-ಮಾ.18ರಿಂಂದ 20ರವರೆಗೆ ಬಸ್‌ಗಳ ವ್ಯವಸ್ಥೆ
ಬೆಂಗಳೂರು: ಯಗಾದಿ (Ugadi) ಹಾಗೂ ರಂಜಾನ್ (Ramdan) ಹಬ್ಬ ಒಟ್ಟಿಗೆ ಬಂದ ಹಿನ್ನೆಲೆ ಕೆಎಸ್‌ಆರ್‌ಟಿಸಿ (KSRTC) ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದು, ವಿಶೇಷ ರಿಯಾಯಿತಿಯನ್ನು ಘೋಷಿಸಿದೆ.
ಮಾ.18, 19 ಹಾಗೂ 20ರಂದು ಬೆಂಗಳೂರಿನಿಂದ ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಗೆ ಒಟ್ಟು 2,000 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಜೊತೆಗೆ ಹಬ್ಬದ ಹಿನ್ನೆಲೆ ವಿಶೇಷ ರಿಯಾಯಿತಿಯನ್ನು ನೀಡಿದೆ. ಇದನ್ನೂ ಓದಿ: ಕಡಿವಾಣ ಹಾಕಬೇಕಿದ್ದ ಪೊಲೀಸರೇ ಅಕ್ರಮಗಳಿಗೆ ಬೆಂಗಾವಲು – ಸಿಬ್ಬಂದಿ ಮೇಲೆ ವರ್ಗಾವಣೆ ತೂಗುಗತ್ತಿ
ಬಸ್ ಬುಕ್ ಮಾಡುವಾಗ ನಾಲ್ಕು ಹಾಗೂ ಹೆಚ್ಚಿನ ಟಿಕೆಟ್ ಬುಕ್ ಮಾಡಿದರೆ 5% ರಿಯಾಯಿತಿ ನೀಡಲಾಗಿದೆ. ಜೊತೆಗೆ ಹೋಗುವ ಮತ್ತು ಬರುವ ಟಿಕೆಟ್ ಒಟ್ಟಾಗಿ ಬುಕ್ ಮಾಡಿದರೆ 10% ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದೆ.

