ರಾಯಚೂರು: ಜಿಲ್ಲೆಯ ಹಲವೆಡೆ ಏಕಾಏಕಿ ಜೋರು ಮಳೆ ಸುರಿದಿದ್ದು, ಬಿಸಿಲಿನಿಂದ ತತ್ತರಿಸಿದ್ದ ಬಿಸಿಲನಾಡಿನ ಜನರಿಗೆ ತಂಪೆರೆದಂತಾಗಿದೆ.
ಜಿಲ್ಲೆಯ ಕವಿತಾಳ, ಪಾಮನಕಲ್ಲೂರು, ವಟಗಲ್, ಅಮಿನಗಡ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಗುಡುಗು, ಮಿಂಚು ಸಹಿತ ಜೋರಾಗಿ ಮಳೆ ಸುರಿದಿದ್ದು, ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ತಂಪು ನೀಡಿದೆ. ಆಲಿಕಲ್ಲು ಮಳೆಯಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಭಾರೀ ಮಳೆ – ರಸ್ತೆಗುರುಳಿದ ಬೃಹತ್ ಮರ, 5 ಕಿಮೀ ಟ್ರಾಫಿಕ್ ಜಾಮ್!
ಮಧ್ಯಾಹ್ನ ವೇಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆರಾಯ ಅಬ್ಬರಿಸಿದ್ದಾನೆ. ಏಕಾಏಕಿ ಮಳೆ ಸುರಿದಿದ್ದರಿಂದ ಬಸ್ ಸ್ಟಾಪ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಕೆಲಕಾಲ ಜನರು ಪರದಾಡುವಂತಾಗಿತ್ತು.

