು. ಅವಳಿಗಿನ್ನೂ ಹೊಸ ಬದುಕು ರೂಪಿಸಿಕೊಳ್ಳಲು ಅವಕಾಶವಿದೆ. ಆದ್ದರಿಂದ ನನ್ನನ್ನು ಮರೆತು ಹೊಸ ಹೆಜ್ಜೆ ಹಾಕಲು ಮುಂದಾಗು ಎಂದು ವಿನಂತಿಸಿಕೊಂಡಿದ್ದಾನೆ. ಇದನ್ನೂ ಓದಿ: ‘ನ್ಯಾಯ’ದ ಬಗ್ಗೆ ಉಪದೇಶ ನೀಡುವ ಪಕ್ಷಕ್ಕೆ ಒಂದು ಸುರಕ್ಷಿತ ತರಗತಿಯನ್ನು ಖಾತರಿಪಡಿಸಲಾಗುತ್ತಿಲ್ಲ: ರಾಗಾ ವಿರುದ್ಧ ಅಶೋಕ್ ಟೀಕೆ
ಪತ್ನಿಗೆ ಸಂದೇಶ ತಿಳಿಸಿದ ಮಲಿಕ್, ವಿಧಿ ನನ್ನನ್ನು ಎಲ್ಲಿಗಾದರೂ ಕರೆದೊಯ್ಯಲಿ, ನನ್ನ ಪ್ರಾರ್ಥನೆ, ವಾತ್ಸಲ್ಯ ಮತ್ತು ಆಶೀರ್ವಾದ ಯಾವಾಗಲೂ ನಿನ್ನೊಂದಿಗೆ ಇರುತ್ತವೆ. ನನ್ನನ್ನು ಗಲ್ಲಿಗೇರಿಸುವ ಮೊದಲು ಈ ವಿವಾಹ ಬಂಧನದಿಂದ ನಿನ್ನನ್ನು ಬಿಡುಗಡೆ ಮಾಡಬೇಕೆಂಬುದೇ ನನ್ನಾಸೆ ಎಂದು ಹೇಳಿದ್ದಾನೆ. ಮಲಿಕ್ ಈ ಅಫಿಡವಿಟ್ ಅನ್ನು ತಮ್ಮ ಕುಟುಂಬ ಸದಸ್ಯರಿಗೆ – ತಾಯಿ, ಪತ್ನಿ ಮುಷಾಲ್ ಮತ್ತು ಅವರ 13 ವರ್ಷದ ಮಗಳಿಗೆ – ಸಂದೇಶ ಎಂದು ಬಣ್ಣಿಸಿದ್ದಾರೆ.
ಯಾಸಿನ್ ಮಲಿಕ್ ಜೈಲು ಶಿಕ್ಷೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಮಲಿಕ್ 2019 ರಿಂದ ತಿಹಾರ್ ಜೈಲಿನಲ್ಲಿದ್ದಾನೆ. 2022ರ ಮೇ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ಆತನನ್ನ ಅಪರಾಧಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿತು.ಇದನ್ನೂ ಓದಿ: ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಪೈಲಟ್ ಅಸ್ವಸ್ಥ – ಮಸ್ಕತ್‌ನಲ್ಲಿ ತುರ್ತು ಭೂಸ್ಪರ್ಶ
