ವಿಜಯಪುರ: ತಾವು ಸಿಎಂ ಆಗಿದ್ದಾಗ ತಮ್ಮ ಕನಸಿನ ಕೂಸು ಬಿಡದಿ ಟೌನ್‌ಶಿಪ್‌ಗೆ ಯೋಜನೆಗೆ ಜನ್ಮ ನೀಡಿದರು. ಹೀಗಾಗಿ ಬಿಡದಿ ಟೌನ್‌ಶಿಪ್‌ಗೆ ಕುಮಾರಸ್ವಾಮಿಯವರೇ ಪಿತಾಮಹ ಎಂದು ಸಚಿವ ಎಂ.ಬಿ ಪಾಟೀಲ್(MB Patil) ತಿಳಿಸಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಬಿಡದಿ ಪಾದಾಯತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ನಾಟಕ ಮಾಡ್ತಿದ್ದಾರೆ. ಇದು ರಾಜಕೀಯಕ್ಕಾಗಿ ನಡೆದಿದೆ ಅಷ್ಟೇ. ಇದು ಹೆಚ್‌ಡಿಕೆ ಅವರ ಕನಸಿನ ಕೂಸು. ತಾವು ಸಿಎಂ ಆಗಿದ್ದಾಗ ಬಿಡದಿ ಟೌನ್‌ಶಿಪ್‌ಗೆ ಜನ್ಮ ನೀಡಿ, ಪಿತಾಮಹರಾದರು. ಈಗ ಅವರೇ ಇದಕ್ಕೆ ವಿರೋಧ ಮಾಡ್ತಿದ್ದಾರೆ ಎಂದಿದ್ದಾರೆ. ಇದನ್ನು ಓದಿ: ಮಿತಿ ಮೀರಿದ ʻಕೆ.ಪಿ ಕಾಲರ್ʼ ಪುಂಡಾಟ – ಸೆರೆಗೆ ಕುಮ್ಕಿ ಆನೆಗಳ ತಂಡ ಆಗಮನ
ಸಚಿವ ನಾಗೇಂದ್ರ ನ್ಯಾಯಾಲಯ ನಿಯಮ ಉಲ್ಲಂಘನೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದೇ ಮಾತನಾಡುವುದು ತಪ್ಪಾಗುತ್ತೆ. ಅದರ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

