– ಟಾಪ್ ಗೋಲ್ ಸ್ಕೋರರ್; ಮೆಸ್ಸಿ ಹಿಂದಿಕ್ಕಿದ ಎಂಬಾಪೆ
ನ್ಯೂಯಾರ್ಕ್: 2026 ರ FIFA ವಿಶ್ವಕಪ್‌ನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ 6-4 ಅಂತರದಿಂದ ಫ್ರಾನ್ಸ್ (France vs England) ಅನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಒಟ್ಟು ದಾಖಲೆಯ 10 ಗೋಲ್‌ಗಳು ಹರಿದುಬಂದಿದ್ದು, ಫುಟ್‌ಬಾಲ್ ಪ್ರಿಯರು ಥ್ರಿಲ್ ಆಗಿದ್ದಾರೆ.
ಮ್ಯಾಚ್‌ನ ಆರಂಭದಲ್ಲೇ ಇಂಗ್ಲೆಂಡ್ ಅಬ್ಬರಿಸಿತು. ಬುಕಾಯೊ ಸಾಕಾ ಎರಡು ಗೋಲುಗಳು ಮತ್ತು ಡೆಕ್ಲಾನ್ ರೈಸ್ ಮತ್ತು ಎಜ್ರಿ ಕೊನ್ಸಾ ತಲಾ ಒಂದು ಗೋಲುಗಳೊಂದಿಗೆ ಇಂಗ್ಲೆಂಡ್ ಅರ್ಧಾವಧಿಯಲ್ಲಿ 4-0 ಮುನ್ನಡೆ ಸಾಧಿಸಿತು. ಫ್ರಾನ್ಸ್ ಅದ್ಭುತ ಪುನರಾಗಮನವನ್ನು ಪ್ರದರ್ಶಿಸಿತು. ಕೈಲಿಯನ್ ಎಂಬಾಪೆ (Kylian Mbappe) ಎರಡು ಗೋಲುಗಳು ಮತ್ತು ಬ್ರಾಡ್ಲಿ ಬಾರ್ಕೋಲಾ ಒಂದು ಗೋಲುಗಳಿಂದ ಉಭಯ ತಂಡಗಳ ಅಂತರ 4-3 ಕ್ಕೆ ಇಳಿಸಿತು. ಇದನ್ನೂ ಓದಿ: 1 ಟಿಕೆಟ್ ಬೆಲೆ 27 ಲಕ್ಷ – ಎಲ್ಲಾ ದಾಖಲೆ ಉಡೀಸ್ ಮಾಡಿದ ಫಿಫಾ ವಿಶ್ವಕಪ್ ಫೈನಲ್ ಪಂದ್ಯ
ಈ ನಡುವೆ, ಬುಕಾಯೊ ಸಾಕಾ ಪೆನಾಲ್ಟಿ ಗೋಲಿನೊಂದಿಗೆ ತನ್ನ ಹ್ಯಾಟ್ರಿಕ್ ಅನ್ನು ಪೂರ್ಣಗೊಳಿಸಿದರು. ಔಸ್ಮಾನೆ ಡೆಂಬೆಲೆ ಮತ್ತೊಮ್ಮೆ ಒಂದು ಗೋಲು ಗಳಿಸಿದರು. ಅಂತಿಮವಾಗಿ ಜೂಡ್ ಬೆಲ್ಲಿಂಗ್ಹ್ಯಾಮ್ ಇಂಗ್ಲೆಂಡ್‌ನ ಆರನೇ ಗೋಲು ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಫಿಫಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ದಾಖಲೆಗಳು ಉಡೀಸ್
ಒಂದೇ ಪಂದ್ಯದಲ್ಲಿ 10 ಗೋಲುಗಳು ಬಂದಿದ್ದರಿಂದ ಹಲವಾರು ದಾಖಲೆಗಳು ಮುರಿದುಬಿದ್ದವು. ವಿಶ್ವಕಪ್ ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇಆಫ್‌ನಲ್ಲಿ ದಾಖಲಾದ ಅತಿ ಹೆಚ್ಚು ಗೋಲುಗಳು ಎಂಬ ದಾಖಲೆಯನ್ನು ಈ ಪಂದ್ಯ ಬರೆದಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ಫೈನಲ್ ಬಳಿಕ ಲೆಜೆಂಡ್ ಮೆಸ್ಸಿ ನಿವೃತ್ತಿ..?
ಮೆಸ್ಸಿ ಹಿಂದಿಕ್ಕಿದ ಎಂಬಾಪೆ
ಕೈಲಿಯನ್ ಎಂಬಾಪೆ ಸಾರ್ವಕಾಲಿಕ ವಿಶ್ವಕಪ್ ಅಗ್ರ ಗೋಲ್ ಸ್ಕೋರರ್‌ಗಳ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿಯನ್ನು (Lionel Messi) ಅವರನ್ನು ಹಿಂದಿಕ್ಕಿದ್ದಾರೆ. ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಅಸಿಸ್ಟ್‌ಗಳಿಗಾಗಿ ಪೀಲೆ ಅವರ ದಾಖಲೆಯನ್ನು ಮೈಕೆಲ್ ಒಲಿಸ್ ಮುರಿದರು. ಇತ್ತ ಜೂಡ್ ಬೆಲ್ಲಿಂಗ್‌ಹ್ಯಾಮ್ ಒಂದೇ ವಿಶ್ವಕಪ್‌ನಲ್ಲಿ ಇಂಗ್ಲಿಷ್ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ಗೋಲುಗಳ ದಾಖಲೆಯನ್ನು ಬರೆದಿದ್ದಾರೆ.
