ಕಾರವಾರ: ಜಾತಿ-ಧರ್ಮ ಎನ್ನುವವರಿಗೆ ಮಂತ್ರಿಗಿರಿ ನಿಮ್ಮಪ್ಪನ ಆಸ್ತಿಯಲ್ಲ. ಜಾತಿ ಆಧಾರದಲ್ಲಿ ಕೆಲಸಕ್ಕೆ ಬಾರದವರಿಗೆ ಕೊಡಬಾರದು. ಅಧಿಕಾರಕ್ಕೆ ಬಂದಾಗಲೆಲ್ಲ ಒಂದೇ ಮುಖಕ್ಕೆ ಸಚಿವ ಸ್ಥಾನ ನೀಡಲಾಗುತ್ತಿದೆ. ಇದರ ಬದಲು ಹೊಸಮುಖಗಳಿಗೆ ಅವಕಾಶ ನೀಡಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ (V.S.Ugrappa) ಸರ್ಕಾರಕ್ಕೆ ಸಲಹೆ ನೀಡಿದರು.
ಇಂದು ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವಾಗ ಪ್ರಾಧಾನ್ಯತೆ ಜಾತಿ ಮತ್ತು ಧರ್ಮ ಬರಬಾರದು. ಜಾತಿ ಆಧಾರದಲ್ಲಿ ಕೆಲಸಕ್ಕೆ ಬಾರದವರಿಗೆ ಸಚಿವ ಸ್ಥಾನ ಕೊಡಬಾರದು. ನೂರಾರು ಜನ ಅಯೋಗ್ಯರು, ಅಪ್ರಾಮಾಣಿಕರು, ಕ್ರಿಮಿನಲ್ಸ್, ಭ್ರಷ್ಟರು ಮಂತ್ರಿಗಳಾಗುವ ಬದಲು ನಾಲ್ಕಾರು ಜನ ವಿದ್ಯಾವಂತರು, ದೇಶಪ್ರೇಮಿಗಳು, ವಿಚಾರವಂತರು ಮಂತ್ರಿಗಳಾದರೆ ಆ ದೇಶ ಉದ್ಧಾರ ಆಗುತ್ತದೆ. ಜಾತಿ, ಧರ್ಮ ಎನ್ನುವವರಿಗೆ ಮಂತ್ರಿಗಿರಿ ನಿಮ್ಮಪ್ಪನ ಆಸ್ತಿ ಅಲ್ಲ. ಈ ಆಸ್ತಿ ಪಕ್ಷದ್ದು, ಕಾರ್ಯಕರ್ತರದ್ದು, ಜನರದ್ದು. ಈ ರಾಜ್ಯ ಉಳುಸುವಂತಹ ದಮ್ಮು, ಗತ್ತು, ಬದ್ಧತೆ ಯಾರಿಗೆ ಇದೆಯೋ, ಅಂಥವರನ್ನ ಗುರುತಿಸಿ ಮಂತ್ರಿ ಮಾಡುವ ಬದ್ಧತೆ ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಇದೆ ಎಂದು ಹೇಳಿದರು. ಇದನ್ನೂ ಓದಿ: ಒಮನ್ ಕರಾವಳಿಯಲ್ಲಿ ʻಗ್ಯಾಲಕ್ಸಿʼ ಮೇಲೆ ದಾಳಿ – ಓರ್ವ ಭಾರತೀಯ ಮಿಸ್ಸಿಂಗ್, 10 ಜನರ ರಕ್ಷಣೆ
ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಅದೇ ಮುಖಗಳಿಗೆ ಸಚಿವ ಸ್ಥಾನ ನೀಡುತ್ತಾರೆ. ಅದೇ ಮುಖಗಳಿಗೆ ಅಧಿಕಾರ ಕೊಟ್ಟರೇ ಏನು ಆಗುತ್ತೆ? ಹೊಸ ಮುಖಗಳಿಗೆ ಅವಕಾಶ ಕೊಡಬೇಕು. ಹೊಸ ಮುಖಗಳಿಗೆ ಅವಕಾಶ ನೀಡಿ ಪಕ್ಷ ಸಂಘಟನೆ ಮಾಡಬೇಕು. ಹತ್ತು ವರ್ಷ, ಹದಿನೈದು ವರ್ಷ ಸಚಿವ ಸ್ಥಾನವನ್ನು ಅನುಭವಿಸಿದ್ದಾರೆ. ಟಾಪ್ ವ್ಯಕ್ತಿಗಳನ್ನ ಬಿಟ್ಟು ಮಿಕ್ಕವರನ್ನ ಪಕ್ಷದ ಸಂಘಟನೆಗೆ ಕಳುಹಿಸಬೇಕು. ಯಾರು ಸಕ್ರಿಯವಾಗಿ ಕೆಲಸ ಮಾಡುತಿದ್ದಾರೆ. ಯುವಕರು, ಅನುಭವಸ್ಥರು ಅಂತಹವರಿಗೆ ಸಚಿವ ಸ್ಥಾನ ನೀಡಿದರೆ ಪಕ್ಷದ ಇಮೇಜ್ ಮತ್ತಷ್ಟು ಎತ್ತರಕ್ಕೆ ಹೋಗುತ್ತದೆ ಎಂದರು.
ರಾಜ್ಯದಲ್ಲಿ ಬಾಂಗ್ಲಾದೇಶಿಯರಿಗೆ ಕಾಂಗ್ರೆಸ್ ಮಣೆ ಹಾಕುವ ವಿಚಾರ ಕುರಿತು ಮಾತನಾಡಿದ ಅವರು, ಭಾರತದ ಸಿಟಿಜನ್ ಆಗದವರಿಗೆ ಯಾವುದೇ ಕಾರಣಕ್ಕೂ ನಮ್ಮ ದೇಶದಲ್ಲಿ ಅವಕಾಶ ಇಲ್ಲ. ಇದು ಕಾಂಗ್ರೆಸ್ ನಿಲುವು. ಬಾಂಗ್ಲಾದಿಂದ ವೆಸ್ಟ್ ಬೆಂಗಾಲ್, ಅಸ್ಸಾಂಗೆ ಬಂದಿದ್ದರೆ ಅದಕ್ಕೆ ನೇರ ಹೊಣೆ ಕೇಂದ್ರ ಸರ್ಕಾರ. ಬಿಜೆಪಿಯವರಿಗೆ ರಾಜಕಾರಣದ ಎಬಿಸಿಡಿ ಗೊತ್ತಿಲ್ಲ. ಬಿಜೆಪಿ ನಾಯಕರು ಯಾವುದೇ ಇಷ್ಯು ಮೇಲೆ ಲಾಜಿಕಲ್ ಎಂಡಿಂಗ್ ಮಾಡಿಲ್ಲ. ಯಾಕಂದ್ರೆ ನಾವು ಯಾವುದೇ ಇಷ್ಯು ಮಾಡಿಲ್ಲ. ಜಾತಿ ಕಾರಣಕ್ಕೆ ನಮ್ಮ ಸರ್ಕಾರ ಯಾವುದೇ ಸೌಲಭ್ಯ ನೀಡೋದಿಲ್ಲ ಎಂದ ಉಗ್ರಪ್ಪ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮೈಸೂರಿನ ನೆಚ್ಚಿನ ತೋಟದಲ್ಲೇ ಎಸ್. ಜಾನಕಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ
