– ನಗದು ರಹಿತ ಆರೋಗ್ಯ ಭಾಗ್ಯ ‘ಸಂಧ್ಯಾ ಕಿರಣ’ ಯೋಜನೆ ಜಾರಿಗೆ ಸರ್ಕಾರ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದ ನಿವೃತ್ತ ನೌಕರರು, ಕುಟುಂಬ ಪಿಂಚಣಿದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ ಅನುಷ್ಟಾನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ನಗದು ರಹಿತ ಆರೋಗ್ಯ ಭಾಗ್ಯ ‘ಸಂಧ್ಯಾ ಕಿರಣ’ ಯೋಜನೆ (Sandhya Kiran Scheme) ಜಾರಿಗೆ ಸರ್ಕಾರ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕನಿಂದ ಕಮೀಷನ್ ಆರೋಪ ವಿಚಾರ ತನಿಖೆ ಆಗಲಿ: ಯು.ಟಿ. ಖಾದರ್
ಸಂಧ್ಯಾ ಕಿರಣ ನಗದು ರಹಿತ ಆರೋಗ್ಯ ಯೋಜನೆ ಅಡಿ ಉಚಿತ ಚಿಕಿತ್ಸೆ ಸಿಗಲಿದೆ. ವಾರ್ಷಿಕ 5 ಲಕ್ಷದವರೆಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಇರಲಿದೆ. ಸಂಧ್ಯಾ ಕಿರಣ ನಗದು ರಹಿತ ಆರೋಗ್ಯ ಯೋಜನೆ ಚಿಕಿತ್ಸೆಗೆ ಸರ್ಕಾರ ಆದೇಶಿಸಿದೆ.
ನಿವೃತ್ತ ನೌಕರರಿಗೆ ಮತ್ತು ಅವರ ಕುಟುಂಬಕ್ಕೆ ಆರೋಗ್ಯ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಸಂಧ್ಯಾ ಕಿರಣ ಯೋಜನೆ ಜಾರಿಗೆ ಸರ್ಕಾರ ನೌಕರರ ಸಂಘ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಇದನ್ನೂ ಓದಿ: ಭಾರತದ ಜಿಡಿಪಿ 7.8% ಬೆಳವಣಿಗೆ ಅನ್ನೋದೆ ಬೋಗಸ್: ಸಂತೋಷ್ ಲಾಡ್
