ಹೈದರಾಬಾದ್: ಉಕ್ರೇನ್‌ನಲ್ಲಿ (Ukraine) ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ (Russia Missile Attack) ತೆಲಂಗಾಣ ಮೂಲದ 42 ವರ್ಷದ ವಲಸೆ ಕಾರ್ಮಿಕರೊಬ್ಬರು (Telangana Worker) ಮೃತಪಟ್ಟಿದ್ದಾರೆ. ಮತ್ತೊಬ್ಬ ತೆಲಂಗಾಣ ಮೂಲದ ವ್ಯಕ್ತಿ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಜಗಿತ್ಯಾಲ್ ಜಿಲ್ಲೆಯ ಹುಸ್ನಾಬಾದ್ ಗ್ರಾಮದ ನಿವಾಸಿ ವಾವಿಲಾಲ ಸುದರ್ಶನ್ ಗೌಡ ಎಂದು ಗುರುತಿಸಲಾಗಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ಉದ್ಯೋಗದ ಹುಡುಕಾಟದಲ್ಲಿ ಸಂಬಂಧಿಯೊಬ್ಬರೊಂದಿಗೆ ಸುದರ್ಶನ್ ಗೌಡ ಉಕ್ರೇನ್‌ಗೆ ತೆರಳಿದ್ದರು. ಅಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದನ್ನೂ ಓದಿ: ಈಜಿಪ್ಟ್‌ನಲ್ಲಿ ಭೀಕರ ಬಸ್ ಅಪಘಾತ – 16 ಮಂದಿ ಸಾವು, 28 ಜನರಿಗೆ ಗಾಯ
ಉಕ್ರೇನ್‌ನ ಒಡೆಸಾ ನಗರದಲ್ಲಿ ವಾಯುದಾಳಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಾವು ವಾಸಿಸುತ್ತಿದ್ದ ಸ್ಥಳದಿಂದ ಹೊರಗೆ ತೆರಳುತ್ತಿದ್ದ ವೇಳೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಸುದರ್ಶನ್ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯನ್ನು ದೃಢಪಡಿಸಿರುವ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಮೃತರ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸುವುದಾಗಿ ತಿಳಿಸಿದೆ. ಇದನ್ನೂ ಓದಿ: ಕಾಲೇಜ್ ವಿದ್ಯಾರ್ಥಿಗೆ ಹಲ್ಲೆ, ಕಿಡ್ನ್ಯಾಪ್ – ದುನಿಯ್ ವಿಜಯ್ ಪುತ್ರನ ವಿರುದ್ಧ FIR
ಭಾರತೀಯ ರಾಯಭಾರ ಕಚೇರಿ ತನ್ನ ಅಧಿಕೃತ ಹೇಳಿಕೆಯಲ್ಲಿ, ಉಕ್ರೇನ್‌ನಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿ ಎಂದು ತಿಳಿಸಿದೆ. ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಂತಾಪ ಸೂಚಿಸಿರುವುದಾಗಿ ಹೇಳಿದೆ. ಅಲ್ಲದೆ, ಸುದರ್ಶನ್ ಗೌಡ ಅವರ ಪಾರ್ಥಿವ ಶರೀರವನ್ನು ಶೀಘ್ರವಾಗಿ ಭಾರತಕ್ಕೆ ತರಲು ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಈ ಸಂಬಂಧ ಸುದರ್ಶನ್ ಕೆಲಸ ಮಾಡುತ್ತಿದ್ದ ಕಂಪನಿ ಹಾಗೂ ಉಕ್ರೇನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದೆ. ಇದನ್ನೂ ಓದಿ: ಬಳ್ಳಾರಿಗೆ ಹೋಗುವುದರೊಳಗೆ ಕಾಂಗ್ರೆಸ್ ಭ್ರಷ್ಟರ ಬಂಡವಾಳ ಬಯಲು ಮಾಡುತ್ತೇವೆ: ಶ್ರೀರಾಮುಲು
ಸುದರ್ಶನ್ ಅವರ ಸಾವಿಗೆ ಜಗಿತ್ಯಾಲ್ ಶಾಸಕ ಡಾ. ಸಂಜಯ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ದುಃಖದ ಸಂದರ್ಭದಲ್ಲಿ ಕುಟುಂಬದವರಿಗೆ ಅಗತ್ಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಇದೇ ದಾಳಿಯಲ್ಲಿ ತೆಲಂಗಾಣದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. 35 ವರ್ಷದ ಗಣೇಶ್ ಕಲ್ಲೇಡ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮೂವರು ಹೊಸ ಟ್ರಸ್ಟಿಗಳ ನೇಮಕ
ಸೆಪ್ಟೆಂಬರ್ 1ರಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾದ ಇತ್ತೀಚಿನ ದಾಳಿಗಳಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಅವರಲ್ಲಿ ಒಬ್ಬ ಭಾರತೀಯ ಪ್ರಜೆಯೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ. ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಸೋಮವಾರ ಸಂಜೆ ಬಳಿಕ ಒಡೆಸಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಮಾರ್ಗದರ್ಶಿತ ವೈಮಾನಿಕ ಬಾಂಬ್‌ಗಳು ಹಾಗೂ ಡ್ರೋನ್‌ಗಳ ದಾಳಿಗಳು ಮುಂದುವರಿದಿವೆ ಎಂದು ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಚಲೋ ಪಾದಯಾತ್ರೆ ವೇಳೆ ವಿಜಯೇಂದ್ರ ಬರ ಪರಿಶೀಲನೆ
