ಬೆಂಗಳೂರು: ಕೇರಳ ವಿಧಾನಸಭಾ ಚುನಾವಣಾ(Kerala Election) ಪ್ರಚಾರ ಭಾಷಣದಲ್ಲಿ ಗುಜರಾತಿಗಳು ಅನಕ್ಷರಸ್ಥರು (People illiterate in Gujarat) ಎಂಬ ತಮ್ಮ ಹೇಳಿಕೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ಇತ್ತೀಚೆಗೆ ಕೇರಳದಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ನಾನು ಮಾಡಿದ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ. ಹೀಗಿದ್ದರೂ ಈ ಹೇಳಿಕೆಗೆ ನನ್ನ ಪ್ರಾಮಾಣಿಕ ವಿಷಾದವನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಗುಜರಾತ್ ಜನರ ಬಗ್ಗೆ ನನಗೆ ಯಾವಾಗಲೂ ಗೌರವವಿದೆ ಮತ್ತು ಮುಂದೆಯೂ ಗೌರವ ಇರುತ್ತದೆ ಎಂದು ಬರೆದಿದ್ದಾರೆ.
Some remarks of mine in a recent election speech in Kerala are being deliberately misinterpreted. Even so, I express my sincere regret. It was never my intention to hurt the sentiments of the people of Gujarat for whom I have always had and will continue to have the highest of…
— Mallikarjun Kharge (@kharge) April 8, 2026
ಖರ್ಗೆ ಹೇಳಿದ್ದೇನು?
ಏಪ್ರಿಲ್ 5, 2026 ರಂದು ಕೇರಳದ ಇಡುಕ್ಕಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: RSS, BJP ಕಾರ್ಯಕರ್ತರನ್ನು ಕೊಲ್ಲಲು ಮುಸ್ಲಿಮರಿಗೆ ಮಲ್ಲಿಕಾರ್ಜುನ ಖರ್ಗೆ ಕರೆ ಆರೋಪ – ಬೆಂಗ್ಳೂರಲ್ಲಿ ದೂರು ದಾಖಲು
ಈ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ಗುಜರಾತ್ ಜನರನ್ನು ಅನಕ್ಷರಸ್ಥರು ಎಂದು ಕರೆಯುವ ಮೂಲಕ ಖರ್ಗೆ ಅವರು ಇಡೀ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿತ್ತು.
ಕೇರಳದ ಸಾಕ್ಷರತೆಯ ಪ್ರಮಾಣ ಹೆಚ್ಚಿರುವುದನ್ನು ಶ್ಲಾಘಿಸುವ ಭರದಲ್ಲಿ ಗುಜರಾತಿಗಳನ್ನು ಅನಕ್ಷರಸ್ಥರು ಎಂದು ಹೋಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

