ಬೆಂಗಳೂರು: ಕರ್ನಾಟಕ ಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷ ಜನಾರ್ದನ ರೆಡ್ಡಿ, ಉಪಾಧ್ಯಕ್ಷ ಶ್ರೀರಾಮುಲು ಅಂತ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತಾಡಿದ ಅವರು, ಕರ್ನಾಟಕ ಜನತೆಗೆ ಒಂದು ವಿಷಯ ಹೇಳ್ತೀನಿ. ಕರ್ನಾಟಕ ಅಂತಾರಾಷ್ಟ್ರೀಯ ಕಳ್ಳತನ ಸಂಘದ ಜನಾರ್ದನ ರೆಡ್ಡಿ, ಉಪಾಧ್ಯಕ್ಷ ಶ್ರೀರಾಮುಲು. ಕರ್ನಾಟಕವನ್ನು ಲೂಟಿ ಮಾಡಿದ್ದೇ ಜನಾರ್ದನ ರೆಡ್ಡಿ, ಶ್ರೀರಾಮುಲು ಅಂತ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಕಟ್ಟಡಗಳು, ಮೂಲಸೌಕರ್ಯ; ನೇಪಾಳ ಭೀಕರ ಪ್ರವಾಹಕ್ಕೆ ಎಲ್ಲವೂ ನಾಮಾವಶೇಷ
ಬಿಜೆಪಿ ಅವಧಿಯಲ್ಲಿ ಕೋವಿಡ್ ಹಗರಣ, ಬೋವಿ ನಿಗಮ ಹಗರಣ, ನೀಟ್ ಹಗರಣ, ದೇವರಾಜ್ ಟ್ರಕ್ ಟರ್ಮಿನಲ್ ಹಗರಣ, ಕಿಯೋನಿಕ್ಸ್ ಹಗರಣ, PSI ನೂರಾರು ಕೋಟಿ ಹಗರಣ, ಪರಶುರಾಮ್ ಥೀಮ್ ಪಾರ್ಕ್ ಹಗರಣ, ಬಿಟ್ ಕಾಯಿನ್, KKRD ಅಕ್ರಮ. ಹೀಗೆ ನೂರಾರು ಕೋಟಿ ಹಗರಣ ಬಿಜೆಪಿ ಅವಧಿಯಲ್ಲಿ ಆಗಿದೆ. ಯಡಿಯೂರಪ್ಪ, ಬೊಮ್ಮಾಯಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಸುಧಾಕರ್, ಜನಾರ್ದನ ರೆಡ್ಡಿ, ಅಶೋಕ್ ಸೇರಿ ಅನೇಕರ ಕಾಲದಲ್ಲಿ ಹಗರಣ ಆಗಿದೆ. ಇದಕ್ಕೆ ಉತ್ತರ ಕೊಡಲಿ. ಈ ಲೂಟಿಕೋರರಿಂದ ನಾವು ಪಾಠ ಕಲಿಯೋ ಅವಶ್ಯಕತೆ ಇಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಸರ್ಕಾರ ಮನೆ ಗೃಹಿಣಿಗೆ ಗೃಹಲಕ್ಷ್ಮಿ ಯೋಜನೆ ಅಡಿ 2 ಸಾವಿರ ರೂ. ಕೊಡ್ತಾ ಇದ್ದೇವೆ. 57 ಸಾವಿರ ಕೋಟಿ ರೂ.ಅಭಿವೃದ್ಧಿಗೆ ಖರ್ಚು ಮಾಡ್ತಾ ಇದ್ದೇವೆ. ಬರದ ಬಗ್ಗೆ ಮಾತಾಡೋಕೆ ಇವರಿಗೆ ಆಗಲ್ಲ. ಡೊಳ್ಳು ಹೊಡೆದು ಡ್ಯಾನ್ಸ್ ಆಡ್ತಾರೆ. ಶ್ರೀರಾಮುಲು ಅವರು ನಿನ್ನೆ ನನ್ನ ನಾಯಕ ರಾಹುಲ್ ಗಾಂಧಿಗೆ ಅವನು ಇವನು ಅಂತ ಮಾತಾದ್ದಾರೆ. ಇನ್ನು ಮುಂದೆ ನೀವು ರಾಹುಲ್ ಗಾಂಧಿಗೆ ಅವನು ಇವನು ಅಂದರೆ ನೀನು ಯಾವನು ಅಂತ ನಾನು ಕೇಳಬೇಕಾಗುತ್ತದೆ. ನಿಮ್ಮ ನಾಲಿಗೆ ಮೇಲೆ ಕಂಟ್ರೋಲ್ ಇರಲಿ. ಕಂಟ್ರೋಲ್ ಇಟ್ಟುಕೊಂಡು ಶ್ರೀರಾಮುಲು ಮಾತಾಡಲಿ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಅಮೆರಿಕ ಬೆಂಗಾವಲಿನಲ್ಲಿ ಒಂದೇ ದಿನ ಹಾರ್ಮುಜ್ ದಾಟಿದ 40 ತೈಲ ಹಡಗುಗಳು
