ಕೀವ್: ಉಕ್ರೇನ್‌ನ (Ukraine) ಒಡೆಸಾ ಬಂದರಿನಲ್ಲಿ (Odesa Port) ನಿನ್ನೆ ರಾತ್ರಿ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದ್ದು, ಇಬ್ಬರು ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಎಂಜಿ ಎಜಿಎನ್ ರಾಗ್ನರ್ ಎಂಬ ಹಡಗು ನಾಲ್ವರು ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುತ್ತಿತ್ತು. ಅವರಲ್ಲಿ ಇಬ್ಬರು ಸುರಕ್ಷಿತವಾಗಿದ್ದಾರೆ. ನಾಲ್ವರು ಭಾರತೀಯರ ಗುರುತುಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 12 ಸೈನಿಕರು ಸೇರಿ 15 ಮಂದಿ ಬಲಿ
ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಎಕ್ಸ್ ಪೋಸ್ಟ್‌ನಲ್ಲಿ, ಕಾಣೆಯಾದ ಭಾರತೀಯರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ತಿಳಿಸಿದೆ.
2022ರ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನಿಯನ್ ಬಂದರು ಒಡೆಸಾ ಆಗಾಗ್ಗೆ ಡ್ರೋನ್ ದಾಳಿಗೆ ಒಳಗಾಗುತ್ತಿದೆ. ಜುಲೈ 19 ರಂದು ಒಡೆಸಾ ಬಂದರಿನಲ್ಲಿ ಹಡಗಿನ ಮೇಲೆ ದಾಳಿ ನಡೆದಾಗ ನಾಲ್ವರು ಭಾರತೀಯರು ಸಾವನ್ನಪ್ಪಿದ್ದರು. ಮತ್ತೊಬ್ಬರ ಸ್ಥಿತಿ ಗಂಭೀರವಾಗಿತ್ತು. ದಾಳಿಯ ಸಮಯದಲ್ಲಿ ಎಂವಿ ಗೋಲ್ಡನ್ ಲಿಯೋ ಹಡಗಿನಲ್ಲಿ ಐವರು ಭಾರತೀಯರು ಸೇರಿದಂತೆ 17 ಸಿಬ್ಬಂದಿ ಇದ್ದರು. ಇದನ್ನೂ ಓದಿ: ಉಕ್ರೇನ್‌ನಲ್ಲಿ ಹಡಗಿನ ಮೇಲೆ ರಷ್ಯಾ ದಾಳಿ; ಕಾಸರಗೋಡು ಮೂಲದ ವ್ಯಕ್ತಿ ಸೇರಿ ನಾಲ್ವರು ಭಾರತೀಯರ ಸಾವು
ವಾಣಿಜ್ಯ ಸಾಗಣೆಯನ್ನು ಗುರಿಯಾಗಿಸಿಕೊಂಡು ನಾಗರಿಕ ಸಿಬ್ಬಂದಿಗೆ ಅಪಾಯವನ್ನುಂಟು ಮಾಡುವುದು ಅಥವಾ ಸಂಚರಣೆ ಮತ್ತು ವ್ಯಾಪಾರದ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುವುದು ದುಃಖಕರ. ಅದನ್ನು ತಪ್ಪಿಸಬೇಕು ಎಂದು ಭಾರತ ತೀವ್ರವಾಗಿ ಖಂಡಿಸಿದೆ.
