– ಒಎನ್‌ಜಿಸಿ ಆರ್‌ಎಸ್‌ಎಸ್‌ಗೆ 600 ಕೋಟಿ ಯಾಕೆ ಕೊಟ್ರು? ಅಂತ ಪ್ರಶ್ನೆ
ಬೆಂಗಳೂರು: ಮೋಹನ್ ಭಾಗವತ್ (Mohan Bhagwat) ಅವರು ದೇಶಕ್ಕೆ ಬಂದ್ರೆ ವಾತಾವರಣ ಕೆಡುತ್ತೆ ಅಂತಲೇ ಕೆನಡಾ ಸಂಸದರು ಪ್ರವೇಶ ನಿರಾಕರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಟೀಕಿಸಿದ್ದಾರೆ.
ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೆನಡಾಗೆ ಪ್ರವೇಶಿಸದಂತೆ ನಿರ್ಬಂಧ ಹೇರಬೇಕು ಎಂದು ಅಲ್ಲಿನ ಸಂಸದರು ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಪೆಲೆಟ್ ಗನ್ ದಾಳಿ ಆರೋಪ; ಅಮಿತ್ ಶಾ ಕ್ಷಮೆಯಾಚನೆಗೆ ರಾಹುಲ್ ಪಟ್ಟು

ಮೋಹನ್ ಭಾಗವತ್ ಅವರು ಕೆನಡಾಗೆ (Canada) ಬರಬಾರದು ಎಂದು ಅಲ್ಲಿನ ಸಂಸದರು ತಮ್ಮ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಭಾಗವತ್ ಅವರು ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ಕುರಿತು ಪ್ರಚೋದನಕಾರಿಯಾಗಿ ಮಾತನಾಡುತ್ತಾರೆ. ಅವರು ಕೆನಡಾಗೆ ಬಂದರೆ ಅಲ್ಲಿನ ವಾತಾವರಣ ಹದಗೆಡಬಹುದು ಎಂಬ ಕಾರಣ ನೀಡಿ ಪ್ರವೇಶ ನಿರ್ಬಂಧಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಭಾಗವತ್ ಅವರಿಗೆ ಕೆನಡಾ ಪ್ರವೇಶ ನೀಡಬೇಕೋ, ಬೇಡವೋ ಎಂಬುದು ಆ ದೇಶದ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ಈ ರೀತಿಯ ಬೆಳವಣಿಗೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟುಮಾಡುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾರದರ್ಶಕತೆ, ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯತ್ತ ಗಮನ ಹರಿಸಿ: ಪ್ರಹ್ಲಾದ್ ಜೋಶಿ
ಆರ್‌ಎಸ್‌ಎಸ್ ನೋಂದಣಿ ಆಗಲಿ
ʻಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಅನ್ನು ದೊಡ್ಡ ಎನ್‌ಜಿಒ ಎಂದು ಹೇಳಿದ್ದಾರೆ. ಹಾಗಾದರೆ ಆರ್‌ಎಸ್‌ಎಸ್ ಅಧಿಕೃತವಾಗಿ ನೋಂದಣಿಯಾಗಲಿ. ಸಂಸ್ಥೆಯ ಸಂಪನ್ಮೂಲಗಳು ಏನು, ಹಣದ ಮೂಲ ಏನು ಎಂಬುದನ್ನು ದೇಶದ ಜನರಿಗೆ ತಿಳಿಸಲಿʼ ಎಂದು ಆಗ್ರಹಿಸಿದ್ದಾರೆ.

ದೇಶದಲ್ಲಿರುವ ಹಲವು ಮಠಗಳು ಹಾಗೂ ಧಾರ್ಮಿಕ ಸಂಸ್ಥೆಗಳು ನೋಂದಣಿಯಾಗಿವೆ. ಆರ್‌ಎಸ್‌ಎಸ್ ಕೂಡ ತನ್ನ ಹಣಕಾಸು ಹಾಗೂ ಸಂಪನ್ಮೂಲಗಳ ಕುರಿತು ಪಾರದರ್ಶಕತೆಯನ್ನು ಪ್ರದರ್ಶಿಸಬೇಕು. ನಿಮ್ಮ ಮೂಲ ಏನು? ಸಂಪನ್ಮೂಲ ಏನು? ಎಂಬುದನ್ನು ತಿಳಿಸಿ. ಅಯೋಧ್ಯೆಯ ರಾಮನಿಂದಲೂ ಹಣಕಾಸಿನ ಲೆಕ್ಕ ಕೇಳುವಂತಹ ದೇಶದಲ್ಲಿ ನೀವು ಯಾಕೆ ಲೆಕ್ಕ ಕೊಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
‘ರಾಜಕೀಯದಲ್ಲಿ ನಾವಿಲ್ಲ’ ಎನ್ನುವ ಆರ್‌ಎಸ್‌ಎಸ್
ಆರ್‌ಎಸ್‌ಎಸ್ ರಾಜಕೀಯದಲ್ಲಿ ತಾವು ಇಲ್ಲ, ಸಮಾಜ ಸೇವೆ ಮಾತ್ರ ಮಾಡುತ್ತೇವೆ ಎಂದು ಹೇಳುತ್ತದೆ. ಆದರೆ, ಮತ್ತೊಂದೆಡೆ ಬಿಜೆಪಿ ಹಾಗೂ ಅದರ ನಾಯಕರೊಂದಿಗೆ ಆರ್‌ಎಸ್‌ಎಸ್ ಹೊಂದಿರುವ ಸಂಬಂಧದ ಕುರಿತು ಪ್ರಶ್ನೆಗಳಿವೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಜಾರ್ಖಂಡ್ ಸರ್ಕಾರ – JPSC ಪರೀಕ್ಷೆ ರದ್ದುಪಡಿಸಲು ಸಿದ್ಧತೆ
ವಿದೇಶಾಂಗ ನೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಮತ್ತೆ ನಾವು ರಾಜಕೀಯದಲ್ಲಿ ಇಲ್ಲ, ಸಮಾಜ ಸೇವೆ ಮಾತ್ರ ಮಾಡುತ್ತೇವೆ ಎನ್ನುತ್ತಾರೆ. ಇದು ದ್ವಂದ್ವ ನೀತಿಯಲ್ಲವೇ? ಎರಡು ನಾಲಿಗೆಗಳಿವೆಯೇ? ಆರ್‌ಎಸ್‌ಎಸ್ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅದಕ್ಕಾಗಿ ಸಂಸ್ಥೆ ತನ್ನ ಹಣಕಾಸು ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳ ಕುರಿತು ಸಂಪೂರ್ಣ ಪಾರದರ್ಶಕತೆಯನ್ನು ತೋರಿಸಬೇಕು ಎಂದು ಅವರು ಹೇಳಿದ್ದಾರೆ.
‘ಈಗ ಲೆಕ್ಕ ಕೇಳುತ್ತಿದ್ದೇವೆ’
ಆರ್‌ಎಸ್‌ಎಸ್‌ನ ಪ್ರತಿಯೊಂದು ಶಾಖೆಯೂ ಸ್ಥಳೀಯ ಘಟಕವಾಗಿದ್ದು, ಅದರ ಲೆಕ್ಕಪತ್ರಗಳನ್ನು ತಾವೇ ಆಡಿಟ್ ಮಾಡುತ್ತೇವೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಸರ್ಕಾರ ಲೆಕ್ಕ ಕೇಳಿದಾಗ ಕೊಡುತ್ತೇವೆ ಎಂದೂ ಹೇಳಿದ್ದಾರೆ. ಈಗ ನಾವು ಲೆಕ್ಕ ಕೇಳುತ್ತಿದ್ದೇವೆ, ಕೊಡಲಿ ಎಂದರಲ್ಲದೇ ಒಎನ್‌ಜಿಸಿ ಸಂಸ್ಥೆಯಿಂದ ಆರ್‌ಎಸ್‌ಎಸ್‌ಗೆ 600 ಕೋಟಿ ರೂ. ನೀಡಲಾಗಿದೆ, ಯಾಕೆ ಕೊಟ್ಟಿದ್ದಾರೆ ಅಂತ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.

