ʼದಿಲ್ ತೊ ಪಾಗಲ್ ಹೈʼ (Dil To Pagal Hai) ಇದು ಬಾಲಿವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾ. 1997ರಲ್ಲಿ ತೆರೆಕಂಡಿದ್ದ ಈ ಚಿತ್ರ ಟ್ರಯಾಂಗಲ್ ಲವ್‌ಸ್ಟೋರಿ ಕಥೆಯನ್ನೊಳಗೊಂಡ ಮ್ಯೂಸಿಕಲ್ ಹಿಟ್ ಸಿನಿಮಾ. ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಹಾಗೂ ಕರೀಷ್ಮಾ ಕಪೂರ್ (Karisma Kapoor) ನಟಿಸಿದ್ದ ಚಿತ್ರ. ಈ ಚಿತ್ರದಲ್ಲಿ ಮೂವರ ಅಭಿನಯ ಚಾತುರ್ಯ, ಡಾನ್ಸ್ ಮೂಮೆಂಟ್ಸ್‌ಗಳನ್ನು ನೋಡುವುದು ಈಗಲೂ 90ರ ದಶಕದವರಿಗೆ ಇಷ್ಟ. ಇದೀಗ ಈ ಚಿತ್ರದ ಬಗ್ಗೆ ಒಂದು ವಿಚಿತ್ರ ಮಾಹಿತಿಯನ್ನ ಕರೀಷ್ಮಾ ಕಪೂರ್ ಹಂಚಿಕೊಂಡಿದ್ದಾರೆ. ತಮಗೆ ಕೊಟ್ಟ ಪಾತ್ರದಲ್ಲಿ ಯಶಸ್ವಿಯಾಗಿ ಮಿಂಚಿದ್ದ ಕರೀಷ್ಮಾ ಕಪೂರ್‌ಗೆ ಈ ಚಿತ್ರದಲ್ಲಿ ಅಭಿನಯಿಸೋದು ಸವಾಲಿನ ಸಂಗತಿಯಾಗಿತ್ತು ಎಂಬ ವಿಚಾರ ಈ ಮೂಲಕ ರಿವೀಲ್ ಆಗಿದೆ.
ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಅದಾಗಲೇ ಫಿಕ್ಸ್ ಆಗಿದ್ದ `ದಿಲ್ ತೋ ಪಾಗಲ್ ಹೈ’ ಚಿತ್ರದಲ್ಲಿ ಕರೀಷ್ಮಾ ಪಾತ್ರಕ್ಕೆ ಹುಡುಕಾಟ ನಡೆದಾಗ ಆಗಿನ ಕಾಲದ ಅನೇಕ ನಾಯಕಿಯರು ಮಾಧುರಿ ದೀಕ್ಷಿತ್ ಸಮಾನಕ್ಕೆ ಡಾನ್ಸ್ ಮಾಡುವ ಪಾತ್ರದಲ್ಲಿ ನಟಿಸೋಕೆ ಧೈರ್ಯ ಮಾಡಿರಲಿಲ್ಲವಂತೆ. ಮಾಧುರಿ ಎದುರು ನೃತ್ಯ ಮಾಡ್ಬೇಕಲ್ಲ ಅನ್ನೋ ಕಾರಣಕ್ಕೆ ‘ದಿಲ್ ತೋ ಪಾಗಲ್ ಹೈ’ ಚಿತ್ರವನ್ನ ಆಗಿನ ಕಾಲದ ಖ್ಯಾತ ನಟಿಯರು ತಿರಸ್ಕಾರ ಮಾಡಿದ್ದರಂತೆ. ಹೀಗೆ ಎಲ್ಲರೂ ತಿರಸ್ಕರಿಸಿದ್ದ ಪಾತ್ರ ಕೊನೆಗೆ ಕರೀಷ್ಮಾ ಕಪೂರ್ ಪಾಲಾಗುತ್ತೆ. ಈ ವಿಚಾರವನ್ನ ಕರೀಷ್ಮಾ ಕಪೂರ್ ಇಂಡಿಯಾ ಟುಡೇ ಜೊತೆಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮಾಧುರಿ ದೀಕ್ಷಿತ್ ಜೊತೆ ನೃತ್ಯ ಮುಖಾಮುಖಿಯಲ್ಲಿ ಸ್ಪರ್ಧಿಸಲು ಬಯಸಲಿಲ್ಲ, ಮಾಧುರಿ ಅತ್ಯುತ್ತಮ ಡಾನ್ಸಿಂಗ್ ಪ್ರತಿಭೆ. ಹೀಗಿರುವಾಗ ನಾನು ಅವಕಾಶ ಬಳಸಿಕೊಂಡೆ ಎಂದಿದ್ದಾರೆ ಕರೀಷ್ಮಾ ಕಪೂರ್. ಈ ಚಿತ್ರದ ನಿಶಾ ಪಾತ್ರದಲ್ಲಿ ಕರೀಷ್ಮಾಕಪೂರ್ ಉತ್ತಮ ಅಭಿನಯ ಹಾಗೂ ಡಾನ್ಸ್ ಮಾಡಿದ್ದರು.
