ಬೆಂಗಳೂರು: 2000 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಐದು ನಗರ ಪಾಲಿಕೆಯ ಆಂತರಿಕ ರಸ್ತೆಗಳ ಮರು ಡಾಂಬರೀಕರಣಕ್ಕೆ ಚಾಲನೆ ನೀಡಲಾಗುವುದು ಎಂದು ಬೆಂಗಳೂರು (Bengaluru) ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ (Krishna Byregowda) ತಿಳಿಸಿದ್ದಾರೆ.
ಜಿಬಿಎ (GBA) ಕೇಂದ್ರ ಕಚೇರಿಯಲ್ಲಿ ಸಭೆ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಐದು ವಲಯ ಆಯುಕ್ತರು ಮತ್ತು ಕಸ ನಿರ್ವಹಣೆ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಬೆಂಗಳೂರಿನಲ್ಲಿ ರಸ್ತೆ ಸುಧಾರಣೆ ಮಾಡಬೇಕು ಅನ್ನೋ ಉದ್ದೇಶವಿದೆ. ಐದು ನಗರ ಪಾಲಿಕೆಯ ಆಂತರಿಕ ರಸ್ತೆಗಳನ್ನ ಸರಿ ಮಾಡಬೇಕು. ಎಲ್ಲೆಲ್ಲಿ ಆಂತರಿಕ ರಸ್ತೆಗಳು ಹಾಳಾಗಿದೆಯೋ ಅವುಗಳನ್ನ ಸರಿ ಮಾಡಲು ವಿಶೇಷವಾಗಿ 2000 ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಆದೇಶವನ್ನ ಹೊರಡಿಸಿದೆ. ಮೊದಲು ಹದಗೆಟ್ಟಿರೋ ರಸ್ತೆಯನ್ನ ಗುರುತಿಸಿ, ನಂತರ ಅದಕ್ಕೆ ತಗಲುವ ವೆಚ್ಚವನ್ನ ಅಂದಾಜಿಸಬೇಕು. ಬಳಿಕ ಅಲ್ಪಾವಧಿ ಟೆಂಡರ್ ನೀಡಬೇಕು. ಶೀಘ್ರದಲ್ಲೇ ಕಾಮಗಾರಿ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ:ಒಪ್ಪಂ ದ ಉಲ್ಲಂಘಿಸಿದರೆ ಮತ್ತೆ ಬಾಂಬ್ ದಾಳಿ – ಶಾಂತಿ ಒಪ್ಪಂದದ ಬೆನ್ನಲ್ಲೇ ಟ್ರಂಪ್ ವಾರ್ನಿಂಗ್

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದಿಂದ ಕೈಗೊಂಡಿರುವ ಕ್ರಮಗಳ ಕುರಿತು ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರು ಇಂದು ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತಾದ ರಮೇಶ್… pic.twitter.com/j9ccNn1p8V
— Greater Bengaluru Authority (@GBA_office) June 18, 2026
ವಾರ್ಡ್ ರಸ್ತೆಗಳ ಬಗ್ಗೆ ಸರ್ಕಾರ ಇದಕ್ಕೆ ವಿಶೇಷವಾದ ಅನುದಾನ ನೀಡಿದೆ. ಇದಕ್ಕೆ ಜನರ ಸಹಕಾರ ಬಹಳ ಮುಖ್ಯ. ಜನರು ಸಹಕಾರ ನೀಡಿದ್ರೇ ಕಸದ ಸಮಸ್ಯೆ ಕಡಿಮೆ ಆಗಲಿದೆ. ನಿಮ್ಮ ಮನೆಯ ಬಳಿ ಕಸದ ಗಾಡಿ ಬರದೇ ಇದ್ರೇ ಅದನ್ನ ನಮ್ಮ ಗಮನಕ್ಕೆ ತನ್ನಿ. ಕಸದ ವಾಹನ ಬರುವಂತೆ ಮಾಡೋದು ನಮ್ಮ ಕರ್ತವ್ಯ. ಅದನ್ನ ಮಾಡುತ್ತೇವೆ. ಕಸದ ಗಾಡಿ ಬಂದ್ರು ರಸ್ತೆ ಬದಿಗೆ ಹಾಕಿದ್ರೇ ಬೆಂಗಳೂರಿನ ಆರೋಗ್ಯಕ್ಕೂ ಮಾರಕ. ನಾವು ನಮ್ಮ ಸಿಸ್ಟಮ್‌ಅನ್ನ ಬದಲಾವಣೆ ಮಾಡಲು ಸಿದ್ದರಾಗಿದ್ದೇವೆ. ರಸ್ತೆಗೆ ಕಸ ಹಾಕಿದ್ರೇ ಅದನ್ನ ತೆಗೆಯೋದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಜನರು ನಮಗೆ ಸಹಕಾರ ಕೊಡಿ. ನಾವು ನಮ್ಮ ಇಲಾಖೆಯ ಸುಧಾರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ

ಬರೋ ದಿನಗಳಲ್ಲಿ ನಾನು ಕೂಡ ಫೀಲ್ಡ್ಗೆ ಹೋಗುತ್ತೇನೆ. ಆಗ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತೇವೆ. ಜನರು ಕೂಡ ಕಸವನ್ನ ರಸ್ತೆಗೆ ತಂದು ಹಾಕೋದನ್ನ ನಿಲ್ಲಿಸಬೇಕು. ನಮ್ಮ ಸಿಬ್ಬಂದಿ ಬೆಳಗ್ಗೆ ಹೋಗಿ ಕಸ ತೆಗೆಯುತ್ತಾರೆ. ಮಧ್ಯಾಹ್ನದ ವೇಳೆಗೆ ಮತ್ತೆ ಕಸ ತುಂಬಿರುತ್ತೆ. ಶೇ.10ರಷ್ಟು ಜನ ಕಸವನ್ನು ತಂದು ಹಾಕ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಭೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಸೂಚನೆ:
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ಘನತ್ಯಾಜ್ಯ ನಿರ್ವಹಣಾ ಘಟಕದ ಮುಖ್ಯಸ್ಥ ಕರಿಗೌಡ, ಐದು ನಗರಪಾಲಿಕೆಗಳ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು. ಈ ವೇಳೆ ನಗರದಲ್ಲಿ ಇದುವರೆಗೆ ಕಸದ ಸಮಸ್ಯೆ ಬಗ್ಗೆ ಕೈಗೊಂಡಿರುವ ಕ್ರಮಗಳು ಹಾಗೂ ಹೊಸದಾಗಿ ಟೆಂಡರ್ ಕರೆದಿರುವ ಬಗ್ಗೆ ಚರ್ಚೆ ನಡೆಸಲಾಯಿತು.ಇದನ್ನೂ ಓದಿ: ಟೋಲ್ ವಿರೋಧಿ ಜೂ.23 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ

ಪೊಲೀಸರು ಕೊಟ್ಟ ಬ್ಲಾಕ್ ಸ್ವಾಟ್‌ಗಳನ್ನು ಕೂಡಲೇ ಕ್ಲಿಯರ್ ಮಾಡಬೇಕು. ನಗರದ ಕಸದ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿ, ಬಳಿಕ ಮುಂದಿನ ದಿನಗಳಲ್ಲಿ ಕಸದ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಿ. ಕೆಲವು ಕಡೆ ಕಸದ ಆಟೋ ಹೋಗುತ್ತಿಲ್ಲ ಎನ್ನುವ ಆರೋಪವಿದೆ. ನಗರಪಾಲಿಕೆ ವತಿಯಿಂದ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆಗೆ ಆಟೋ ಖರೀದಿಸಿ. ಹೈಕೋರ್ಟ್ ನಿರ್ದೆಶನದಂತೆ ಘನತ್ಯಾಜ್ಯ ಘಟಕದಿಂದ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸಬೇಕು. ಇದಕ್ಕಾಗಿ ಪೌರಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು. ಜೊತೆಗೆ ಎಲ್ಲೆಂದರಲ್ಲಿ ಕಸ ಎಸೆಯುವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಿ. ಮಾರ್ಷಲ್‌ಗಳನ್ನು ಬಳಕೆ ಮಾಡಿಕೊಂಡು ದಂಡ ವಿಧಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಬೊಲೆರೋ – 7 ಮಂದಿ ಸ್ಥಳದಲ್ಲೇ ಸಾವು
