– ಸರಕುಗಳಿಗೆ ಪ್ರತ್ಯೇಕ ದರ ನಿಗದಿ
ಬೆಂಗಳೂರು: ನಗರದ ಐತಿಹಾಸಿಕ ಕೆ.ಆರ್. ಮಾರುಕಟ್ಟೆಯಲ್ಲಿ (K R Market) ಹೊಸ ರೂಲ್ಸ್ ಜಾರಿಯಾಗಿದ್ದು, ಇನ್ನು ಮುಂದೆ ವಾಹನ ಸವಾರರು ಸ್ಮಾರ್ಟ್ ಪಾರ್ಕಿಂಗ್ (Smart Parking Rules) ನಿಯಮವನ್ನು ಪಾಲಿಸಲು ಜಿಬಿಎ (GBA) ಸೂಚನೆ ನೀಡಿದೆ.
ನಗರದಲ್ಲಿ ಹೆಚ್ಚು ಜನ ಸೇರುವ ಮಾರುಕಟ್ಟೆಗಳಲ್ಲಿ ಕೆ.ಆರ್ ಮಾರುಕಟ್ಟೆಯೂ ಒಂದು. ಆದ್ದರಿಂದ ಮಾರ್ಕೆಟ್‌ನ ಸ್ವಚ್ಛತೆ ಹಾಗೂ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಈ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
ಈ ನಿಯಮವನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಲು ಬಿಬಿಎಂಪಿ ಮತ್ತು ಜಿಬಿಎಯಿಂದ ಡಿಜಿಟಲ್ ಸ್ಮಾರ್ಟ್ ಗೇಟ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಹೊಸ ನಿಯಮಗಳೇನು?
ಸ್ಮಾರ್ಟ್ ಪಾರ್ಕಿಂಗ್‌ನೊಂದಿಗೆ ಇನ್ನೂ ಕೆಲವು ಹೊಸ ನಿಯಮಗಳು ಜಾರಿಯಾಗಿದ್ದು, ಇನ್ನು ಮುಂದೆ ಮಾರುಕಟ್ಟೆಯೊಳಗೆ ಪ್ರವೇಶಿಸುವ ಪ್ರತೀ ವಾಹನ ಮತ್ತು ಸರಕುಗಳಿಗೆ ಪ್ರತ್ಯೇಕ ದರ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ ಮಾರುಕಟ್ಟೆ ಪ್ರವೇಶಿಸಿವ ಪ್ರತೀ ವಾಹನಗಳಿಗೂ ಎಂಟ್ರಿ ಫೀಸ್ ಕಡ್ಡಾಯ.
ಮಾರುಕಟ್ಟೆಯೊಳಗೆ ತರುವ ಸರಕುಗಳ ಮೇಲೆಯೂ ದರ ವಿಧಿಸಲಾಗುತ್ತಿದ್ದು, ಮಾರ್ಕೆಟ್ ಒಳ ಹೋಗುವ ಪ್ರತಿ ಮೂಟೆಗೂ 5 ರೂ. ನಿಗಧಿ ಮಾಡಲಾಗಿದೆ. ಹೂ, ಹಣ್ಣು, ತರಕಾರಿ ತೆಗೆದುಕೊಂಡು ಹೋಗುವ ವಾಹನದ ದರ ಹೊರತುಪಡಿಸಿ, ಮೂಟೆಗಳು ಮತ್ತು ದೊಡ್ಡ ಪ್ರಮಾಣದ ವಸ್ತುಗಳಿಗೆ ಪ್ರತ್ಯೇಕ ದರ ವಿಧಿಸಲಾಗಿದೆ.
ಮಾರುಕಟ್ಟೆಯ ಒಳಗೆ ಬರುವ ಸರಕುಗಳ ಪ್ರಮಾಣವನ್ನು ವ್ಯವಸ್ಥಿತವಾಗಿ ದಾಖಲಿಸಲು, ಅಕ್ರಮವಾಗಿ ಜಾಗ ಆಕ್ರಮಿಸುವುದನ್ನು ತಡೆಯಲು ಜಿಬಿಎ ಈ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ಗುಟ್ಕಾ ಬ್ಯಾನ್ ಚರ್ಚೆಗೆ ಬಂದಾಗೆಲ್ಲ ಅಡಿಕೆ ಬೆಳೆಗಾರರ ಆತಂಕ – ರೈತರು ಹೇಳೋದೇನು?
10 ವರ್ಷಗಳ ಸ್ಮಾರ್ಟ್ ಗೇಟ್ ಒಪ್ಪಂದ ಅಡಿ ಈ ಪರಿಷ್ಕರಣೆಯನ್ನು ಜಾರಿಗೊಳಿಸಲಾಗಿದ್ದು, ನಿನ್ನೆಯಿಂದಲೇ ರೂಲ್ಸ್‌ಗಳೆಲ್ಲವನ್ನೂ ಪಾಲಿಸುವಂತೆ ನೋಡಿಕೊಳ್ಳಲಾಗುತ್ತಿದೆ.
ಇನ್ನು ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಗದು ವ್ಯವಹಾರಕ್ಕೆ ಬ್ರೇಕ್ ಹಾಕಲಾಗಿದ್ದು, ಕೇವಲ ಫಾಸ್ಟ್ ಟ್ಯಾಗ್, ಯುಪಿಐ ಮತ್ತು ಕ್ಯೂಆರ್ ಕೋಡ್ ಮೂಲಕವೇ ಪಾವತಿ ಮಾಡುವ ಅವಕಾಶವಿದೆ. ಇದನ್ನೂ ಓದಿ: ಹಾಸನ | ದೇವಾಲಯದ ಬೀಗ ಮುರಿದು 12 ಲಕ್ಷ ಮೌಲ್ಯದ ಬೆಳ್ಳಿ, ಚಿನ್ನಾಭರಣ ಕಳ್ಳತನ
ಯಾವ ವಾಹನಕ್ಕೆ ಎಷ್ಟು ದರ?
ಲಾರಿ ಮತ್ತು ದೊಡ್ಡ ವಾಹನಗಳು
– ಪ್ರತಿ ಬಾರಿಯ ಎಂಟ್ರಿ ಮತ್ತು ಎಕ್ಸಿಟ್‌ಗೆ – 350. ರೂ
– ಮಿನಿ ವ್ಯಾನ್, ಟೆಂಪೋಗಳು – 100 ರೂ.
– ಗೂಡ್ಸ್ ಆಟೋಗಳು – ಪ್ರತಿ ಎಂಟ್ರಿಗೆ 75 ರೂ.
– ಬೈಕ್, ಸ್ಕೂಟರ್‌ಗಳು (ಒಂದು ಗಂಟೆಗೆ) 15 ರೂ.
– ಕಾರ್ ಹಾಗೂ ಫೋರ್ ವೀಲರ್ಸ್‌ಗೆ (ಒಂದು ಗಂಟೆಗೆ) 25 ರಿಂದ 30 ರೂ.
– ಇಡೀ ದಿನ ಗಾಡಿ ನಿಲ್ಲಿಸಿದ್ರೆ – ದಿನಕ್ಕೆ 175 ರಿಂದ 275 ರೂ.
