ಜನಪ್ರಿಯ ರಿಯಾಲಿಟಿ ಶೋದಿಂದ (Reality Show) ಇಬ್ಬರು ಅಗ್ರೆಸ್ಸಿವ್ ಕಂಟೆಸ್ಟೆಂಟ್ಗಳು ತಾವಾಗಿಯೇ ಹೊರ ನಡೆದಿದ್ದಾರೆ.
ಇಬ್ಬರನ್ನು ಸಂತೈಸಿ ಬುದ್ಧಿ ಹೇಳಿ ಊರಲ್ಲೇ ಉಳಿಸಿಕೊಳ್ಳಲು ಹಳ್ಳಿಗರು ಪ್ರಯತ್ನ ಪಟ್ಟರೂ ನಿರ್ಧಾರ ಬದಲಿಸದ ಇವರು `ಹಳ್ಳಿ ಪವರ್’ಗೆ (Halli Power) ಗುಡ್ಬೈ ಹೇಳಿ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಆ ಕಂಟೆಸ್ಟೆಂಟ್ಗಳೇ ನಿಖಿತಾಶ್ರೀ ಹಾಗೂ ದರ್ಶಿನಿ. ಇದನ್ನೂ ಓದಿ: ನಲಪಾಡ್ ಆರತಕ್ಷತೆಯಲ್ಲಿ `ಕಾಂತಾ’ ಹಾಡು ಹಾಡಿದ ಕಿಚ್ಚ – ವೀಡಿಯೋ ವೈರಲ್

ಹಳ್ಳಿ ಪವರ್ ರಿಯಾಲಿಟಿ ಶೋದಲ್ಲಿ ಅಬ್ಬರಿಸುತ್ತಿದ್ದ ದರ್ಶಿನಿ ಇದೀಗ ತಾವಾಗೇ ಶೋನಿಂದ ಹೊರ ನಡೆದಿದ್ದಾರೆ. ಜೊತೆಗೆ ಕಂಟೆಸ್ಟಂಟ್ ನಿಖಿತಾಶ್ರೀ ಕೂಡ ಅದೇ ದಾರಿ ಹಿಡಿದ್ರು. ಇಬ್ಬರ ನಡೆ ಉಳಿದ ಕಂಟೆಸ್ಟೆಂಟ್ಗಳಿಗೂ ಹಾಗೂ ಊರ ನಾಗರಿಕರಿಗೂ ಆಶ್ಚರ್ಯ ಮೂಡಿಸಿತ್ತು. ಆದರೆ ಪಟ್ಟು ಬಿದ್ದು ಶೋ ಬಿಟ್ಟು ಹೊರಡೋದಾಗಿ ಸ್ಪರ್ಧಿಗಳು ನಿರ್ಧರಿಸಿ ಹೊರಟೇ ಬಿಟ್ಟರು.
ದರ್ಶಿನಿ ಅನಾರೋಗ್ಯ ಹಾಗೂ ಹೋಮ್ಸಿಕ್ ಕಾರಣ ಕೊಟ್ಟರೆ, ನಿಖಿತಾಶ್ರೀ ಚರ್ಮದ ಸಮಸ್ಯೆ ಉಂಟಾಗಿದೆ ಎಂದು ಕಾರಣ ಹೇಳಿದ್ದಾರೆ. ಹೀಗಾಗಿ, ಹೊರಟುನಿಂತ ಇಬ್ಬರು ಕಂಟೆಸ್ಟೆಂಟ್ಗಳಿಗೆ ಹಳ್ಳಿಗರು ಭಾವುಕ ವಿದಾಯ ಹೇಳಿದ್ದಾರೆ. ಗೌರವದಿಂದ ಕಳಿಸಿಕೊಟ್ಟರು. ನಿಖಿತಾಶ್ರೀ ಹಾಗೂ ದರ್ಶಿನಿ ಕಣ್ಣೀರಿಡುತ್ತಾ ಪ್ಯಾಟೆಗೆ ವಾಪಸ್ಸಾಗಿದ್ದಾರೆ. ಇದನ್ನೂ ಓದಿ: ಟಗರು ಪಲ್ಯ ನಾಯಕ ನಾಗಭೂಷಣ್ ಹೊಸ ಸಿನಿಮಾ ಘೋಷಣೆ

